ಬೇಸಿಗೆ ಬಂತು ಅಂದ್ರೆ ಮಾವಿನ ಹಣ್ಣು ಮತ್ತೆ ಹಲಸಿನ ಹಣ್ಣಿನ ಸೀಸನ್ ಅಂತ ಹೇಳಿದ್ರೆ ತಪ್ಪಾಗಲ್ಲ. ಇದರ ಜೊತೆಗೆ ಕರ್ಬೂಜ ಹಣ್ಣನ್ನು ಕೂಡ ಜನ ಇಷ್ಟಪಟ್ಟು ತಿಂತಾರೆ.. ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ, ಬಾಡಿ ಬಿಹೈಡ್ರೇಟ್ ಆದಾಗ ಸಾಕಷ್ಟು ಅನಾರೋಗ್ಯಗಳು ಸಮಸ್ಯೆ ಎದುರಾಗಬಹುದು.
![](https://pratidhvani.com/wp-content/uploads/2024/06/IMG_7997.jpeg)
ದೇಹದಲ್ಲಿ ನೀರಿನ ಅಂಶ ಜಾಸ್ತಿ ಆಗೋದಕ್ಕೆ ಕಲ್ಲಂಗಡಿ ಹಣ್ಣು ಸೌತೆಕಾಯಿ ಇದರ ಜೊತೆಗೆ ಬೆಸ್ಟ್ ಅಂದ್ರೆ ಕರ್ಬುಜ ಹಣ್ಣಿನ ಜ್ಯೂಸ್ . ಹೆಚ್ಚುಜನ ಈ ಜ್ಯೂಸ್ ಅನ್ನ ಕುಡಿದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ ದೇಹವನ್ನ ತಂಪಾಗಿರಿಸುವುದಕ್ಕೆ ಇದು ತುಂಬಾನೇ ಸಹಾಯಕಾರಿ.
![](https://pratidhvani.com/wp-content/uploads/2024/06/IMG_7996.jpeg)
ಇನ್ನು ಕರ್ಬುಜ ಹಣ್ಣನ್ನ ತಿಂದು ಅಥವಾ ಅದರ ಜ್ಯೂಸನ್ನು ಕುಡಿದು ಜನರು ಕರ್ಬುಜ ಹಣ್ಣಿನ ಬೀಜವನ್ನು ಎಸಿತಾರೆ. ಆದರೆ ಬೀಜದಿಂದಲೂ ನಮ್ಮ ಆರೋಗ್ಯಕ್ಕೆ ಮುಖ್ಯವಾಗಿ ತ್ವಚೆಗೆ ತುಂಬಾನೇ ಪ್ರಯೋಜನಕಾರಿಯಾಗಿದೆ, ಕರ್ಬುಜದ ಸೀಡ್ಸ್ ಏನೆಲ್ಲ ಬೆನಿಫಿಟ್ಸ್ ಇದೆ ಅನ್ನೋದ್ರ ಮಾಹಿತಿ ಇಲ್ಲಿದೆ..
![](https://pratidhvani.com/wp-content/uploads/2024/06/IMG_8003.jpeg)
ಕರ್ಬುಜ ಹಣ್ಣಿನ ಬೀಜವನ್ನು ಚೆನ್ನಾಗಿ ಒಣಗಿಸಿ ನಂತರ ಅದನ್ನು ರುಬ್ಬಿ ಪುಡಿಮಾಡಿ ಒಂದು ಡಬ್ಬದಲ್ಲಿ ಹಾಕಿಡಿ. ನಿಮಗೆ ಫೇಸ್ ಪ್ಯಾಕ್ ಹಾಕಬೇಕು ಎನಿಸಿದಾಗ ಆ ಪುಡಿಯೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ಇರುವಂತಹ ಡೆಡ್ ಸ್ಕಿನ್ ಅನ್ನ ತೆಗೆದು ಹಾಕುವುದಕ್ಕೆ ಇದು ತುಂಬಾನೇ ಸಹಾಯಕಾರಿ.
![](https://pratidhvani.com/wp-content/uploads/2024/06/IMG_8004.jpeg)
ಇನ್ನು ಒಂದು ಟೇಬಲ್ ಸ್ಪೂನ್ ಅಷ್ಟು ಕರ್ಬುಜ ಬೀಜಗಳ ಪುಡಿಗೆ, ಅದಕ್ಕೆ ಬೇಕಾದಷ್ಟು ಮೊಸರನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.ಪೇಸ್ಟ್ ತಯಾರಿಸಿ ನಿಮ್ಮ ಮುಖಕ್ಕೆ ಅಪ್ಲೈ ಮಾಡಿ. ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ಮುಖವನ್ನು ವಾಶ್ ಮಾಡಿ. ಇದರಿಂದ ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಇನ್ನು ಕರ್ಬುಜದಲ್ಲಿ ವಿಟಮಿನ್ ಎ ವಿಟಮಿನ್ ಸಿ ಮತ್ತು ವಿಟಮಿನ್ ಇ ಇರುವುದರಿಂದ ಮುಖದಲ್ಲಿ ಇರುವಂತಹ ಯಾವುದೇ ಕಲೆಗಳು ತಕ್ಷಣಕ್ಕೆ ಕಡಿಮೆಯಾಗುತ್ತದೆ.
![](https://pratidhvani.com/wp-content/uploads/2024/06/IMG_8007.jpeg)
ಇನ್ನು ಕೆಲವೊಬ್ಬರಿಗೆ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ, ಆಯ್ಲಿ ಸ್ಕಿನ್ ಅಂತಾನು ಹೇಳ್ತಾರೆ. ಇದನ್ನ ಹೋಗಲಾಡಿಸುವುದಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಕರ್ಬುಜ ಬೀಜದ ಪುಡಿ ಅರ್ಧ ಟೇಬಲ್ ಸ್ಪೂನಷ್ಟು ಕಡಲೆಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ತಯಾರಿಸಿ ಆ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸ್ಕ್ರಬ್ ಮಾಡಿ ಮುಖವನ್ನ ಬೆಚ್ಚಗಿನ ನೀರು ನಿಂತ ವಾಶ್ ಮಾಡುವುದರಿಂದ ಮುಖದಲ್ಲಿ ಇರುವಂತಹ ಆಯಿಲ್ ಕಡಿಮೆಯಾಗುತ್ತದೆ.
![](https://pratidhvani.com/wp-content/uploads/2024/06/IMG_8001.jpeg)