ವಿಚ್ಛೇದನದ ಬಳಿಕ ಒಂಟಿಯಾಗಿದ್ದ ತೆಲುಗು ನಟಿ ಸಮಂತಾ ರುತ್ ಪ್ರಭು ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ಇಂದು ವಿವಾಹವಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಕೊಯಿಮುತ್ತೂರಿನ ಈಶಾ ಯೋಗ ಕೇಂದ್ರದ ಒಳಗಿನ ಲಿಂಗ ಭೈರವಿ ದೇವಸ್ಥಾನದಲ್ಲಿ ಇಂದು ಮುಂಜಾನೆ ಬ್ರಾಹ್ಮಿ ಮೂಹರ್ತದಲ್ಲಿ ರಾಜ್ ನಿಡಿಮೋರು ಹಾಗೂ ಸಮಂತಾ ರುತ್ ಪ್ರಭು ಮದುವೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಕೆಲ ಫೋಟೋಗಳು ಕೂಡ ವೈರಲ್ ಆಗುತ್ತಿದೆ. 30 ಅತಿಥಿಗಳು ಹಾಗೂ ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ನಟ ನಾಗ ಚೈತನ್ಯರಿಂದ ವಿಚ್ಛೇದನದ ಬಳಿಕ ನಟಿ ಸಮಂತಾ ರುತ್ ಪ್ರಭು, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆ ಪ್ರೀತಿಯಲ್ಲಿದ್ದರು. ಅನೇಕ ಬಾರಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.













