ಕನ್ನಡದ ಬಹುನಿರೀಕ್ಷಿತ, ಪ್ಯಾನ್ ವರ್ಲ್ಡ್ ಸಿನಿಮಾ (Pan world movie) ಎಂದು ತೆರೆಕಂಡ ಮಾರ್ಟಿನ್ (Martin) ವಿರೋಧಿಗಳ ಷಡ್ಯಂತ್ರಕ್ಕೆ ಬಲಿಯಾಯ್ತಾ ?! ಸಿನಿಮಾ ರಿಲೀಸ್ ಆದ ಮೊದಲೆರಡು ದಿನವೇ ನೆಗೆಟಿವ್ ರಿವ್ಯೂಗಳನ್ನು ಹರಿಬಿಡುವ ಮೂಲಕ ಸಿನಿಮಾ ಯಶಸ್ಸಿಗೆ ಕೊಳ್ಳಿ ಇಡಲಾಯಿತ ಎಂಬ ಒಂದಷ್ಟು ವದಂತಿಗಳು ಗಾಂಧಿನಗರದಲ್ಲಿ (Gandhinagar) ಹರಿದಾಡುತ್ತಿದೆ.

ಸುಮಾರು ಮೂರು ವರ್ಷಗಳ ಪರಿಶ್ರಮದೊಂದಿಗೆ ಸಿದ್ಧಗೊಂಡ ಬಹುಕೋಟಿ ವೆಚ್ಚದ ಸಿನಿಮಾ ಮಾರ್ಟಿನ್, ಆದ್ರೆ ಸಿನಿಮಾ ನಿಜಕ್ಕೂ ಚೆನ್ನಾಗಿಲ್ವಾ ಅಥವಾ ಚೆನ್ನಾಗಿಲ್ಲ ಎಂಬಂತೆ ಬಿಂಬಿಸಲಾಗಿದ್ಯಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಉದ್ದೇಶಪೂರ್ವಕವಾಗಿ ನೆಗೆಟಿವ್ ರಿವ್ಯೂ (Negative review) ಹರಿಬಿಡಲಾಗಿದೆ ಎಂಬ ಆರೋಪಗಳು.
ಸ್ಟಾರ್ ವಾರ್ (Star war), ಫ್ಯಾನ್ಸ್ ವಾರ್ (Fans war) ಇನ್ನಿತರೆ ವಿಚಾರಗಳು ಈಗ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದ್ದು, ಇದೇ ಬೆಳವಣಿಗೆಗಳು ಮಾರ್ಟಿನ್ ಸಿನಿಮಾ ಯಶಸ್ಸಿಗೆ ಪೆಟ್ಟು ನೀಡಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಒಂದೆಡೆ ಬಿಡುಗಡೆಗೂ ಮುನ್ನ ಸಿನಿಮಾ ತಂಡದಲ್ಲೇ ನೂರಾರು ವಿವಾದಗಳು ಸೃಷ್ಟಿಯಾಗಿ ಸಿನಿಮಾಗೆ ಬಹಳಷ್ಟು ಅಡೆತಡೆಯಾಗಿತ್ತು. ಆದ್ರೆ ರಿಲೀಸ್ ನಂತರ ಕೆಲವರ ಕುತಂತ್ರಕ್ಕೆ ಕನ್ನಡ ಸಿನಿಮಾ ಬಲಿಯಾಯ್ತಾ ಎಂಬ ಚರ್ಚೆ ಅಲ್ಲಲ್ಲಿ ಕೇಳಿ ಬರುತ್ತಿದೆ.











