ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವಲ್ಲಿ ಅಸಾಧಾರಣ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪ್ರತಿಷ್ಠಿತ ‘ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ’ ನೀಡಿ ಗೌರವಿಸಲಾಯಿತು.

ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಮತ್ತು ಜಾಗತಿಕ ಶಾಂತಿಗಾಗಿ ಶ್ರಮಿಸಿದ ಮೋದಿಯವರ ನಾಯಕತ್ವವನ್ನ ಮೆಚ್ಚಿ, ಇಸ್ರೇಲ್ ದೇಶದ ಸಂಸತ್ತು ತನ್ನ ಅತ್ಯುನ್ನತ ಗೌರವ ನೀಡಿ ಗೌರವಿಸಿದೆ.ಇಸ್ರೇಲ್ ಸಂಸತ್ತಾದ ಕ್ನೆಸ್ಸೆಟ್ ನ ಕಾರಿಡಾರ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸ್ಪೀಕರ್ ಅವರು ಮೋದಿಯವರಿಗೆ ಈ ಪದಕವನ್ನು ಪ್ರದಾನ ಮಾಡಿದ್ದಾರೆ.

ಇದು ಪ್ರಧಾನಿ ಮೋದಿಯವರ ಎರಡನೇ ಇಸ್ರೇಲ್ ಭೇಟಿಯಾಗಿದ್ದು (ಮೊದಲನೆಯದ್ದು 2017 ರಲ್ಲಿ), ಈ ವೇಳೆ ಅವರು ಇಸ್ರೇಲ್ ಸಂಸತ್ ‘ನೆಸೆಟ್’ (Knesset) ಉದ್ದೇಶಿಸಿ ಮಾತನಾಡಲಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ.







