ಸಮ್ಮರ್ ಬಂತು ಅಂದ್ರೆ ನಾವು ಹೆಚ್ಚಾಗಿ ಲಿಕ್ವಿಡ್ ಪದಾರ್ಥಗಳನ್ನ ತಗೊಳ್ತೀವಿ.ಅದ್ರಲ್ಲೂ ಕೂಡ ಜ್ಯೂಸ್ ಮಜ್ಜಿಗೆ ಹೆಚ್ಚು. ಜ್ಯೂಸ್ ಅಂತ ಬಂದಾಗ ಲೆಮೆನ್ ಜ್ಯೂಸ್,ಮಸ್ಕ್ ಮೆಲೆನ್, ವಾಟರ್ ಮೆಲನ್ ಜ್ಯೂಸ್ ಈ ರೀತಿಯ ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸ್ತಿವಿ..ಇದ್ದೆಲ್ಲದರ ಜೊತೆಗೆ ಮತ್ತೊಂದು ಸ್ಪೆಷಲ್ ಜ್ಯೂಸ್ ನ ಜನ ಟ್ರೈ ಮಾಡ್ತಾ ಇದ್ದರೆ.ಈ ಜ್ಯೂಸ್ ಟ್ರೆಂಡ್ ಕ್ರಿಯೇಟ್ ಮಾಡಿದೆ ಅಂದ್ರೆ ತಪ್ಪಾಗಲ್ಲ.. ಯಾವುದಪ್ಪ ಆ ಜ್ಯೂಸ್ ಅಂದ್ರೆ ಹುಣಸೆ ಹಣ್ಣಿನ ಜ್ಯೂಸ್! ಏನಪ್ಪಾ ಇದು ಹುಣಸೆ ಹಣ್ಣನ್ನ ಅಡಿಗೆ ಪದಾರ್ಥಗಳಲ್ಲಿ ಬಳಸುತ್ತಾರೆ ಇಲ್ಲ ಅಂದ್ರೆ ಹುಣಸೆಹಣ್ಣಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಹಾಗೆ ತಿನ್ನುತ್ತಾರೆ,ಈಗ ಜ್ಯೂಸ್ ಕೂಡ ಮಾಡ್ತಾರಾ ಅಂತ ಸ್ವಲ್ಪ ಶಾಕ್ ಆಗ್ಬಹುದು..ಹೌದು ಈ ಹುಣಸೆ ಹಣ್ಣಿನ ಜ್ಯೂಸ್ನಿಂದ ಸಾಕಷ್ಟು ಹೆಲ್ತ್ ಬೆನಿಫಿಟ್ಸ್ ಕೂಡ ಇದೆ..
![](https://pratidhvani.com/wp-content/uploads/2024/06/IMG_7973.jpeg)
ದೇಹವನ್ನು ತಂಪಾಗಿಸುತ್ತದೆ
ಹುಣಿಸೆಹಣ್ಣಿನ ಜ್ಯೂಸ್ ನಮ್ಮ ದೇಹವನ್ನು ನೈಸರ್ಗಿಕವಾಗಿ ತಂಪಾಗಿರಿಸುತ್ತದೆ.ಹುಣಸೆ ಹಣ್ಣಿನ ಜ್ಯೂಸ್ ನಲ್ಲಿ ಪುದಿನ ಹಾಗೂ ಜೀರಿಗೆ ಅಂತ ಪದಾರ್ಥಗಳನ್ನ ರುಚಿಗಾಗಿ ಬಳಸಲಾಗುತ್ತದೆ. ಜೀರಿಗೆ ತುಂಬಾನೆ ತಂಪು..ಮತ್ತು ಹುಳಿ ಮತ್ತು ಸಿಹಿ ಎರಡರ ರುಚಿ ಇರುವ ಈ ಹುಣಸೆಹಣ್ಣನ್ನು ದೇಹವನ್ನು ನ್ಯಾಚುರಲ್ ಆಗಿ ತಂಪಾಗಿರುತ್ತದೆ ಇದು ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
![](https://pratidhvani.com/wp-content/uploads/2024/06/IMG_7970.jpeg)
ಜೀರ್ಣಕ್ರಿಯೆಗೆ ಉತ್ತಮ
ಹುಣಸೆ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ಹೊಟ್ಟೆಯ ಉಬ್ಬರ ಹಾಗೂ ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸಲು ಸಹಕಾರಿ. ಇನ್ನೂ ಹುಣಸಿ ಹಣ್ಣಿನಲ್ಲಿರುವಂತಹ ನೈಸರ್ಗಿಕ ಆಮ್ಲವು ಪಿತ್ತದ ಉತ್ಪಾದನೆಯನ್ನ ನಿವಾರಣೆ ಮಾಡುತ್ತದೆ.
![](https://pratidhvani.com/wp-content/uploads/2024/06/IMG_7969.jpeg)
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಹುಣಸೆ ಹಣ್ಣಿನ ಜ್ಯೂಸ್ ಅನ್ನ ಬೇಸಿಗೆ ತಿಂಗಳಿನಲ್ಲಿ ಕುಡಿಯುವುದರಿಂದ. ಬೇಸಿಗೆಯಲ್ಲಿ ಕಂಡುಬರುವಂತಹ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ಸಹಾಯಕಾರಿ ಹಾಗೂ ದೇಹವು ಹೆಚ್ಚು ಸ್ಥಿತಿ ಸ್ಥಾಪಕತ್ವವನ್ನ ತಂದುಕೊಳ್ಳಲು ಉಪಯುಕ್ತ. ಇನ್ನೂ ಹುಣಸೆಹಣ್ಣಿನ ವಿಟಮಿನ್ ಸಿ ಅಂಶ ಇರೋದ್ರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
![](https://pratidhvani.com/wp-content/uploads/2024/06/IMG_7968.jpeg)
ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತದೆ..
ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಿರುವುದು ಅತ್ಯಗತ್ಯ. ಇಲ್ಲವಾದರೆ ಬಾಡಿ ಡಿ ಹೈಡ್ರೇಟ್ ಆಗಿ ಸಾಕೆಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.ಇಂತಹ ಸಂದರ್ಭದಲ್ಲಿ ಹುಣಸೆಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚು ಮಾಡುತ್ತದೆ ಹಾಗೂ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.