ನಟಿ ಅಮೂಲ್ಯ ಪತಿ ಜಗದೀಶ್ ಬಿಜೆಪಿ ಮೂಲಕ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ನಟಿ ಅಮೂಲ್ಯ ಮಾವ, ಪತಿ ಇಬ್ಬರು ಸಹ ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಈಗ ಜಗದೀಶ್ ಆರ್. ಚಂದ್ರ ಅವರಿಗೆ ಮಹತ್ವದ ಹುದ್ದೆ ನೀಡುವ ಮೂಲಕ ಪಕ್ಷ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಿದೆ.

ಬೆಂಗಳೂರು ಕೇಂದ್ರ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷರಾಗಿ ಜಗದೀಶ್ ಆರ್.ಚಂದ್ರ ನೇಮಕ ಮಾಡಲಾಗಿದೆ.ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಿದೆ. ಈ ಕುರಿತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಎ.ಆರ್.ಸಪ್ತಗಿರಿ ಗೌಡ ಆದೇಶವನ್ನು ಹೊರಡಿಸಿದ್ದಾರೆ.
ವಿವಿಧ ಮೋರ್ಚಾಗಳ ಅಧ್ಯಕ್ಷರು
- ಯುವ ಮೋರ್ಚಾ – ಜಗದೀಶ್ ಆರ್. ಚಂದ್ರ
- ಮಹಿಳಾ ಮೋರ್ಚಾ – ನೀತಾ ಎಂ.ಎನ್.ರೆಡ್ಡಿ
- ಎಸ್.ಸಿ.ಮೋರ್ಚಾ – ಮುನಿಯಲ್ಲಪ್ಪ
- ಹಿಂದುಳಿದ ವರ್ಗಗಳ ಮೋರ್ಚಾ – ಹೆಚ್.ಆರ್.ಕೃಷ್ಣಪ್ಪ
- ಎಸ್.ಟಿ.ಮೋರ್ಚಾ – ಗಿರೀಶ್ ಕುಮಾರ್ ಬಿ.
- ರೈತ ಮೋರ್ಚಾ – ರುದ್ರಪ್ಪ ವೈ.






