• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭೀತಿ ಹೆಚ್ಚುತಿರುವ ಕೃಷ್ಣೆ.?ಎರಡ ದಶಕಗಳು ಕಳೆದರು ಸೀಗದ ಪುನರ್ವಸತಿ.

ಪ್ರತಿಧ್ವನಿ by ಪ್ರತಿಧ್ವನಿ
July 30, 2024
in Top Story, ಇತರೆ / Others
0
Share on WhatsAppShare on FacebookShare on Telegram

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆ ಹಾಗೂ ಮಹಾರಾಷ್ಟ್ರದ ಇತರೆ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರ ಹಾಕುತ್ತಿರುವುದರಿಂದ ತಾಲೂಕಿನ ಕೆಲವು ಗ್ರಾಮಗಳು ಪ್ರವಾಹ ಭೀತಿಯನ್ನು ಎದುರಿಸುತ್ತಿವೆ.ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ಕುಸನಾಳ,ಜೋಗುಳ, ಶಿರಗುಪ್ಪಿ, ಉಗಾರ್ b k, ಉಗಾರ ಖುರ್ದ್, ಐನಾಪೂರ, ಕಾತ್ರಾಳ, ತಂಗಡಿ,ಶಿನಾಳ, ಹುಳಗಬಾಳ, ಹಾಳ್ಯಾಳ, ದರೂರ, ನಾಗನೂರ್ pk, ಖವಂಟಗೋಪ, ಶೇಗುಣಶಿ, ಅವರಖೋಡ,ಸಪ್ತಸಾಗರ,ಸತಿ, ಸವದಿ, ಝಾಜರವಾಡ,ಗ್ರಾಮದ ಸುತ್ತಮುತ್ತಲೀನ ನದಿ ತೀರದ ರೈತಸರಲ್ಲಿ ಮಳೆಗಾಲ ಆರಂಭಗೊಂಡರೆ ಒಂದೆಡೆ ಖುಷಿ ಇನ್ನೊಂದೆಡೆ ಆತಂಕದ ನಡುವೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿರಂತರವಾಗಿದೆ.

ADVERTISEMENT

ಕೃಷ್ಣಾನದಿ ಉಕ್ಕಿ ಹರಿದು ನೀರಿನ ಪ್ರವಾಹ ಹೆಚ್ಚಾದಾಗ ಆತಂಕ ಸೃಷ್ಠಿ ಮಾಡಿ ರೈತರು ಮತ್ತು ಸಾರ್ವಜನಿಕರನ್ನು ಭಾಗಶಃ ಕಾಡುತ್ತಿರುವುದಂತು ವಾಸ್ತವ.2005, 2009 ಮತ್ತು 2019ರಲ್ಲಿ ಉಂಟಾಗಿದ್ದ ಪ್ರವಾಹದ ರುದ್ರನರ್ತನವನ್ನು ಇಲ್ಲಿಯ ಗ್ರಾಮಸ್ಥರು ಇಂದಿಗೂ ಮರೆತಿಲ್ಲ. 2005ರಲ್ಲಿ ಉಂಟಾದ ಪ್ರವಾಹ ಈ ಭಾಗದ ಮನೆ, ಬೆಳೆ, ಕೋಟ್ಯಾಂತರ ಮೊತ್ತದ ಸಾರ್ವಜನಿಕ ಆಸ್ತಿ ಪಾಸ್ತಿ ಕೊಚ್ಚಿಕೊಂಡು ಹೋಗುವಂತೆ ಮಾಡಿತ್ತು. ಪ್ರವಾಹಕ್ಕೆ ತುತ್ತಾಗಿದ್ದ ಹಳ್ಳಿಗರಿಗೆ ಅಂದು ರಾಜ್ಯ ಸರಕಾರ, ಹಲವಾರು ಸಂಘ ಸಂಸ್ಥೆಗಳ, ದಾನಿಗಳ ನೆರವಿಗೂ ಮನವಿ ಮಾಡಿತ್ತು. ಅದರ ಫಲವಾಗಿ ಹಲವಾರು ಸಂಸ್ಥೆಗಳು ಜಿಲ್ಲಾಡಳಿತ ಪ್ರವಾಹಕ್ಕೆ ಸಿಲುಕಿ ನಲುಗಿದವರಿಗೆ ಆಹಾರ ಪೊಟ್ಟಣ, ಶಾಲು, ಜಮಖಾನೆ, ಕುಡಿಯುವ ನೀರು, ಶೆಟಡ್‌ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು.

ಆಗ ಆದ ನಷ್ಟ ಪರಿಹಾರದ ಜೊತೆ ಮುಳುಗಡೆ ಪ್ರದೇಶಗಳನ್ನು ಗುರುತಿಸಿ ಪರಿಹಾರ ಧನ ಕೂಡಾ ನೀಡಿತ್ತು. ಇಲ್ಲಿನ ಬಹುತೇಕ ಗ್ರಾಮಗಳ ಜನರ ಜಮೀನುಗಳು ಮುಳಗಡೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಆಶ್ರಯ ವಿಷಯಕ್ಕೆ ಸಂಬಂದಿಸಿದಂತೆ ಅಸ್ಕಿ ಹಾಗೂ ತಮದಡ್ಡಿ ಗ್ರಾಮಸ್ಥರ ತಕರಾರು ಸರಕಾರದ ಜೊತೆ ಮುಂದುವರೆದಿದೆ. ದರೂರ, ಹಳ್ಯಾಳ, ಕಾತ್ರಾಳ ಗ್ರಾಮಕ್ಕೆ ಸಂಬಂಧಿಸಿದಂತೆ ಹಲವಾರು ಪ್ರದೇಶಗಳನ್ನು ಗುರುತಿಸಿದ್ದರು ಸಮಸ್ಯೆ ನಿವಾರಣೆಯಾಗಿಲ್ಲ.

ಇದೀಗ ಅರಣ್ಯ ಇಲಾಖೆ ಜಾಗೆ ತೋರಿಸಿದ್ದು, ಸರಕಾರ ಮಟ್ಟದಲ್ಲಿ ಕಂದಾಯ ಭೂಮಿ ಹಸ್ತಾಂತರಿಸಿ ಅರಣ್ಯ ಭೂಮಿ ಪಡೆದುಕೊಳ್ಳುವ ಪ್ರಕ್ರಿಯೆ ಸರಕಾರ ಮಟ್ಟದಲ್ಲಿದೆ. ಅದೇ ರೀತಿ ಸಂಪೂರ್ಣ ಮುಳಗಡೆಯಾಗುವ ಕಾತ್ರಾಳ ಮತ್ತು ಇನಿತರ ಗ್ರಾಮಕ್ಕೆ ನೇರವಾಗಬೇಕೆಂದು ಕೇಳುತೆವೆ.ಇಂದು ಸೋಮವಾರ ಕೃಷ್ಣಾ ನದಿಗೆ 2,77,820 ಕ್ಯೂಸೆಕ್ ನೀರು ಹರಿದು ಬಂದಿದ್ದು ಮತ್ತಷ್ಟು ಪ್ರವಾಹದ ಬೀತಿ ಗ್ರಾಮಸ್ಥರಲ್ಲಿ ಆವರಿಸಿದೆ.

ಕಾಗವಾಡ ಮತ್ತು ಅಥಣಿ ತಾಲೂಕುಗಳ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮದ ಕೃಷ್ಣಾ ನದಿ ತೀರದ ಗ್ರಾಮವಾಗಿದ್ದು ಗ್ರಾಮದ ತೋಟದ ವಸತಿಯಲ್ಲಿನ ಹಲವಾರು ಕುಟುಂಬಗಳ ತೋಟದ ಪ್ರದೇಶ ಜಲಾವೃತವಾಗಿದ್ದು, ನೀರು ಗ್ರಾಮವನ್ನು ಸುತ್ತುವರೆಯುತ್ತಿದ್ದು, ಆ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಅವರ ಮನವೊಲಿಸಿ ಅವರನ್ನು ಹಾಗೂ ಜಾನವಾರುಗಳನ್ನು ಗ್ರಾಮದ ಮನೆಗಳಿಗೆ ಹಾಗೂ ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಿದ್ದಾರೆ. ಹಾಗೂ ಗಂಜಿ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ಆದಷ್ಟು ಬೇಗನೆ ಗಂಜಿ ಕೇಂದ್ರ ತೆರೆಯಲು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಬೆಳೆ ಹಾನಿ : ಕೃಷ್ಣಾ ನದಿ ತೀರದ ಬಹುತೇಕ ರೈತರ ಜಮೀನಿಗೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.ಪ್ರವಾಹದ ಕುರಿತು ಜಾಗೃತಿ ಮೂಡಿಸಲು ಸರಕಾರದಿಂದ ಡಂಗೂರಗಳನ್ನು ಹಾಕಲಾಗುತ್ತಿದ್ದು, ಜೊತೆಗೆ ಆಯಾ ಗ್ರಾಮದ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ತುರ್ತು ಚಿಕಿತ್ಸೆಗಾಗಿ ಬೀಡು ಬಿಟ್ಟಿದ್ದು ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ.

