• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಂಭಾಲ್​ನಲ್ಲಿ 46 ವರ್ಷಗಳಿಂದ ಬಂದ್ ಆಗಿದ್ದ ದೇವಾಲಯ ಮತ್ತೆ ತೆರೆದ ಜಿಲ್ಲಾಡಳಿತ: ಭಕ್ತರಿಂದ ಪೂಜೆ

ಪ್ರತಿಧ್ವನಿ by ಪ್ರತಿಧ್ವನಿ
December 16, 2024
in Top Story, ಇತರೆ / Others
0
Share on WhatsAppShare on FacebookShare on Telegram

ಸಂಭಾಲ್ (ಉತ್ತರ ಪ್ರದೇಶ ; 46 ವರ್ಷಗಳಿಂದ ಬಂದ್ ಆಗಿದ್ದ ಮಂದಿರವನ್ನು ಜಿಲ್ಲಾಡಳಿತ ಇದೀಗ ಮತ್ತೆ ತೆರೆಯಿದ್ದು, ಹಿಂದೂ ಸಮುದಾಯದಲ್ಲಿ ಸಂತಸ ಮನೆಮಾಡಿದೆ. ಈಗ ದರ್ಶನಕ್ಕೆ ತೆರೆಯಲಾಗಿರುವ ಶಿವ ದೇವಾಲಯಕ್ಕೆ ದೂರದಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಎಸ್​ಪಿ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ಅವರಿಗೆ ಸೇರಿದ ಖಗ್ಗು ಸರೈ ಪ್ರದೇಶದಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ವಿದ್ಯುತ್ ಕಳವು ತಪಾಸಣೆ ನಡೆಸುತ್ತಿದ್ದಾಗ ಈ ಶಿವ ದೇವಾಲಯ ಪತ್ತೆಯಾಗಿದೆ. ಮುಚ್ಚಿ ಬೀಗ ಹಾಕಿದ್ದ ಈ ದೇವಸ್ಥಾನದ ಬಾಗಿಲು ಈಗ 46 ವರ್ಷಗಳ ನಂತರ ತೆರೆಯಲಾಗಿದೆ. ದೇವಾಲಯದಲ್ಲಿ ಶಿವಲಿಂಗ ಮತ್ತು ಹನುಮಾನ್‌ ವಿಗ್ರಹಗಳನ್ನು ಕಾಣುವ ಸಾಧ್ಯವಾಗಿದೆ.

ದುಡ್ಡಿದ ದಶಕಗಳ ನಂತರ ದೇವಾಲಯ ತೆರೆದಿರುವುದರ ಸುದ್ದಿ ಕೇಳಿ ಹಿಂದೂ ಧರ್ಮೀಯರು ದೌಡಾಯಿಸಿದ್ದಾರೆ. ಪುರೋಹಿತರನ್ನು ಕರೆಸಿಕೊಂಡು ದೇವಸ್ಥಾನವನ್ನು ಶುದ್ಧೀಕರಿಸಲಾಯಿತು, ನಂತರ ಪೂಜೆ ಪ್ರಾರಂಭವಾಯಿತು. ದೇವಾಲಯದ ಸುರಕ್ಷತೆಯನ್ನು ದೃಢಪಡಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾನುವಾರ, ದೇವಾಲಯ ತೆರೆದ ಎರಡನೇ ದಿನವೇ ಬೆಳಗ್ಗೆ ಭಕ್ತರು ಪೂಜೆಗಾಗಿ ಆಗಮಿಸತೊಡಗಿದರು.

ಸ್ಥಳೀಯರ ಪ್ರಕಾರ, 1978ರಲ್ಲಿ ನಡೆದ ಕೋಮು ಗಲಭೆಯ ನಂತರ ಸ್ಥಳೀಯ ಹಿಂದೂ ಸಮುದಾಯ ಈ ಪ್ರದೇಶವನ್ನು ತ್ಯಜಿಸಿತ್ತು, ಇದರಿಂದ ಭಸ್ಮ ಶಂಕರ್ ದೇವಾಲಯ ಮುಚ್ಚಲ್ಪಟ್ಟಿತ್ತು.

ವಿದ್ಯುತ್ ಕಳ್ಳತನದ ತಪಾಸಣೆ ನಡೆಸುತ್ತಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್​ಡಿಎಂ) ವಂದನಾ ಮಿಶ್ರಾ, ತಪಾಸಣೆ ವೇಳೆ ಮಂದಿರ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದರು. “ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತಂದೆ. ಅದಾದ ನಂತರ ದೇವಾಲಯವನ್ನು ತೆರೆಯುವ ನಿರ್ಧಾರ ಕೈಗೊಳ್ಳಲಾಯಿತು,” ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನದ ಹತ್ತಿರ ಇರುವ ಬಾವಿಯನ್ನು ಪುನಶ್ಚೇತನಗೊಳಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.

Tags: closed for 46 years in Sambhal:Deputy Divisional Magistrate (SDMdistrict administration reopenedSambhalShiva templeShivalinga and Hanuman idolsSP MP Ziaur Rehman Barkworship by devotees
Previous Post

ಯರ್ಮೌಕ್‌ ನಿರಾಶ್ರಿತ ಶಿಬಿರಕ್ಕೆ ಹಿಂತಿರುಗುತ್ತಿರುವ ಪ್ಯಾಲೆಸ್ತೈನ್‌ ನಿರಾಶ್ರಿತರು

Next Post

ಗ್ರಾಮಸ್ಥರಿಂದ ಮೂವರು ಶಂಕಿತ ಮಾವೋವಾದಿಗಳ ಹತ್ಯೆ

Related Posts

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..
Top Story

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

by ಪ್ರತಿಧ್ವನಿ
March 3, 2026
0

ಬೆಂಗಳೂರು : ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜೀವನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಇಂಧನ ಸಚಿವ ಕೆ.ಜೆ. ಜಾಋಜ್ ಜನರ ಸಮಸ್ಯೆಗಳನ್ನು ಆಲಿಸಿದರು. ಕ್ಷೇತ್ರದಲ್ಲಿ ಕೈಗೊಂಡಿರುವ...

Read moreDetails
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

March 3, 2026
“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

March 3, 2026
ಹಾರ್ಮುಜ್‌ ಮಾರ್ಗದಲ್ಲಿ ನಿಮ್ಮ ತೈಲದ ಹಡಗು ಕಾಣಿಸಿದ್ರೆ ಬೆಂಕಿ ಹಚ್ತೀವಿ : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ..

ಹಾರ್ಮುಜ್‌ ಮಾರ್ಗದಲ್ಲಿ ನಿಮ್ಮ ತೈಲದ ಹಡಗು ಕಾಣಿಸಿದ್ರೆ ಬೆಂಕಿ ಹಚ್ತೀವಿ : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ..

March 3, 2026
Next Post

ಗ್ರಾಮಸ್ಥರಿಂದ ಮೂವರು ಶಂಕಿತ ಮಾವೋವಾದಿಗಳ ಹತ್ಯೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada