ಸಾಂಗ್ಲಿಯಾನ್ ಹೆಸರು ನೀವೆಲ್ಲಾ ಕೇಳಿರಬಹುದು ಆದರೆ ಸಾಂಗ್ಲಿಯಾನ ಬಗ್ಗೆ ನಿಮಗೆಷ್ಟು ಗೊತ್ತು? ಶ್ರೇಷ್ಠ ನಟ ಮತ್ತು ನಿರ್ದೇಶಕ ಶಂಕರ್ ನಾಗ್ ಅವರು ಸಾಂಗ್ಲಿಯಾನ ಅವರ ಜೀವನ ಮತ್ತು ಸಾಹಸಗಳಿಂದ ಪ್ರೇರಿತರಾಗಿ ಸಿನಿಮಾಗಳು: ‘ಸಾಂಗ್ಲಿಯಾನ’ (1988) ಮತ್ತು ‘S.P. ಸಾಂಗ್ಲಿಯಾನ ಭಾಗ-2’ (1990) ಸಿನಿಮಾಗಳನ್ನು ಮಾಡಿದ್ದರು.

ಅಪ್ಪಟ ಸಿಂಹಎಂದೇ ಖ್ಯಾತರಾಗಿದ್ದ HT. ಸಾಂಗ್ಲಿಯಾನ. ಕರ್ನಾಟಕ ಪೊಲೀಸ್ ಅಧಿಕಾರಿ.ಅವರ ಹೆಸರು ಕೇಳಿದರೆ ಅಂದಿನ ಕಾಲದ ರೌಡಿಗಳು ಮತ್ತು ಅಪರಾಧಿಗಳು ನಡುಗುತ್ತಿದ್ದರು. ಬೆಂಗಳೂರಿನಲ್ಲಿ ರೌಡಿಸಂ ಮಿತಿಮೀರಿದ ಕಾಲದಲ್ಲಿ ಅದನ್ನು ಮಟ್ಟಹಾಕಲು ಇವರು ಕೈಗೊಂಡ ಕ್ರಮಗಳು ಶ್ಲಾಘನೀಯ.

ಮಿಜೋರಾಂ ಮೂಲದವರಾದ ಸಾಂಗ್ಲಿಯಾನ ಅವರು ಕರ್ನಾಟಕ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಯಾವುದೇ ರಾಜಕೀಯ ಒತ್ತಡಕ್ಕೆ ಬಗ್ಗದೆ ಕೆಲಸ ಮಾಡುತ್ತಿದ್ದ ಅವರ ಧೈರ್ಯ ಬೆಂಗಳೂರಿನ ಜನತೆಯ ನೆನಪಿನಲ್ಲಿ ಸದಾ ಇರುತ್ತದೆ. ಇವರು ಬೆಂಗಳೂರು ಇವರು ನಗರದ ಕಮಿಷನರ್ ಆಗಿದ್ದಾಗ ಕಾನೂನು ಸುವ್ಯವಸ್ಥೆ ಅತ್ಯಂತ ಕಟ್ಟುನಿಟ್ಟಾಗಿತ್ತು. ಪೊಲೀಸ್ ಇಲಾಖೆಯಿಂದ ನಿವೃತ್ತರಾದ ನಂತರ, ಅವರು ರಾಜಕೀಯಕ್ಕೆ ಪ್ರವೇಶಿಸಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಸೇವೆ ಸಲ್ಲಿಸಿದರು.






