ಟೋಕಿಯೋ: ಜಪಾನ್‌ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯ( Ichikawa Zoological and Botanical Gardens) ಮೃಗಾಲಯದ ಮರಿ ಕೋತಿ ಪಂಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕಳೆದ ಜುಲೈ 26, 2025ರಂದು ಜನಿಸಿದ ಮಕಾಕ್ ಜಾತಿಯ ಈ ಮರಿ ಕೋತಿ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯಿಂದ ಬೇರ್ಪಟ್ಟಿತ್ತು. ‘ಪಂಚ್-ಕುನ್’ ಎಂದು ಕರೆಯಲ್ಪಡುವ ಈ ಏಳು ತಿಂಗಳ ಮರಿ ಕೋತಿ ತಾಯಿಯ ತಿರಸ್ಕಾರದಿಂದ ಏಕಾಂಗಿಯಾಗಿತ್ತು.

ಮೃಗಾಲಯದ ಸಿಬ್ಬಂದಿ ತಿಳಿಸಿರುವಂತೆ, ಜನನ ಸಮಯದಲ್ಲಿ ಕೇವಲ 500 ಗ್ರಾಂ ತೂಕವಿದ್ದ ಪಂಚ್‌ನ್ನು ತಾಯಿ ಕೋತಿ ಒಪ್ಪಿಕೊಂಡಿರಲಿಲ್ಲ. ಇತರೆ ಕೋತಿಗಳು ಕೂಡ ಇದಕ್ಕೆ ಕಿರುಕುಳ ನೀಡುತ್ತಿದ್ದು, ದಾಳಿ ಮಾಡುವ ಘಟನೆಗಳು ನಡೆದಿವೆ. ಇದರಿಂದ ಪಂಚ್ ಒಂಟಿತನ ಅನುಭವಿಸುತ್ತಿತ್ತು.

ಪಂಚ್‌ಗೆ ಖುಷಿಯಾಗಲು ಹಾಗೂ ತಾಯಿಯ ಅಪ್ಪುಗೆ ನೀಡಲು ಸಿಬ್ಬಂದಿ ಸ್ಟಫ್ಡ್ ಒರಾಂಗುಟನ್ ಬೊಂಬೆ ನೀಡಿದ್ದರು. ಅದನ್ನೇ ತಾಯಿ ಎಂದು ಭಾವಿಸಿ ಪಂಚ್ ಆಟವಾಡುತ್ತಿತ್ತು. ಹಾಗೂ ಅದನ್ನೇ ತಾಯಿ ಎಂದುಕೊಂಡು ಅದರ ಜೊತೆಗೆ ತನ್ನ ಸಂಪೂರ್ಣ ಸಮಯವನ್ನು ಕಳೆಯುತ್ತಿದೆ. ಈ ಹಿಂದೆ ಕೆಲವೊಮ್ಮೆ ಸಿಬ್ಬಂದಿ ಒಳಗೆ ಬಂದಾಗ ಅವರ ಮೇಲೇರಿ ತನ್ನನ್ನು ಕರೆದೊಯ್ಯುವಂತೆ ವರ್ತಿಸುತ್ತಿತ್ತು. ಆದರೆ ಈಗ ಗೊಂಬೆಯ ಜೊತೆಗೆ ಹೊಂದಿಕೊಂಡ ಕಾರಣ ತಾನಿರುವಲ್ಲಿಯೇ ಖುಷಿಯಾಗಿದೆ.

ಒರಾಂಗುಟನ್ ಬೊಂಬೆ ಜೊತೆಗೆ ಇದೀಗ ಮತ್ತೊಂದು ಹೆಣ್ಣು ಕೋತಿ ಪಂಚ್‌ಗೆ ತಾಯಿ ಪ್ರೀತಿ ನೀಡುತ್ತಿದೆ. ಆ ಕೋತಿ ಪಂಚ್‌ನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯಗಳು ಕೂಡ ವೈರಲ್ ಆಗಿವೆ. ಸದ್ಯ ಪಂಚ್‌ನ್ನು ನೋಡಲು ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ.
The story of Punch, the baby macaque, in 20 seconds.pic.twitter.com/GPo33dZ0sy
— Massimo (@Rainmaker1973) February 19, 2026






