2026 ರ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಸೋಲನ್ನು ಕಂಡಿದೆ. ಭಾರತ ತಂಡವು ಟೂರ್ನಿಯ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳಿಂದ ಹೀನಾಯವಾಗಿ ಸೋತಿದೆ.

ಅಹಮದಾಬಾದ್ ನಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 187 ರನ್ಗಳನ್ನು ನೀಡಿತ್ತು. ಭಾರತಕ್ಕೆ 188 ರನ್ಗಳ ಗುರಿಯನ್ನು ನೀಡಲಾಗಿತ್ತು. ಆದರೆ ಭಾರತ ತಂಡವು 18.5 ಓವರ್ಗಳಲ್ಲಿ 111 ರನ್ಗಳಿಗೆ ಆಲೌಟಾಯಿತು. ಭಾರತದ ಪರ ಶಿವಂ ದುಬೆ ಮಾತ್ರ 42 ರನ್ ಗಳಿಸಿದರು. ಇದರ ಹೊರತಾಗಿ, ತಂಡದ ಇತರ ಬ್ಯಾಟರ್ಗಳು 20 ರನ್ಗಳ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ.

ಭಾರತ ತಂಡವು ರನ್ ಗಳಿಸುವಲ್ಲಿ ಸೋಲನ್ನು ಅನುಭವಿಸಿತು. ಭಾರತದ ಸೋಲಿನ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ನಾವು ಆರಂಭದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. 21 ರನ್ಗಳಿಗೆ 3 ವಿಕೆಟ್ಗಳನ್ನು ಪಡೆದಿದ್ದೇವೆ. ಆದರೆ 7 ಮತ್ತು 15 ನೇ ಓವರ್ಗಳ ನಡುವೆ, ಅವರು ಅತ್ಯುತ್ತಮ ಬ್ಯಾಟಿಂಗ್ ಮೂಲಕ ಪಂದ್ಯವನ್ನು ತಮ್ಮ ಪರವಾಗಿ ತಿರುಗಿಸಿಕೊಂಡರು.ಪವರ್ಪ್ಲೇನಲ್ಲಿ ಉತ್ತಮವಾಗಿ ಆಡದಿದ್ದರೆ 180-185 ರನ್ಗಳನ್ನು ಬೆನ್ನಟ್ಟಿ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ.ಒಟ್ಟಾರೆಯಾಗಿ, ನಮ್ಮ ಬೌಲಿಂಗ್ ಉತ್ತಮವಾಗಿತ್ತು. ಆದರೆ ಬ್ಯಾಟಿಂಗ್ ಸ್ವಲ್ಪ ಸುಧಾರಿಸಬಹುದಿತ್ತು ಎಂದು ಹೇಳಿದ್ದಾರೆ.






