
ಬಿಜಾಪುರ (ಛತ್ತೀಸ್ಗಢ): ಛತ್ತೀಸ್ಗಢದ ಬಿಜಾಪುರದಲ್ಲಿ ಓರ್ವ ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ನಕ್ಸಲೀಯರು ವ್ಯಕ್ತಿಯೊಬ್ಬನನ್ನು ಕೊಂದು ಹಾಕಿರುವ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭೈರಾಮ್ಗಢ ಪ್ರದೇಶದಲ್ಲಿ ನಕ್ಸಲೀಯರು ‘ಜನ್ ಅದಾಲತ್’ ನಡೆಸಿದಾಗ ಭಾನುವಾರ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಜಾಗೂರ್ ಗ್ರಾಮದ ನಿವಾಸಿ ಸಿತು ಮದ್ವಿ ಎಂದು ಗುರುತಿಸಲಾದ ವ್ಯಕ್ತಿಯನ್ನು ನಕ್ಸಲೀಯರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿ ಅವನು ಪೊಲೀಸರಿಗೆ ಮಾಹಿತಿ ನೀಡಿದ ಆರೋಪ ಹೊರಿಸಲಾಯಿತು.
ಕಾಂಗರೂ ಕೋರ್ಟ್’ ವಿಚಾರಣೆಯ ನಂತರ, ನಕ್ಸಲೀಯರ ಭೈರಾಮ್ಗಢ ಪ್ರದೇಶ ಸಮಿತಿಯು ಸಿತು ಮದ್ವಿಯನ್ನು ಕೊಂದಿತು. ಮದ್ವಿ 2021 ರಿಂದ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂದು ಆರೋಪಿಸಿ ಆತನ ಶವದ ಪಕ್ಕದಲ್ಲಿ ಕರಪತ್ರವನ್ನು ಇಟ್ಟು ಇದಕ್ಕೆ ಹತ್ಯೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಘಟನೆಯನ್ನು ಖಚಿತಪಡಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಗೌವರ್ಣ, ಪ್ರಾಥಮಿಕ ಮಾಹಿತಿಯ ಪ್ರಕಾರ, ನಕ್ಸಲೀಯರು ಮದ್ವಿ ಮತ್ತು ಮತ್ತೊಬ್ಬನನ್ನು ತಮ್ಮೊಂದಿಗೆ ಕರೆದೊಯ್ದರು, ಅವರು ಮತ್ತೊಬ್ಬ ಗ್ರಾಮಸ್ಥ ನನ್ನು ಬಿಟ್ಟು ಕಳಿಸಿದರು ಆದರೆ ಅದಾಲತ್ನಲ್ಲಿ ಮದ್ವಿಯನ್ನು ಕೊಂದರು. ನಿಷೇಧಿತ ನಕ್ಸಲ್ ಭೈರಾಮಗಢ ಪ್ರದೇಶ ಸಮಿತಿಯು ಕರಪತ್ರಗಳನ್ನು ಹಂಚಿದೆ. ಅವರು ಪೊಲೀಸ್ ಮಾಹಿತಿದಾರರಾಗಿದ್ದ ಕಾರಣ ಅವರು ಮಾದ್ವಿಯನ್ನು ಕೊಂದಿದ್ದಾರೆಂದು ಸ್ಥಳದಲ್ಲಿ ಹೇಳಿದರು.ಎರಡು ದಿನಗಳ ಹಿಂದೆ ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೂಸನಾರ್ ಗ್ರಾಮದ ಜಮೀನ್ದಾರ್ ಲಾಂಚಾ ಪುಣೆಂ ಎಂಬಾತನನ್ನು ಮಾಹಿತಿದಾರ ಎಂದು ಆರೋಪಿಸಿ ನಕ್ಸಲೀಯರು ಹತ್ಯೆ ಮಾಡಿದ್ದರು.