ಮಹಾರಾಷ್ಟ್ರದ ಜಲಾನಯನ ಅಧಿಕಾರಿಗಳ ಜೊತೆ ಇಲ್ಲಿನ ಕೃಷ್ಣಾ ಮೇಲದಂಡೆ ಯೋಜನೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವುದರಿಂದ ಹಾಗೂ ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ ನದಿಯ ನೀರನ್ನು ಇಲ್ಲಿನ ಹಿಪ್ಪರಗಿ ಜಲಾಶಯದಿಂದ ಹಾಗೂ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬೀಡುತ್ತಿರುವುದರಿಂದ ಪ್ರವಾಹ ಅಷ್ಟಾಗಿ ಬರಲಿಕ್ಕಿಲ್ಲ ಎಂಬುದು ಅಧಿಕಾರಿಗಳ ಅನಿಸಿಕೆ ಆದರೂ ಸದ್ಯಕ್ಕೆ ಪ್ರವಾಹ ಬೀತಿ ಅಧಿಕವಾಗಿದ್ದು ಇನ್ನೂ ಇದೇ ಪ್ರಮಾಣದಲ್ಲಿ ನೀರು ಹರಿದುಬರುವ ಸಂಭವವಿರುವುದರಿಂದ ತಾಲ್ಲೂಕು ಆಡಳಿತ ಎಲ್ಲ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದೆ.

ಆದರೂ ಹಿಪ್ಪರಗಿ ಜಲಾಶಯದ ಹಿನ್ನೀರಿನಿಂದಾಗಿ ರೈತಾಪಿ ಜನತೆ ಸದಾ ಆತಂಕದಲ್ಲಿರುವುದಂತು ಸತ್ಯ.ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಿದ್ದ ಕಡೆ ಕಾಳಜಿ ಕೇಂದ್ರವನ್ನು ತೆರಯಲಾಗಿದ್ದು, ನದಿ ಪಾತ್ರದ ಜನರು ಜಾಗ್ರತರಾಗಿರಬೇಕು. ತಾಲೂಕು ಆಡಳಿತ ಸದಾ ತಮ್ಮ ಜೊತೆಗೆ ಇರುತ್ತದೆ.ತಹಶೀಲ್ದಾರರು, ಅಥಣಿ ಹಾಗೂ ಕಾಗವಾಡ

Tags: #[pratidhvanidigitalGovernment of IndiaWeather Forecast
Previous Post

ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ಕಾಡುವ ಬ್ಲೀಡಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ.!

Next Post

ದೇವರ ನಾಡು ಕೇರಳದಲ್ಲಿ ಗುಡ್ಡ ಕುಸಿದು ಭೀಕರ ದುರಂತ ! ಇದುವರೆಗೂ 47 ಮಂದಿ ಮೃತ !

Related Posts

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್
Top Story

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
March 5, 2026
0

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌ ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ...

Read moreDetails
ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

March 5, 2026
ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
Next Post
ದೇವರ ನಾಡು ಕೇರಳದಲ್ಲಿ ಗುಡ್ಡ ಕುಸಿದು ಭೀಕರ ದುರಂತ ! ಇದುವರೆಗೂ 47 ಮಂದಿ ಮೃತ !

ದೇವರ ನಾಡು ಕೇರಳದಲ್ಲಿ ಗುಡ್ಡ ಕುಸಿದು ಭೀಕರ ದುರಂತ ! ಇದುವರೆಗೂ 47 ಮಂದಿ ಮೃತ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada