ವಿದೇಶದಲ್ಲಿಮತ್ತೊಬ್ಬ ಕನ್ನಡಿಗ ಮೃತವಾಗಿದ್ದಾನೆ.ಇತ್ತೀಚೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಸಾವನ್ನಪ್ಪುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ 31 ವರ್ಷದ ಯುವಕರೊಬ್ಬನ ಮೃತದೇಹ ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ನಿವಾಸದಲ್ಲಿ ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿಯಾಗಿದ್ದ ಸಂಜೋ ಸುನಿಲ್ ಮೃತಪಟ್ಟ ಯುವಕ. ಕೇವಲ 28 ದಿನಗಳ ಹಿಂದೆಯಷ್ಟೇ ಡಬ್ಲಿನ್‌ಗೆ ತೆರಳಿದ್ದರು.ಐರ್ಲೆಂಡ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ತಮ್ಮ ಪತ್ನಿ ಲಿಷ್ಮಾ ಅವರೊಂದಿಗೆ ಸಂಜೋ ವಾಸವಾಗಿದ್ದರು.

ಎರಡು ದಿನಗಳ ಹಿಂದೆ ಡಬ್ಲಿನ್‌ನ ನಿವಾಸದಲ್ಲಿ ಸುನಿಲ್ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆಯ ನಂತರ ಪತ್ನಿ ಲಿಷ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಕುತ್ತುಪ್ಪಾಡಿಯ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಸಂಜೋ ಅವರ ಮೃತದೇಹವನ್ನು ಕಡಬದ ಸ್ವಗ್ರಾಮಕ್ಕೆ ತರಲು ಕುಟುಂಬ ನಿರ್ಧರಿಸಿದೆ. ಡಬ್ಲಿನ್‌ನಲ್ಲಿ ನಮಗೆ ಬೇರೆ ಯಾವುದೇ ಸಂಬಂಧಿಕರಿಲ್ಲ, ಹಾಗಾಗಿ ಘಟನೆಯ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ. ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ಮೃತದೇಹವನ್ನು ಭಾರತಕ್ಕೆ ತರಲು ಸುಮಾರು 20 ಲಕ್ಷ ರೂಪಾಯಿಗಳು ಖರ್ಚಾಗುತ್ತದೆ ಎಂದು ತಿಳಿದು ಬಂದಿದ್ದು, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ವಿಚಾರವಾಗಿ ಭಾರತೀಯ ರಾಜಭಾರಿ ಕಛೇರಿಯನ್ನು ಸಂಪರ್ಕಿಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಸಾಂಜೋ ಸುನಿಲ್ ಸಾವಿನ ಕುರಿತು ಡಬ್ಲಿನ್ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.






