
ಉತ್ತರ ಪ್ರದೇಶ: ಮಾಂಸದಡುಗೆ ಊಟ ಹಾಕು ಎಂದ ಪತಿಯ ತಲೆಗೆ ಇಟ್ಟಿಗೆಯಿಂದ ಹೊಡೆದ ಪತ್ನಿ ಬಳಿಕ ಆತನ ಮೆದುಳಿನ ಮಾಂಸವನ್ನೇ ಬಗೆದು ಹೊರತೆದಿರುವಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಹಾಜಹಾನ್‌ಪುರದಲ್ಲಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದ್ದು, ಭೀಭತ್ಸವಾಗಿದೆ.ಇಟ್ಟಿಗೆಯಿಂದ ತಲೆಗೆ ಹೊಡೆದು ಹೊಡೆದು ಮಹಿಳೆ ತನ್ನ ಗಂಡನನ್ನು ಕೊಂದೇ ಬಿಟ್ಟಿದ್ದಾಳೆ. ಗಂಡನ ತಲೆಯಿಂದ ಮಿದುಳು ಹೊರಗೆ ಬರುವವರೆಗೂ ಮಹಿಳೆ ಇಟ್ಟಿಗೆಯಿಂದ ಹೊಡೆದಿದ್ದಾಳೆ.

ಬಳಿಕ ಗಂಡನ ದೇಹದ ಮೇಲೆ ಕುಳಿತು ಆತನ ತಲೆಯಿಂದ ಮಿದುಳು ಮಾಂಸವನ್ನು ಬಗೆದು ಹೊರಗೆ ತೆಗೆದಿದ್ದಾಳೆ. ನಾನು ಇವತ್ತು ನಿನ್ನ ತಲೆ ಹುಡಿ ಮಾಡುತ್ತೇನೆ ಎಂದು ಮಧ್ಯೆ ಮಧ್ಯೆ ಬೊಬ್ಬೆ ಹೊಡೆದು ಕಿರುಚುತ್ತಾ ಆಕೆ ಗಂಡನ ತಲೆ ಒಡೆದಿದ್ದಾಳೆ. ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಹಿಳೆ ಮಾತ್ರ ಸುಮ್ಮನಿರದೇ ಪೊಲೀಸರ ಮುಂದೆಯೇ ಗಂಡನ ಮಿದುಳು ಬಗೆಯುವ ಕೃತ್ಯ ಮುಂದುವರೆಸಿದ್ದಾಳೆ.ಸತ್ಯಪಾಲ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, 20 ವರ್ಷ ಹಿಂದೆ ಇವರಿಬ್ಬರ ಮದುವೆ ನಡೆದಿತ್ತು.
ಮಗಳು ಬಿಎ ಓದುತ್ತಿದ್ದರೆ ಮಗ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಗಾಯತ್ರಿ ಸಸ್ಯಹಾರಿಯಾಗಿದ್ದರೆ, ಸತ್ಯಪಾಲ್‌ಗೆ ಮಾಂಸದಡುಗೆ ಎಂದರೆ ಪಂಚಪ್ರಾಣ, ಹೀಗಾಗಿ ಆತ ಆಗಾಗ ಮನೆಯಲ್ಲಿ ಮಾಂಸದಡುಗೆ ಮಾಡುವಂತೆ ಪತ್ನಿಯನ್ನು ಕೇಳುತ್ತಿದ್ದ.
ईंट से फोड़ा पति का सिर, फिर छाती पर बैठ खोपड़ी में हाथ डाल फेंके मांस के लोथड़े.. पुलिस के सामने भी नहीं मानी वहशी बनी धर्म पत्नि
— TRUE STORY (@TrueStoryUP) August 8, 2024
….
UP के शाहजहांपुर में दिल दहलाने वाली वारदात हुई है। विवाद के बाद घर के दरवाजे पर पत्नी ने पति का सिर ईंट से कुचल दिया। सीने पर बैठकर हाथों से… pic.twitter.com/lJtFTwJ3UV
ಈ ಆಹಾರದಲ್ಲಿನ ವೈವಿಧ್ಯತೆಯ ಗಂಡ ಹೆಂಡತಿ ಮಧ್ಯೆ ಸದಾ ಜಗಳಕ್ಕೆ ಕಾರಣವಾಗಿತ್ತು. ಅಲ್ಲದೇ ಕೆಲವೊಮ್ಮೆ ಸತ್ಯಪಾಲ್ ಇದೇ ವಿಚಾರವಾಗಿ ಗಾಯತ್ರಿಯನ್ನು ಹೊಡೆಯುತ್ತಿದ್ದ. ಅದೇ ರೀತಿ ಘಟನೆ ನಡೆದ ದಿನವೂ ಕೂಡ ಸತ್ಯಪಾಲ್ ಮಾಂಸದೂಟಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ ಇದಕ್ಕೆ ಗಾಯತ್ರಿ ಒಲ್ಲೆ ಎಂದಾಗ ಆತನಿಗೂ ಕೋಪ ಬಂದಿದ್ದು, ಇಬ್ಬರ ಮಧ್ಯೆ ಬಾರಿ ವಾಕ್ಸಮರ ನಡೆದಿದೆ.




