ಟಿ20 ವಿಶ್ವಕಪ್ ಪಂದ್ಯಕ್ಕಾಗಿ ಆಫ್ಘಾನಿಸ್ತಾನ ತಂಡ ದೆಹಲಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಈ ಸಂದರ್ಭದಲ್ಲಿ ದೆಹಲಿ ಹೊಟೆಲ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯನಿಗೆ ಹೃದಯಾಘಾತವಾಗಿದ್ದು,ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ.

ಆಫ್ಘಾನಿಸ್ತಾನ ತಂಡದ ಪರ್ಫಾಮೆನ್ಸ್ ಅನಾಲಿಸ್ಟ್ ಕೆಸಿ ರಾಮ ಸುಬ್ರಹ್ಮಣ್ಯನ್ ದೆಹಲಿ ಹೋಟೆಲ್ ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು,ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿದೆ.

ಕೆಸಿ ರಾಮ ಸುಬ್ರಹ್ಮಣ್ಯನ್ ಅವರಿಗೆ ಫೋರ್ಟಿಸ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಸಿ ರಾಮ ಸುಬ್ರಹ್ಮಣ್ಯನ್ ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಆಫ್ಘಾನಿಸ್ತಾನ ಆರಂಭಿಕ 2 ಪಂದ್ಯದಲ್ಲಿ ಈಗಾಗಲೇ ಸೋಲು ಕಂಡಿದೆ. ಫೆಬ್ರವರಿ 16ರಂದು ಯುಎಐ ವಿರುದ್ಧ ಆಟವಾಡಲಿದೆ.






