ರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಮೋದಿಯನ್ನು ಬಹಿರಂಗವಾಗಿ ಟೀಕಿಸುತ್ತಲೇ ಆಡಳಿತರೂಢ ಬಿಜೆಪಿಯನ್ನು ಪದೇ ಪದೇ ಮುಜುಗರಕ್ಕೀಡಾಗಿಸುತ್ತಿದ್ದಾರೆ. ಇದೀಗ ಮತ್ತೆ ಪ್ರಧಾನಿ ಮೋದಿಯನ್ನು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
‘ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ? ಎಂದು ಪರೋಕ್ಷವಾಗಿ ಪ್ರಧಾನಮಂತ್ರಿಯನ್ನು ಕುರಿತು ಸ್ವಾಮಿ ಟ್ವೀಟ್ ಮಾಡಿದ್ದಾರೆ.
“ದೇಶದ ಆರ್ಥಿಕ ಸಂಕಷ್ಟವನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡುವಂತೆ ಕೋರಿ ಇತ್ತೀಚಿನ ದಿನಗಳಲ್ಲಿ ನನಗೆ ಅನೇಕ ದೂರವಾಣಿ ಕರೆಗಳು ಬರುತ್ತಿವೆ. ಅಂಗಡಿ ಮಾಲೀಕರಿಂದಲೂ ಕರೆಗಳು ಬರುತ್ತಿವೆ. ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ ಎಂದು ಅವರೆಲ್ಲರ ಬಳಿ ನಾನು ಕೇಳುತ್ತೇನೆ. ಆರ್ಥಿಕತೆ ಕುರಿತು ಮೋದಿಯವರಿಗೆ 12 ಪತ್ರಗಳನ್ನು ಬರೆದಿದ್ದೇನೆ. ಅವರು ಅವುಗಳನ್ನು ಸ್ವೀಕರಿಸಿದ್ದಾರೆಯೇ ವಿನಃ ಯಾವುದೇ ಕ್ರಮ ಕೈಗೊಂಡಿಲ್ಲʼʼ ಎಂದು ಸ್ವಾಮಿ ಬರೆದಿದ್ದಾರೆ
ಸ್ವಾಮಿ ಅವರ ಟ್ವೀಟ್‌ಗಳಿಗೆ ಕೆಲವು ರಸವತ್ತಾದ ಪ್ರತಿಕ್ರಿಯೆಗಳು ಬಂದಿದ್ದು, ಟ್ವಿಟರ್ ಬಳಕೆದಾರರೊಬ್ಬರು ʼಅಂಗಡಿ ಮಾಲೀಕರ ಬಳಿ ನಿಮ್ಮ ಫೋನ್ ನಂಬರ್ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ ಬಿಜೆಪಿ ವೆಬ್‌ಸೈಟ್ ಮತ್ತು ರಾಜ್ಯಸಭೆ ಸದಸ್ಯರ ಪುಸ್ತಕದಲ್ಲಿ ನನ್ನ ಫೋನ್ ನಂಬರ್ ಇದೆ ಎಂದಿದ್ದಾರೆ.