
ಬದೌನ್:ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ನಂತರ, ಉತ್ತರ ಪ್ರದೇಶದ (Uttar Pradesh)ಬರೇಲಿಯಲ್ಲಿ ನಿರ್ಮಾಣ ಹಂತದ ಸೇತುವೆ ಅಪಘಾತದಲ್ಲಿ 4 ಪಿಡಬ್ಲ್ಯೂಡಿ (PWD)ಎಂಜಿನಿಯರ್‌ಗಳು (Engineers)ಸೇರಿದಂತೆ 5 ಜನರ ವಿರುದ್ಧ ದತಗಂಜ್‌ನ ಉಪ ತಹಸೀಲ್ದಾರ್ ಎಫ್‌ಐಆರ್ ದಾಖಲಿಸಿದ್ದಾರೆ.ಐದನೇ ಆರೋಪಿಯನ್ನು ಗೂಗಲ್ ಮ್ಯಾಪ್‌ನ ಪ್ರಾದೇಶಿಕ ವ್ಯವಸ್ಥಾಪಕ ಎಂದು ಉಲ್ಲೇಖಿಸಲಾಗಿದೆ, ಆದರೆ ಎಫ್‌ಐಆರ್‌ನಲ್ಲಿ ಹೆಸರನ್ನು ಉಲ್ಲೇಖಿಸಲಾಗಿಲ್ಲ.

ಶನಿವಾರ ರಾತ್ರಿ, ಬರೇಲಿಯ ಫರೀದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬದೌನ್-ದತಗಂಜ್ ರಸ್ತೆಯ ಮುಡಾ ಗ್ರಾಮದ ನಿರ್ಮಾಣ ಹಂತದ ಸೇತುವೆಯಿಂದ ಕಾರು ಕೆಳಗೆ ಬಿದ್ದ ಪರಿಣಾಮ ಮೂವರು ಯುವಕರು ಮೃತಪಟ್ಟಿದ್ದಾರೆ.(Three died.(ಕಾರು ಗೂಗಲ್ ಮ್ಯಾಪ್ ಅನ್ನು ಅನುಸರಿಸಿ ಹೋಗುತಿದ್ದಾಗ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಮೃತ ಯುವಕರು ಗಾಜಿಯಾಬಾದ್‌ನಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಂಡು ತಮ್ಮ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ಬದೌನ್ ಮೂಲಕ ಫರೀದ್‌ಪುರಕ್ಕೆ ಹೋಗುತ್ತಿದ್ದರು. ಅವರನ್ನು ಫರೂಕಾಬಾದ್ ನಿವಾಸಿಗಳಾದ ಅಮಿತ್ ಮತ್ತು ನಿತಿನ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ಮೈನ್‌ಪುರಿಯ ಕೌಶಲ್‌ಕುಮಾರ್ ಕೂಡ ಮೃತಪಟ್ಟಿದ್ದಾರೆ.
ಅಪಘಾತದ ನಂತರ, ಡಿಎಂ ಬದೌನ್ ನಿಧಿ ಶ್ರೀವಾಸ್ತವ ಅವರು ಅಧಿಕಾರಿಗಳ ಮೇಲೆ ಕ್ರಮ ಬಿಗಿಗೊಳಿಸಿದ್ದಾರೆ. ಸೇತುವೆಯಲ್ಲಿ ಸೂಚನಾ ಫಲಕ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಿಡಬ್ಲ್ಯುಡಿ ಅಧಿಕಾರಿ ನರೇಶ್‌ಕುಮಾರ್ ತಿಳಿಸಿದರು. ವರದಿ ಬಂದ ನಂತರ ಸರಕಾರದ ಉದ್ದೇಶದಂತೆ ಕಾಮಗಾರಿ ನಡೆಸಲಾಗುವುದು ಎಂದರು. ಡಿಸಿ ಆದೇಶದ ನಂತರ, ನಾಯಿಬ್ ತಹಸೀಲ್ದಾರ್ ಡಾಟಗಂಜ್ ಛಾವಿ ರಾಮ್ ಅವರು ಗೂಗಲ್ ಮ್ಯಾಪ್‌ನ ಪ್ರಾದೇಶಿಕ ವ್ಯವಸ್ಥಾಪಕ ಮತ್ತು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಮೊಹಮ್ಮದ್ ಆರಿಫ್, ಅಭಿಷೇಕ್ ಕುಮಾರ್, ಕಿರಿಯ ಎಂಜಿನಿಯರ್ ಅಜಯ್ ಗಂಗ್ವಾರ್ ಮತ್ತು ಮಹಾರಾಜ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.










