
ನವದೆಹಲಿ: ಪ್ರೀತಿ ಕುರುಡು ಎಂಬ ಪದವನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಜಾತಿ, ಧರ್ಮ, ಸೌಂದರ್ಯ, ಹಣ ಹಾಗೂ ಅಂತಸ್ತು ಯಾವುದನ್ನೂ ಲೆಕ್ಕಿಸದೆ ಪ್ರೀತಿ ಹುಟ್ಟುತ್ತದೆ. ಇದನ್ನೇ ನಿಜವಾದ ಪ್ರೀತಿ ಎಂದು ವ್ಯಾಖ್ಯಾನ ಮಾಡಲಾಗಿದೆ. ಆದರೆ, ಕೆಲವೊಂದು ಪ್ರೇಮ ಪ್ರಕರಣಗಳನ್ನು ಕಂಡರೆ ಹಲವರಿಗೆ ಹೊಟ್ಟೆಕಿಚ್ಚು ಮೂಡುತ್ತದೆ.
ಏಕೆಂದರೆ, ಕೆಲವೊಮ್ಮೆ ಯುವತಿಯರು ತುಂಬಾ ವಯಸ್ಸಾದ ವ್ಯಕ್ತಿಗೆ ಮನಸೋಲುತ್ತಾರೆ. ಇತ್ತೀಚೆಗಷ್ಟೇ 70 ವರ್ಷದ ಮುದುಕನೊಬ್ಬ ( Old man ) 20 ವರ್ಷದ ಯುವತಿ ( Young Girl ) ಯನ್ನು ಪ್ರೀತಿಸಿ ಮದುವೆ ( Marriage ) ಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬಸ್ಥರೂ ಪಾಲ್ಗೊಂಡಿದ್ದರು. ವಿಡಿಯೋದಲ್ಲಿ ಯುವತಿ ಕೆಂಪು ಬಣ್ಣದ ಆಕರ್ಷಕ ಉಡುಗೆಯಲ್ಲಿ ಕಾಣಿಸಿಕೊಂಡರೆ, ಮುದುಕ ಬಿಳಿ ಕುರ್ತಾ ಪೈಜಾಮ ಧರಿಸಿದ್ದಾನೆ. ಮೊದಲು ಯುವತಿ ಮುದುಕನ ಕೊರಳಿಗೆ ಮಾಲೆ ಹಾಕುತ್ತಾಳೆ. ಇದಾದ ನಂತರ ಮುದುಕ ಯುವತಿಗೆ ಹಾಕುತ್ತಾನೆ. ಈ ವೇಳೆ ಇಬ್ಬರ ಕುಟುಂಬಸ್ಥರು ಅವರ ಮೇಲೆ ಪುಷ್ಪವೃಷ್ಟಿ ಮಾಡುತ್ತಾರೆ. ಯುವತಿ ಮತ್ತು ಮುದುಕ ಇಬ್ಬರು ಸಂತೋಷದಿಂದ ಇರುವುನ್ನು ವಿಡಿಯೋದಲ್ಲಿ ನೀವು ನೋಡಬಹುದು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ, ಈ ವಿಡಿಯೋ ಅಸಲಿಯತ್ತೇನು? ಇದು ಎಲ್ಲಿ ನಡೆದಿದೆ? ತಮಾಷೆಗಾಗಿ ಮಾಡಿದ್ದಾರಾ? ಅಥವಾ ನಿಜವಾಗಿಯೂ ಈ ಮದುವೆ ನಡೆದಿದೆಯಾ? ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದರೆ, ಇಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ ಎನ್ನಲಾಗಿದೆ. ವಿಡಿಯೋ ಮಾತ್ರ ಎಲ್ಲರ ಗಮನ ಸೆಳೆದಿದೆ. ವಿಡಿಯೋ ನೋಡಿದ ನೆಟ್ಟಿಗರಂತೂ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
यह सब क्या देखना पड़ रहा है ☹️ pic.twitter.com/1woN1IIGv5
— ज़िन्दगी गुलज़ार है ! (@Gulzar_sahab) September 26, 2024
ಪ್ರೀತಿ ಕುರುಡು ಎಂದುಕೊಂಡಿದ್ದೆವು ಆದರೆ ಕಣ್ಣೇ ಇಲ್ಲ ಅನಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಣದ ಆಸೆಗಾಗಿ ಹೀಗೆ ಮಾಡಿರಬಹುದು ಎಂದಿದ್ದಾರೆ. ಏನೇ ಆಗಲಿ ಇಬ್ಬರ ಜೀವನ ಪಯಣ ಸುಗಮವಾಗಿ ಸಾಗಲಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.










