ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ ಯುವಕನ ಡಾಕಾಯಿತಿ ಮಾಡಿದ್ದ ಯುವತಿ ಜೊತೆ ಆಕೆಯ ಅಸಲಿ ಪ್ರಿಯಕರನನ್ನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ ನ.1ರಂದು ಇಂದಿರಾನಗರದ ಲಾಡ್ಜ್ ನಲ್ಲಿ ನಡೆದಿದ್ದ ಘಟನೆ ಸಂಬಂಧ ಕವಿಪ್ರಿಯಾ, ಹರ್ಷವರ್ಧನರನ್ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ಇಬ್ಬರು ಆ್ಯಪ್ ಗಳ ಮೂಲಕ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದು,
ಸಾಲ ತೀರಿಸಲು ಈ ರೀತಿ ಡಾಕಾಯಿತಿಗೆ ಕೈ ಹಾಕಿದ್ದಾರೆ ಎನ್ನುವುದು ಗೊತ್ತಾಗಿದೆ. ವಿಪರ್ಯಾಸವೆಂದರೆ ಇದು ಆರೋಪಿಗಳು ಮೊದಲ ಪ್ಲಾನ್ ನಲ್ಲೇ ಸಿಕ್ಕಿಬಿದ್ದಿರುವುದು.
Happen app ನಲ್ಲಿ ತನ್ನ ಫೋಟೊ ಹಾಕಿ ಯುವಕರಿಗೆ ಬಲೆ ಬೀಸಿದ್ದ ಕವಿಪ್ರಿಯಾ, ಬಳಿಕ ಯುವಕನೊಬ್ಬನನ್ನ ನ.1ರಂದು ಇಂದಿರಾನಗರದ ರೆಸ್ಟೋರೆಂಟ್ ನಲ್ಲಿ ಭೇಟಿಯಾಗಿದ್ದಳು. ಬಳಿಕ ಇಬ್ಬರು ಮಧ್ಯ ಸೇವಿಸಿ ಲಾಡ್ಜ್ ಒಂದಕ್ಕೆ ತೆರಳಿದ್ದರು. ಮಧ್ಯರಾತ್ರಿ ಆನ್ ಲೈನ್ ನಲ್ಲಿ ಆಕೆಯೆ ಊಟ ತರಿಸಿ ಊಟ ಮಾಡಿದ್ದಳು. ಆದರೆ ಊಟ ನಂತರ ಯುವತಿ ಕೊಟ್ಟ ನೀರು ಕುಡಿದ ಯುವಕ ಪ್ರಜ್ಞೆ ತಪ್ಪಿ ಮಲಗಿದ್ದ. ಈ ವೇಳೆ ನಗದು, ಚಿನ್ನ ದೋಚಿ ಕವಿಪ್ರಿಯಾ ಎಸ್ಕೇಪ್ ಆಗಿದ್ದಳು. ಈ ಕಳ್ಳತನ ಸಂಬಂಧ ಯುವಕ ಪೊಲೀಸರಿಗೆ ದೂರು ನೀಡಿದ್ದ.
ಸಧ್ಯ ಇಂದಿರಾನಗರ ಪೊಲೀಸರು ಕವಿಪ್ರಿಯಾ ಮತ್ತು ಆಕೆಗೆ ಸಾಥ್ ನೀಡಿದ್ದ ಪ್ರಿಯಕರನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.











