ಬೆಂಗಳೂರು: ನಗರದ ಮೆಟ್ರೋ ನಿಲ್ದಾಣ ಸ್ಪೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯಿಂದ ಬಿಎಂಆರ್ ಸಿಎಲ್ ಅಧಿಕೃತ ಬೆದರಿಕೆ ಇಮೇಲ್ ಗೆ ಸಂದೇಶ ಬಂದಿದ್ದು, ಕಿಡಿಗೇಡಿ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿFIR ದಾಖಲಾಗಿದೆ.
ನವೆಂಬರ್ 14 ರ ರಾತ್ರಿ 11.30 ರ ಸುಮಾರಿಗೆ BMRCL ಅಧಿಕೃತ ಇಮೇಲ್ ಗೆ “ನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ಕೊಡ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತೆ. ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧ ಎಂದು ಸಂದೇಶ ಬಂದಿತ್ತು. ಈ ಇಮೇಲ್ ಪರಿಶೀಲನೆ ನಡೆಸಿದ ಬಿಎಂಅರ್ ಸಿಎಲ್ ಅಧಿಕಾರಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು
ಸದ್ಯ ದೂರಿನ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ FIR ದಾಖಲಾಗಿದೆ. ಪೊಲೀಸರು ಆರೋಪಿ ಕಳುಹಿಸಿರುವ ಸಂದೇಶ ಪರಿಶೀಲನೆ ನಡೆಸುತ್ತಿದ್ದು, ಇಮೇಲ್ ವಿಳಾಸ ಪತ್ತೆ ಹಚ್ಚುತ್ತಿದ್ದಾರೆ.











