
ದೆಹಲಿ/ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ (Haryana assembly elections)31 ಅಭ್ಯರ್ಥಿಗಳೊಂದಿಗೆ ಕಾಂಗ್ರೆಸ್ ಮೊದಲ ಪಟ್ಟಿಯನ್ನು ಬಿಡುಗಡೆ (Congress released the first list)ಮಾಡಿದೆ. ಜೂಲಾನಾದಿಂದ ಸ್ಪರ್ಧಿಸಲು ವಿನೇಶ್ ಫೋಗಟ್ (Vinesh Phogat)ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್(Election ticket) ನೀಡಲಾಗಿದೆ.ಹರಿಯಾಣದ ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ ಗರ್ಹಿ ಸಂಪ್ಲಾ ಕಿಲೋಯಿಯಿಂದ ಸ್ಪರ್ಧಿಸಲಿದ್ದಾರೆ; ರೋಹ್ಟಕ್ನಿಂದ ಬಿಬಿ ಬಾತ್ರಾ ಅವರನ್ನು ಕಣಕ್ಕಿಳಿಸಲಾಗಿದ್ದು, ಉದಯಭಾನ್ ಹೊಡಾಲ್ನಿಂದ ಸ್ಪರ್ಧಿಸಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಸಿಎಂ ಸ್ಥಾನದ ಬಗ್ಗೆ ಹರಿಯಾಣ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ನಡೆಯುತ್ತಿದೆ.ಮಾಜಿ ಸಿಎಂ ಹೂಡಾ( Former CM Hooda)ಪ್ರಮುಖ ಸ್ಪರ್ಧಿ. ಅದೇ ರೀತಿ ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಕೂಡ ಏಕೆ ಸಿಎಂ ಆಗಬಾರದು ಎಂದು ಹೇಳಿಕೆ ನೀಡಿದ್ದಾರೆ.ಅವರಿಗೂ ರಾಜ್ಯದ ಜನರ ಸೇವೆ ಮಾಡುವ ಆಸೆ ಇದೆ.ಪರಿಶಿಷ್ಟ ಜಾತಿಯಿಂದ ಸಿಎಂ ಮಾಡಬೇಕೆಂಬ ತನ್ನ ನಿಲುವನ್ನು ಮುಂದಿಟ್ಟಿದ್ದರು. ಅದೇ ಸಮಯದಲ್ಲಿ, ರಾಜ್ಯಸಭಾ ಸಂಸದ ರಣದೀಪ್ ಸುರ್ಜೆವಾಲಾ ಕೂಡ ಮುಖ್ಯಮಂತ್ರಿ ಹುದ್ದೆಯ ಮೇಲೆ ತಮ್ಮ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಸ್ಥಾನಗಳಿವೆ. ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಾರ ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.ಪಟ್ಟಿ ಬಿಡುಗಡೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಗಿಂತ ಮುನ್ನಡೆ ಸಾಧಿಸಿದೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ 67 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಆದರೆ, ಟಿಕೆಟ್ ಬಿಡುಗಡೆ ಬಳಿಕ ಹರಿಯಾಣ ಬಿಜೆಪಿಯಲ್ಲಿ ಭಾರೀ ಬಂಡಾಯ ಎದ್ದಿದೆ. ಸಚಿವ ರಂಜಿತ್ ಚೌತಾಲಾ ಸೇರಿದಂತೆ ಹಲವು ಬಿಜೆಪಿ ಮುಖಂಡರು ಟಿಕೆಟ್ ಸಿಗದೆ ಅಸಮಾಧಾನಗೊಂಡು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಇನ್ನು ಹಲವು ನಾಯಕರು ಅಭ್ಯರ್ಥಿಗಳನ್ನು ಬದಲಾಯಿಸುವಂತೆ ಪಕ್ಷಕ್ಕೆ ಗಡುವು ನೀಡಿದ್ದಾರೆ.
ಆ ಹಿನ್ನೆಲೆಯಲ್ಲಿ ಹರ್ಯಾಣ ಕಾಂಗ್ರೆಸ್ಗೆ ಗುಂಪುಗಾರಿಕೆ ಅಂತ್ಯವಿಲ್ಲದ ಸಮಸ್ಯೆಯಾಗಿ ಕಂಡು ಬಂದಿದ್ದು, ಟಿಕೆಟ್ ಘೋಷಣೆಯ ನಂತರ ಕಾಂಗ್ರೆಸ್ಗೂ ಇದೇ ರೀತಿಯ ಸಮಸ್ಯೆ ಎದುರಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಹರಿಯಾಣದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಮೂರು ಸಭೆಗಳನ್ನು ನಡೆಸಿದೆ. ಸೆ.2ರಂದು ಮೊದಲ ಸಭೆ ನಡೆದಿದ್ದು, ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, ಮೊದಲ ಸಭೆಯಲ್ಲಿ 34 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು, ಆದರೆ 15 ಹೆಸರುಗಳನ್ನು ಸ್ಕ್ರೀನಿಂಗ್ ಸಮಿತಿಗೆ ಹಿಂತಿರುಗಿಸಲಾಗಿದೆ. ಸೆ.3ರಂದು ಮತ್ತೆ ಸಭೆ ನಡೆದಿದ್ದು, ಇದರಲ್ಲಿ 32 ಸ್ಥಾನಗಳನ್ನು ಅಂತಿಮಗೊಳಿಸಲಾಗಿದೆ. ಇದಾದ ಬಳಿಕ ಇಂದು ಮೂರನೇ ಬಾರಿಗೆ ಸೀಟುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಭೆ ನಡೆಸಿದೆ.




