• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಪ್ರತಿಧ್ವನಿ by ಪ್ರತಿಧ್ವನಿ
May 21, 2026
in Top Story
0
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Share on WhatsAppShare on FacebookShare on Telegram

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ ಗುತ್ತಿಗೆ (Tender) ಕುರಿತು ಡಿಎಂಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಟಿವಿಕೆ ಆ ಟೆಂಡರ್ ಅನ್ನು ಹಿಂಪಡೆದಿದೆ.

ADVERTISEMENT

ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದೆ ಅವಸರದಲ್ಲಿ ಗುತ್ತಿಗೆ ನೀಡಲಾಗಿದೆ ಎಂದು ಡಿಎಂಕೆ ಆರೋಪಿಸಿತ್ತು. ಸಾರ್ವಜನಿಕ ಹಣದ ಬಳಕೆ ಮತ್ತು ನಿಯಮ ಉಲ್ಲಂಘನೆ ಬಗ್ಗೆ ಪ್ರಶ್ನೆ ಎತ್ತಿದ ವಿರೋಧ ಪಕ್ಷ, “ಆರು ಗಂಟೆಗಳಲ್ಲಿ ಟೆಂಡರ್ ಪೂರ್ಣಗೊಳಿಸುವುದು ಹೇಗೆ ಸಾಧ್ಯ?” ಎಂದು ಸರ್ಕಾರ ಹಾಗೂ ಟಿವಿಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

ವಾಹನ ಹಾಗೂ ಅದರೊಳಗಿನ ಸ್ಪೀರಿಟ್ ಸೇರಿ 31,01,500 ರೂ ಮೌಲ್ಯದ ಬಾಬತ್ತು ವಶಕ್ಕೆ. #pratidhvani

ರಾಜಕೀಯ ವಲಯದಲ್ಲಿ ಈ ವಿಚಾರ ದೊಡ್ಡ ಚರ್ಚೆಯಾಗುತ್ತಿದ್ದಂತೆ ಟಿವಿಕೆ ಹಿನ್ನಡೆ ಅನುಭವಿಸಿದ್ದು, ವಿವಾದಿತ ಗುತ್ತಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ. ಪಕ್ಷದ ಆಂತರಿಕ ವಲಯದಲ್ಲಿ ನಡೆದ ಚರ್ಚೆಯ ಬಳಿಕ, “ಅನಗತ್ಯ ವಿವಾದ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎನ್ನಲಾಗುತ್ತಿದೆ.

ಈ ಬೆಳವಣಿಗೆ ತಮಿಳುನಾಡಿನಲ್ಲಿ ಮುಂಬರುವ ಚುನಾವಣಾ ರಾಜಕೀಯಕ್ಕೂ ಮಹತ್ವ ಪಡೆದುಕೊಂಡಿದೆ. ನಟ ವಿಜಯ್ ರಾಜಕೀಯ ಪ್ರವೇಶದ ಬಳಿಕ ಟಿವಿಕೆ ಮೇಲೆ ಜನರ ಗಮನ ಹೆಚ್ಚಿರುವುದರಿಂದ, ಪ್ರತಿಯೊಂದು ನಿರ್ಧಾರವೂ ಇದೀಗ ರಾಜಕೀಯ ಪ್ರತಿಸ್ಪರ್ಧಿಗಳ ಕಣ್ಣಿನಲ್ಲಿ ಸಿಲುಕುತ್ತಿದೆ.

DkShivakumar on Nikhil: ನಿಖಿಲ್ ಕುಮಾರಸ್ವಾಮಿ ಟ್ವೀಟ್​ಗೆ ಖಡಕ್ ಕೌಂಟರ್ ಕೊಟ್ಟ DK #pratidhvani

ಡಿಎಂಕೆ ನಾಯಕರು, “ಪಾರದರ್ಶಕ ಆಡಳಿತದ ಬಗ್ಗೆ ಮಾತನಾಡುವವರು ಮೊದಲು ತಮ್ಮ ಕ್ರಮಗಳನ್ನು ಸ್ಪಷ್ಟಪಡಿಸಬೇಕು” ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ ಟಿವಿಕೆ ಬೆಂಬಲಿಗರು, “ಇದು ರಾಜಕೀಯ ಪ್ರೇರಿತ ಆರೋಪ” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣ ತಮಿಳುನಾಡಿನ ರಾಜಕೀಯದಲ್ಲಿ ಹೊಸ ವಾಕ್ಸಮರಕ್ಕೆ ಕಾರಣವಾಗಿದ್ದು, ವಿಜಯ್ ಪಕ್ಷದ ಆಡಳಿತ ಶೈಲಿ ಮತ್ತು ಸಂಘಟನೆ ಕುರಿತು ಮತ್ತಷ್ಟು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.

 

Tags: #TamilNaduNews#TenderRow#TVKTender#vijay#VijayPoliticsDMKmkstalinPoliticalControversypratidavaniTamilNaduPoliticsTVK
Previous Post

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

Related Posts

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*
Top Story

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

by ಪ್ರತಿಧ್ವನಿ
May 21, 2026
0

ಬೆಂಗಳೂರು : ರಾಜ್ಯದಲ್ಲಿನ ವಿಧಾನ ಪರಿಷತ್‌ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ...

Read moreDetails
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ಹೊಸ ಶಾಕ್..! 43 ಆಸ್ತಿಗಳ ಪಟ್ಟಿ ಬಿಡುಗಡೆ

May 20, 2026
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಮೃತ್ಯು ಬಗ್ಗೆ ಅಪಪ್ರಚಾರ ಯಾಕೆ? ಟ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಹೊಸ ತಿರುವು

May 20, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada