ಶಿವಾಜಿ ಜಯಂತಿಯಲ್ಲಿ ಶಾಸಕ ಬಸನಗೌಡ ಪಾಟೀಲ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಮಹಾತ್ಮ ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ. ಪಾಕಿಸ್ತಾನದ ರಾಷ್ಟ್ರಪಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗಾಂಧೀಜಿಯನ್ನ ಭಾರತದ ರಾಷ್ಟ್ರಪಿತ ಎಂದು ನಾನು ಒಪ್ಪಿಕೊಳ್ಳಲ್ಲ. ಜವಾಹರ್ಲಾಲ್ ನೆಹರೂರನ್ನ ಮೊದಲ ಪ್ರಧಾನಿ ಎಂದು ಒಪ್ಪಿಕೊಳ್ಳಲ್ಲ ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್.ಇವರೆಲ್ಲರೂ ದೇಶದ ಸ್ವತಂತ್ರಕ್ಕಾಗಿ ಉಪವಾಸ ಮಾಡುತ್ತಿರಲಿಲ್ಲ. ಕೊಲ್ಕತ್ತಾದಿಂದ 555 ಸಿಗರೇಟ್ ತರಿಸಿಕೊಂಡು ಸೇದುತ್ತಿದ್ದರು ಎಂದು ಯತ್ನಾಳ್ ಹೇಳಿದ ವಿವಾದಾತ್ಮಕ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ.

ಗಾಂಧೀ ಚರಕ ತಿರುಗಿಸಿದ್ದರಿಂದ ಭಾರತಕ್ಕೆ ಸ್ವತಂತ್ರ ಸಿಕ್ಕಿತ? ನಾನು ಚರಕ ತಿರುಗಿಸುತ್ತೇನೆ ನಾಳೆ ರಾಜ್ಯದ ಸಿಎಂ ಆಗುತ್ತೇನ? ಭಾರತದಲ್ಲಿರುವ ಮುಸ್ಲಿಮರು ಒಂದೇ ಮಾತರಂ ಹೇಳಬೇಕು. ಇಲ್ಲದಿದ್ದರೆ ಗಾಂಧೀ ಕೊಟ್ಟ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.

ರಾಹುಲ್ ಗಾಂಧಿ ಮತ್ತು ಓಮರ್ ಅಬ್ದುಲ್ಲ ಒಂದೇ ತರಹ ಇದ್ದಾರೆ. ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ರಾಹುಲ್ ಸೇಮ್ ಇದ್ದಾರೆ ಇಬ್ಬರೂ ಒಂದೇ ಪ್ರೋಡಕ್ಷನ್ ಇದ್ದಾರೆ ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.






