ಪ್ರೀತಿಗೆ ವಯಸ್ಸು,ಜಾತಿ, ಅಂತಸ್ತಿನ ಹಂಗಿಲ್ಲ. ಅದು ಕುರುಡು ಅಂತಾರೆ. ಇದು ಸತ್ಯ ಎಂಬುವುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಸಿಕ್ಕಿದೆ.
80 ವರ್ಷದ ವೃದ್ಧನ ಪ್ರೀತಿಯ ಪಾಶಕ್ಕೆ ಬಿದ್ದಿದ್ದಾಳೆ. ಈ ಘಟನೆ ಚೀನಾದ ಹೆಬೈ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. 23 ವರ್ಷದ ಯುವತಿಯೊಬ್ಬಳು ವೃದ್ಧಾಶ್ರಮದಲ್ಲಿನ 80 ವರ್ಷದ ವೃದ್ಧನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅಷ್ಟೇ ಅಲ್ಲ, ಆತನನ್ನೇ ಮದುವೆಯಾಗಿದ್ದಾಳೆ. ಹೆಬೈ ಪ್ರಾಂತ್ಯದ ವೃದ್ಧಾಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬಾಕೆ ಅಲ್ಲಿ ಲೀ ಎಂಬ 80 ರ ವೃದ್ಧನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಆ ವೃದ್ಧನ ಪ್ರಬುದ್ಧತೆ, ಬುದ್ಧಿವಂತಿಕೆಗೆ ಆಕರ್ಷಿತಳಾದ ಆಕೆ ಆತನ ಮೇಲೆ ಮನಸ್ಸು ಮಾಡಿದ್ದಳು ಎನ್ನಲಾಗಿದೆ.

ಆನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಯುವತಿಯ ಕುಟುಂಬಸ್ಥರು ಈ ಮದುವೆಗೆ ಒಪ್ಪಿಲ್ಲ. ಆದರೆ, ಕುಟುಂಬದೊಂದಿಗೆ ಜಗಳ ಮಾಡಿ ಅವರ ವಿರೋಧದ ಮಧ್ಯೆ ಮದುವೆಯಾಗಿದ್ದಾಳೆ. ಇಬ್ಬರೂ ಇತ್ತೀಚಿಗೆ ಸರಳವಾಗಿ ವಿವಾಹವಾಗಿದ್ದು, ಇಬ್ಬರ ಕುಟುಂಬದವರೂ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಚೀನಾದ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಲವರು ಹಣಕ್ಕಾಗಿ ಮದುವೆಯಾಗಿದ್ದಾಳೆ ಅಂದ್ರೆ, ಇನ್ನೂ ಹಲವರು ನಿಷ್ಕಲ್ಮಶ ಪ್ರೀತಿ ಇದು ಎಂದು ಹೊಗಳುತ್ತಿದ್ದಾರೆ.