• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಮೈಸೂರಿನಿಂದ ಹೊರಟಿದ್ದ ದರ್ಬಾಂಗ್‌ ಎಕ್ಸ್‌ಪ್ರೆಸ್‌ ಅಪಘಾತ..

ಕೃಷ್ಣ ಮಣಿ by ಕೃಷ್ಣ ಮಣಿ
October 12, 2024
in Uncategorized
0
ಮೈಸೂರಿನಿಂದ ಹೊರಟಿದ್ದ ದರ್ಬಾಂಗ್‌ ಎಕ್ಸ್‌ಪ್ರೆಸ್‌ ಅಪಘಾತ..
Share on WhatsAppShare on FacebookShare on Telegram

ಮೈಸೂರಿನಿಂದ ಬಿಹಾರದ ದರ್ಬಾಂಗ್‌ಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಅಪಘಾತಕ್ಕೀಡಾಗಿದೆ. ತಮಿಳುನಾಡಿನ ಕವರ್‌ಪಟೈ ಎಂಬಲ್ಲಿ ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದ್ದ, ರೈಲಿನ 3 ಬೋಗಿಗಳು ಹೊತ್ತಿ ಉರಿದಿವೆ. ಘಟನಾ ಸ್ಥಳದಲ್ಲಿ ಭರದಿಂದ ಸಾಗಿದೆ ರಕ್ಷಣಾ ಕಾರ್ಯಾಚರಣೆ.

ADVERTISEMENT

ರೈಲು ಸಂಖ್ಯೆ 12578 ಬಾಗಮತಿ ರೈಲು ಬೆಳಗ್ಗೆ 10:30ಕ್ಕೆ ಮೈಸೂರಿನಿಂದ ಹೊರಟ್ಟಿತ್ತು. ಆ ಬಳಿಕ ಬೆಂಗಳೂರು ಮಾರ್ಗವಾಗಿ ರೈಲು ತಮಿಳುನಾಡು ಕಡೆಗೆ ಹೊರಟಿತ್ತು. ರಾತ್ರಿ 8.30ರ ಸುಮಾರಿಗೆ ಕವರೈಪ್ಪೆಟ್ಟೈ ಬಳಿ ರೈಲು ಅಪಘಾತವಾಗಿದೆ ಎಂದು ದಕ್ಷಿಣ ರೇಲ್ವೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ದರ್ಬಾಂಗ್‌ ಎಕ್ಸ್‌ಪ್ರೆಸ್‌‌ ಲೂಪ್ ಲೈನನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಆಗುತ್ತಿದ್ದಂತೆ 12-13 ಬೋಗಿಗಳು ಹಳಿ ತಪ್ಪಿವೆ. ಸಾಕಷ್ಟು ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುಮಾರು 75 ಕಿ.ಮೀ ವೇಗದಲ್ಲಿ ಹೋಗುವಾಗ ಅಪಘಾತ ನಡೆದಿದೆ ಎನ್ನಲಾಗಿದೆ.

ದರ್ಬಾಂಗ್‌ ಎಕ್ಸ್‌ಪ್ರೆಸ್‌ನ ಕ್ಯಾಬಿನ್ ಕ್ರೀವ್ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅಗತ್ಯವಿರುವ ತುರ್ತು ನೆರವು ನೀಡಲಾಗಿದೆ. ಪಾರ್ಸೆಲ್ ಕೋಚ್‌ಗೆ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರಯಾಣಿಕರನ್ನ ಸಾಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಮೈಸೂರು – ದರ್ಬಾಂಗ್‌ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ನಾಲ್ಕು ಎಸಿ ಕೋಚ್‌ಗಳಿಗೆ ಹಾನಿ ಆಗಿದೆ. ತಿರುವಳ್ಳೂರಿನ ಕವರೈಪೆಟ್ಟೈ ಬಳಿ ಘಟನೆ ನಡೆದಿದ್ದು, ರೈಲಿನ ಕಿಟಕಿಗಳ ಮೂಲಕ ಕೆಲವು ಪ್ರಯಾಣಿಕರು ಹೊರ ಬಂದಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬೆಂಗಳೂರಿನಿಂದ ನಾಗಪುರಕ್ಕೆ ಹೊರಟ್ಟಿದ್ದ 45 ಮಂದಿ ಇದೇ ಟ್ರೈನ್‌ನಲ್ಲಿ ಪ್ರಯಾಣ ಮಾಡುತ್ತಿದ್ರು ಎನ್ನಲಾಗಿದೆ. ಚೆನ್ನೈನಿಂದ ಸುಮಾರು 42 ಕಿಮೀ ದೂರದಲ್ಲಿ ಅಪಘಾತ ಸಂಭವಿಸಿದೆ. ಚೆನ್ನೈ ಡಿವಿಷನ್‌ನಲ್ಲಿ ಅಪಘಾತ ನಡೆದಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮೈಸೂರು ದರ್ಬಾಂಗ್ ಎಕ್ಸ್‌ಪ್ರೆಸ್‌‌ ರೈಲು ದುರಂತ ಆಗಿರುವ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ಹೆಲ್ಪ್ ಲೈನ್ ತೆರೆದಿದೆ. ಮೈಸೂರು ಸೌತ್ ವೆಸ್ಟ್ ರೈಲ್ವೆ ಹೆಲ್ಪ್ ಲೈನ್ ಕೊಟ್ಟಿದ್ದು, ಮೈಸೂರು ಕಂಟ್ರೋಲ್ ರೂಂ ಸಂಖ್ಯೆ 97311 43981, ರೈಲ್ವೆ ಹೆಲ್ಪ್ ಡೆಸ್ಕ್ ನಂಬರ್ 0821 2422400 ಕರೆ ಮಾಡುವಂತೆ ತಿಳಿಸಲಾಗಿದೆ.

Previous Post

ದರ್ಶನ್ ಗೆ ಬೇಲ್ ಪಕ್ಕಾ ?! ನವಗ್ರಹ ರೀ-ರಿಲೀಸ್ ಹಿಂದಿನ ಮರ್ಮವೇನು ?! 

Next Post

ತಮಿಳುನಾಡಿನ ಚಿತ್ರರಂಗದ ಎರಡನೇ ಅತ್ಯುತ್ತಮ ಗಳಿಕೆ ದಾಖಲಿಸಿದ ವೆಟ್ಟೈಯಾನ್‌

Related Posts

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!
Uncategorized

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

by ಪ್ರತಿಧ್ವನಿ
April 9, 2026
0

Indian Premier League (IPL) ಪಂದ್ಯಗಳ ಅವಧಿ ಹೆಚ್ಚುತ್ತಿರುವ ಹಿನ್ನೆಲೆ, Board of Control for Cricket in India 2026ರ ಆವೃತ್ತಿಯಿಂದ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು...

Read moreDetails
ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

April 9, 2026
ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

April 9, 2026
ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

April 8, 2026
ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

April 8, 2026
Next Post
ತಮಿಳುನಾಡಿನ ಚಿತ್ರರಂಗದ ಎರಡನೇ ಅತ್ಯುತ್ತಮ ಗಳಿಕೆ ದಾಖಲಿಸಿದ ವೆಟ್ಟೈಯಾನ್‌

ತಮಿಳುನಾಡಿನ ಚಿತ್ರರಂಗದ ಎರಡನೇ ಅತ್ಯುತ್ತಮ ಗಳಿಕೆ ದಾಖಲಿಸಿದ ವೆಟ್ಟೈಯಾನ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada