ದೇಹದಲ್ಲಿ ಕೊಲೆಸ್ಟ್ರಾಲ್ ಜಾಸ್ತಿಯಾದರೆ ಇದ್ದಕ್ಕಿದ್ದ ಹಾಗೆ ನಮ್ಮ ತೂಕ ಹೆಚ್ಚಾಗುತ್ತದೆ, ಇಷ್ಟು ಮಾತ್ರವಲ್ಲದೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ. ಮುಖ್ಯವಾಗಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣ ನಮ್ಮ ಜೀವನ ಶೈಲಿ ಹಾಗೂ ನಾವು ಸೇವಿಸುವಂತಹ ಆಹಾರ. ಹೆಲ್ದಿ ಆಹಾರವನ್ನು ಬಿಟ್ಟು ಜಂಕ್ ಫುಡ್ ಕಡೆಗೆ ಜನ ಆಕರ್ಷಿತರಾಗುತ್ತಿದ್ದರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಿದೆ. ಇದರಿಂದ ಏಜಿಗೆ ಮಿತಿಮೀರಿ ತೂಕ ಬೆಳೆಯುತ್ತಿದೆ. ತೂಕ ಮಾತ್ರ ಅಲ್ಲದೇ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಗೊತ್ತಿಲ್ಲದೆ ನಮ್ಮನ್ನ ಕುಗ್ಗಿಸುತ್ತಿವೆ..ಜನರನ್ನ ಅಪಾಯಕ್ಕೆ ತಳ್ಳುತ್ತಿದೆ..

ಹೃದಯ ಭಾಗಕ್ಕೆ ತೊಂದರೆ
ಕೆಟ್ಟ ಕೊಲೆಸ್ಟ್ರಾಲ್ನಿಂದಾಗಿ ದೇಹದಲ್ಲಿ ಮುಖ್ಯವಾಗಿ ಹೃದಯದ ಅಪಧಮನಿಯಗಳಿಗೆ ಹಾಗೂ ರಕ್ತನಾಳಗಳಿಗೆ ತೊಂದರೆ ಉಂಟಾಗುತ್ತದೆ. ರಕ್ತ ಸಂಚಾರ ಸರಿಯಾಗಿ ಆಗದಿದ್ದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಎದುರಾಗುತ್ತದೆ ಕೆಲವೊಮ್ಮೆ ದೇಹದ ಗೆಲ್ಲ ಭಾಗಕ್ಕೂ ಸಂಪೂರ್ಣವಾಗಿ ವ್ಯಕ್ತ ಸಂಚಾರ ನಿಂತು ಹೋಗಬಹುದು. ಇಂಥ ಸಂದರ್ಭದಲ್ಲಿ ಹಾರ್ಟ್ ಅಟ್ಯಾಕ್ ಮತ್ತು ಪಾರ್ಶ್ವ ವಾಯುವಾಗುತ್ತದೆ..

ಸ್ಟ್ರೋಕ್
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ನಿಮ್ಮ ರಕ್ತನಾಳಗಳಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ. ಇದು ಹೆಚ್ಚಾಗುತ್ತಾ ಹೋದಂತೆ ನಿಮ್ಮ ಬ್ಲಡ್ ಫ್ಲೋ ಗೆ ತೊಂದರೆಯಾಗುತ್ತದೆ.ಇದರಿಂದಾಗಿ ಕೆಲವು ಬಾರಿ ಬ್ಲಡ್ ಕ್ಲಾಟ್ ಆಗುತ್ತದೆ ಆಗ ಸ್ಟ್ರೋಕ್ ಆಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ.
ಮೆದುಳಿಗೆ ತೊಂದರೆ
ಕೆಲವು ಬಾರಿ ಮೆದುಳಿನಲ್ಲೂ ಕೊಲೆಸ್ಟ್ರಾಲ್ ಶೇಖರಣೆ ಯಾಗುತ್ತದೆ. ಅದರಿಂದಾಗಿ ಮೆದುಳಿನ ಆಕ್ಟಿವಿಟೀಸ್ ಬದಲಾಗುತ್ತಿದೆ. ಮೆದುಳಿನ ಭಾಗಕ್ಕೆ ರಕ್ತ ಸಂಚಾರ ಸರಿಯಾಗಿ ಆಗದೆ ಹೋದರೆ ನೆನಪಿನ ಶಕ್ತಿ ಕುಂಠಿತವಾಗುತ್ತದೆ,ಡಿಪ್ರೆಶನ್ ಗೆ ಹೋಗುತ್ತಾರೆ, ಮಾತನಾಡಲು ಸರಿಯಾಗಿ ಆಗುವುದಿಲ್ಲ ಈ ರೀತಿಯ ಸಮಸ್ಯೆಗಳು ಎದುರಾಗುವುದು ಮಾತ್ರವಲ್ಲದೆ ದೇಹದ ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ.

ಇಷ್ಟು ಮಾತ್ರವಲ್ಲದೆ ಕೊಲೆಸ್ಟ್ರಾಲ್ ಇಂದಾಗಿ ಡಯಾಬಿಟಿಸ್ ಕೂಡ ಶುರುವಾಗುತ್ತದೆ ವಿಶೇಷವಾಗಿ ಟೈಪ್ ಟು ಡಯಾಬಿಟಿಸ್ ಬರುವಂತದ್ದು ಕೊಲೆಸ್ಟ್ರಾಲ್ ನಿಂದಾಗಿ. ಕೆಲವರಿಗೆ ಕಾಲುಗಲಿ ಊತ ಶುರುವಾಗುತ್ತದೆ ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ ಕಾಲುಗಳು ನೋವು ಹಾಗೂ ಸ್ವೆಲ್ಲಂಗ್ ಹೆಚ್ಚಾಗುತ್ತದೆ.