• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಅಮೆರಿಕಾ ಮಿಲಿಟರಿ ಹಿಂತೆಗೆತದ ಬೆನ್ನಲ್ಲಿ ಮೇಲುಗೈ ಸಾಧಿಸಿದ ತಾಲಿಬಾನ್: ಜೋ ಬಿಡೆನ್ ನೇತೃತ್ವದಲ್ಲಿ ಇಂದು ನಿರ್ಣಾಯಕ ಸಭೆ

ಪ್ರತಿಧ್ವನಿ by ಪ್ರತಿಧ್ವನಿ
July 8, 2021
in ವಿದೇಶ
0
ಅಮೆರಿಕಾ ಮಿಲಿಟರಿ ಹಿಂತೆಗೆತದ ಬೆನ್ನಲ್ಲಿ ಮೇಲುಗೈ ಸಾಧಿಸಿದ ತಾಲಿಬಾನ್: ಜೋ ಬಿಡೆನ್ ನೇತೃತ್ವದಲ್ಲಿ ಇಂದು ನಿರ್ಣಾಯಕ ಸಭೆ
Share on WhatsAppShare on FacebookShare on Telegram

ಯುಎಸ್ ಅಧ್ಯಕ್ಷ ಜೋ ಬಿಡನ್ ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ದೇಶದ ಕ್ರಮಗಳ ಬಗ್ಗೆ ಹೊಸ ನೀತಿಗಳನ್ನು ಪ್ರಕಟಿಸಲಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ. ಇಂದು ನಡೆಯಲಿರುವ ನಿರ್ಣಾಯಕ ಸಭೆಯ ನಂತರ ವಿವರಗಳನ್ನು ನೀಡಲಾಗುವುದು ಎಂದು ಶ್ವೇತಭವನ ತಿಳಿಸಿದೆ.

ADVERTISEMENT

ಎರಡು ದಶಕಗಳ ಕಾಲದ ಮಿಲಿಟರಿ ಕಾರ್ಯಾಚರಣೆಯ ನಂತರ, ಮಂಗಳವಾರ ಯುಎಸ್ ಮಿಲಿಟರಿಯು ಶೇಕಡಾ 90 ರಷ್ಟು ಅಮೆರಿಕನ್ ಪಡೆಗಳು ಮತ್ತು ಮಿಲಿಟರಿ ಸಲಕರಣೆಗಳು ಈಗಾಗಲೇ ದೇಶವನ್ನು ತೊರೆದಿದೆ ಮತ್ತು ಆಗಸ್ಟ್ ಅಂತ್ಯದ ವೇಳೆಗೆ ಡ್ರಾಡೌನ್ ಮುಗಿಯಲಿದೆ ಎಂದು ಘೋಷಿಸಿತ್ತು. ಕಳೆದ ವಾರ, ಯುಎಸ್ ಅಧಿಕಾರಿಗಳು ದೇಶದ ಅತಿದೊಡ್ಡ ವಾಯುನೆಲೆಯಾದ ಬಾಗ್ರಾಮ್ ಏರ್ ಬೇಸ್ ಅನ್ನು ಖಾಲಿಮಾಡಿದಗದರು. ಅಮೆರಿಕದ ಮೇಲೆ 9/11 ನಡೆಸಿದ ಭಯೋತ್ಪಾದಕ ದಾಳಿಯ ರೂವಾರಿಯಾದ ಅಲ್-ಖೈದಾ ದುಷ್ಕರ್ಮಿಗಳನ್ನು ಬೇಟೆಯಾಡಲು ಈ ವಾಯುನೆಲೆಯನ್ನು ಅಮೆರಿಕನ್ ಮಿಲಿಟರಿ ಯುದ್ಧದ ಕೇಂದ್ರಬಿಂದುವಾಗಿಸಿಕೊಂಡಿತ್ತು.

ಈ ಅಫ್ಘಾನಿಸ್ತಾನವು ವೇಗವಾಗಿ ಅಂತರ್ಯುದ್ಧಕ್ಕೆ ತುತ್ತಾಗುವ ಸ್ಥಿತಿ ಕಂಡು ಬರುತ್ತಿದೆ. ಇತ್ತೀಚಿನ ವಾರಗಳಲ್ಲಿ, ದಂಗೆಕೋರರು ಅಫ್ಘಾನಿಸ್ತಾನದ ಸುಮಾರು ಮೂರನೇ ಒಂದು ಭಾಗದಷ್ಟು ಗ್ರಾಮೀಣ ಜಿಲ್ಲೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಹಲವಾರು ಪ್ರಾಂತೀಯ ರಾಜಧಾನಿಗಳನ್ನು ಮುತ್ತಿಗೆ ಹಾಕಿದ್ದಾರೆ. ತಾಲಿಬಾನ್ ಪ್ರಗತಿಯ ಹಿನ್ನೆಲೆಯಲ್ಲಿ ನೂರಾರು ಅಫಘಾನ್ ಭದ್ರತಾ ಪಡೆ ಸದಸ್ಯರು ನೆರೆಯ ತಜಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ.

2,500-3,500 ಯುಎಸ್ ಸೈನಿಕರು ಮತ್ತು 7,000 ಮಿತ್ರರಾಷ್ಟ್ರ ನ್ಯಾಟೋ ಸೈನಿಕರು ಅಫ್ಘಾನಿಸ್ತಾನದಿಂದ ನಿರ್ಗಮಿಸುವುದಾಗಿ ಬಿಡೆನ್ ಏಪ್ರಿಲ್ನಲ್ಲಿ ಘೋಷಿಸಿದ ನಂತರ ತಾಲಿಬಾನ್ ಪ್ರಾದೇಶಿಕ ಗೆಲುವು ಸಾಧಿಸಿದೆ. ಉತ್ತರ ಮತ್ತು ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಮ್ಮ ವಿಜಯಗಳೊಂದಿಗೆ, ತಾಲಿಬಾನ್ ಪ್ರಾಂತೀಯ ನಗರಗಳ ಮೇಲೆ ತಮ್ಮ ಹಿಡಿತವನ್ನು ಹೆಚ್ಚಿಸುತ್ತಿದೆ ಮತ್ತು ಪ್ರಮುಖ ಸಾರಿಗೆ ಮಾರ್ಗಗಳ ಮೇಲೆ ಹಿಡಿತ ಸಾಧಿಸುತ್ತಿದೆ.

ಇತ್ತೀಚೆಗೆ ದೇಶದ ಉತ್ತರದ ಅನೇಕ ಜಿಲ್ಲೆಗಳನ್ನು ವಶಪಡಿಸಿಕೊಂಡ ತಾಲಿಬಾನ್ ವಶಪಡಿಸಿಕೊಂಡಿದೆ. ದಂಗೆಕೋರರು ಪ್ರಾಂತೀಯ ರಾಜಧಾನಿ ಖಲಾ-ಎ-ನಾವ್ ಮೇಲೆ ಹಲವಾರು ಕಡೆಯಿಂದ ದಾಳಿ ನಡೆಸಿದ್ದರು. ಆದರೆ ಅಲ್ಲಿನ ಗವರ್ನರ್ ಹಸಾಮುದ್ದೀನ್ ಶಮ್ಸ್, ಅಫ್ಘಾನ್ ಪಡೆಗಳು ಇಲ್ಲಿಯವರೆಗೆ ತಾಲಿಬಾನ್ ಹೋರಾಟಗಾರರನ್ನು ಹಿಂದಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಬುಧವಾರ ಮುಂಜಾನೆ, ಪ್ರಾಂತೀಯ ಪೊಲೀಸ್ ಪ್ರಧಾನ ಕಚೇರಿ ಮತ್ತು ಖಲಾ-ಎ-ನಾವ್ ಸೇನಾ ನೆಲೆಯ ಬಳಿ ದಾಳಿ ನಡೆದಿದೆ ಎಂದು ಬದ್ಗಿಸ್ನ ಪ್ರಾಂತೀಯ ಮಂಡಳಿಯ ಮುಖ್ಯಸ್ಥ ಅಬ್ದುಲ್ ಅಜೀಜ್ ಬೆಗ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ವೀಡಿಯೊಗಳು ತಾಲಿಬಾನ್ ಹೋರಾಟಗಾರರು ಮೋಟಾರ್ ಸೈಕಲ್ಗಳಲ್ಲಿ ಪ್ರಾಂತೀಯ ರಾಜಧಾನಿಗೆ ವೇಗವಾಗಿ ಚಲಿಸುತ್ತಿರುವುದನ್ನು ತೋರಿಸುತ್ತವೆ. ಇತರ ತುಣುಕುಗಳು ದಂಗೆಕೋರರು ನಗರದ ಕಾರಾಗೃಹವನ್ನು ಸಮೀಪಿಸುತ್ತಿರುವುದನ್ನು ಮತ್ತು ಕೈದಿಗಳನ್ನು ಬಿಡುಗಡೆ ಮಾಡುವುದನ್ನು ತೋರಿಸುತ್ತವೆ. ಆದರೆ ಫೂಟೇಜ್ನ ಸತ್ಯಾಸತ್ಯತೆಯನ್ನು ಅಸೋಸಿಯೇಟೆಡ್ ಪ್ರೆಸ್ಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಫೊಟೇಜ್ನ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಊಹಾಪೋಹಗಳಿವೆ.

ಅಫ್ಘಾನ್ ರಕ್ಷಣಾ ಸಚಿವರ ಉಪ ವಕ್ತಾರ ಫವಾದ್ ಅಮನ್ ಅವರು ತಾಲಿಬಾನ್ ಪಡೆಯು ಭಾರೀ ಸಾವುನೋವುಗಳನ್ನು ಅನುಭವಿಸಿದೆ ಮತ್ತು ಭದ್ರತಾ ಪಡೆಗಳು ಮುಂದಿನ ಕೆಲವೇ ಗಂಟೆಗಳಲ್ಲಿ ನಗರವನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಖಲಾ-ಎ-ನಾವ್ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ತಾಲಿಬಾನ್ ಸಾರ್ವಜನಿಕವಾಗಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.

Tags: Joe BidenUNO
Previous Post

ಕಪ್ಪು ಶಿಲೀಂಧ್ರದ ಔಷಧದ ಲಭ್ಯತೆ ಮತ್ತು ಆಮದಿನ ಕುರಿತು ವರದಿ ನೀಡುವಂತೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಚಾಟಿ

Next Post

ಅಪಾಯಕಾರಿ ಶಿಫಾರಸ್ಸುಗಳಿರುವ ʼರಾಷ್ಟ್ರೀಯ ಶಿಕ್ಷಣ ನೀತಿ-2020ʼನ್ನು ಅನುಷ್ಠಾನಗೊಳಿಸಬಾರದು – ಸಿದ್ದರಾಮಯ್ಯ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

April 19, 2026
ಇರಾನ್‌ಗೆ ಅಮೆರಿಕಾ–ಇಸ್ರೇಲ್ ಕಠಿಣ ಎಚ್ಚರಿಕೆ: ಒಪ್ಪಂದ ಒಪ್ಪಿಕೊಳ್ಳಿ ಇಲ್ಲದಿದ್ದರೆ ಪರಿಣಾಮ ಗಂಭೀರ

ಇರಾನ್‌ಗೆ ಅಮೆರಿಕಾ–ಇಸ್ರೇಲ್ ಕಠಿಣ ಎಚ್ಚರಿಕೆ: ಒಪ್ಪಂದ ಒಪ್ಪಿಕೊಳ್ಳಿ ಇಲ್ಲದಿದ್ದರೆ ಪರಿಣಾಮ ಗಂಭೀರ

April 17, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post
ಅಪಾಯಕಾರಿ ಶಿಫಾರಸ್ಸುಗಳಿರುವ ʼರಾಷ್ಟ್ರೀಯ ಶಿಕ್ಷಣ ನೀತಿ-2020ʼನ್ನು ಅನುಷ್ಠಾನಗೊಳಿಸಬಾರದು – ಸಿದ್ದರಾಮಯ್ಯ

ಅಪಾಯಕಾರಿ ಶಿಫಾರಸ್ಸುಗಳಿರುವ ʼರಾಷ್ಟ್ರೀಯ ಶಿಕ್ಷಣ ನೀತಿ-2020ʼನ್ನು ಅನುಷ್ಠಾನಗೊಳಿಸಬಾರದು – ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada