ರಾಜಸ್ಥಾನದ ಉದಯಪುರದಲ್ಲಿ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು, ಸಮಾರಂಭದ ಫೋಟೊ, ವಿಡಿಯೊ ಈಗ ಸ್ವತಃ ವಿಜಯ ದೇವರಕೊಂಡ ಹಂಚಿಕೊಂಡಿದ್ದಾರೆ.ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಮಾರಂಭದ ಫೋಟೊ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಿತ್ತಳೆ ಬಣ್ಣದ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದರೆ ವಿಜಯ್ ದೇವರಕೊಂಡ ರೇಷ್ಮೆ ಪಂಚೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತರು ಪರಸ್ಪರ ಗೇಮ್ಗಳನ್ನು ಆಡಿದ್ದಾರೆ. ಅದ್ಧೂರಿಯಾಗಿ ನಡೆದ ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

ವಿಜಯ ದೇವರಕೊಂಡ ಪೋಟೊ ಹಂಚಿಕೊಂಡು ಹೀಗೆ ಬರೆದಿದ್ದಾರೆ.ಒಂದು ದಿನ, ನಾನು ಅವಳನ್ನು ಮಿಸ್ ಮಾಡಿಕೊಂಡೆ.ಅವಳು ನನ್ನ ಪಕ್ಕದಲ್ಲಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ಅವಳನ್ನು ಮಿಸ್ ಮಾಡಿಕೊಂಡೆ.ಅವಳು ನನ್ನ ಎದುರು ಕುಳಿತಿದ್ದರೆ ನನ್ನ ಊಟಗಳು ಹೆಚ್ಚು ಆರೋಗ್ಯಕರವಾಗಿರುತ್ತಿದ್ದವು.
ಅವಳು ನನ್ನೊಂದಿಗೆ ಮಾಡುತ್ತಿದ್ದರೆ ನನ್ನ ವ್ಯಾಯಾಮಗಳು ಹೆಚ್ಚು ಮೋಜಿನದ್ದಾಗಿರುತ್ತಿದ್ದವು.ನನಗೆ ಅವಳು ಬೇಕಾಗಿದ್ದಂತೆ -ನಾನು ಎಲ್ಲೇ ಇದ್ದರೂ ಮನೆಯ ವಾತಾವರಣ ಮತ್ತು ಶಾಂತತೆಯನ್ನು ಅನುಭವಿಸಲು.ಆದ್ದರಿಂದ,ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು … ನನ್ನ ಹೆಂಡತಿಯನ್ನು ಮಾಡಿಕೊಂಡೆ. 😀❤️ ಎಂದು ಬರೆದುಕೊಂಡಿದ್ದಾರೆ.







