ಸೀಬೆ ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ತಿನ್ನುವಂತಹ ಒಂದು ಹಣ್ಣು.ಸೀಬೆ ಹಣ್ಣಿನಲ್ಲಿ ಅಧಿಕ ಪೋಷಕಾಂಶಗಳು ಹಾಗೂ ಔಷಧಿ ಗುಣಗಳು ಇವೆ. ಈ ಹಣ್ಣು ಮಾತ್ರವಲ್ಲದೆ ಸೀಬೆ ಮರದ ಚಿಗುರಲೆಯನ್ನು ಕೂಡ ಸಾಕಷ್ಟು ಔಷಧಿಗಳಲ್ಲಿ ಬಳಸುತ್ತಾರೆ. ನಮ್ಮ ದೇಹಕ್ಕೆ ಅದರಲ್ಲೂ ಆರೋಗ್ಯಕ್ಕೆ ಬೇಕಾಗುವಂತ ಸಾಕಷ್ಟು ಅಂಶ ಸೀಬೆಹಣ್ಣಿನಲ್ಲಿದ್ದು ನಮ್ಮ ಸುತ್ತಮುತ್ತ ಅಥವಾ ಕೈಗೆಟಕುವಂತೆ ಬೆಳೆಯುವ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದಾಗಿದ್ದು ಇದು ಸಾಕಷ್ಟು ರೋಗಗಳನ್ನ ಔಷದಿ ಯಾಗಿದೆ.
![](https://pratidhvani.com/wp-content/uploads/2024/05/IMG_7579.jpeg)
ಸೀಬೆ ಹಣ್ಣಿನಲ್ಲಿ ಎರಡು ತರವಿದ್ದು ಕೆಂಪು ಸೀಬೆ ಹಾಗೂ ಬಿಳಿ ಸೀಬೆಹಣ್ಣು.ಕೆಂಪು ಸೀಬೆಯಲ್ಲಿ ಹೆಚ್ಚು ಔಷಧಿ ಅಂಶಗಳಿವೆ ಹಾಗೂ ಬಿಳಿ ಸೀಬೆಹಣ್ಣು ಹಣ್ಣಿನ ರುಚಿ ತುಂಬಾ ಇರುತ್ತದೆ. ಮತ್ತು ಸೀಬೆ ಹಣ್ಣಿನ ಸಿಪ್ಪೆ, ತಿರುಳು ಬೀಜ ಎಲ್ಲವನ್ನು ಕೂಡ ತಿನ್ನಬಹುದು ಆದರೆ ಕೆಲವು ಬಾರಿ ಬೀಜಗಳು ಗಟ್ಟಿ ಇದ್ದಾಗ ಅದನ್ನು ಸೇವಿಸಿದಾಗ ಹೊಟ್ಟೆ ನೋವು ಬರುವಂತಹ ಚಾನ್ಸಸ್ ಜಾಸ್ತಿ ಇರುತ್ತೆ. ಇನ್ನು ಈ ಸೀಬೆ ಹಣ್ಣಿನಿಂದ ಆರೋಗ್ಯ ಪ್ರಯೋಜನಗಳು ಏನೆಲ್ಲ ಇದೆ ಅನ್ನೋದರ ಮಾಹಿತಿ ಹೀಗಿದೆ.
![](https://pratidhvani.com/wp-content/uploads/2024/05/IMG_7580.jpeg)
ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಿಣಿಯರು ಸೀಬೆ ಹಣ್ಣನ್ನ ತಿನ್ನೋದು ತುಂಬಾನೇ ಉತ್ತಮ.ಸೀಬೆಹಣ್ಣಿನ ಸಿಪ್ಪೆ ಹಾಗೂ ತಿರುಳು ಒಳ್ಳೆಯದು ಆದರೆ ಅದರ ಬೀಜವನ್ನು ತಿನ್ನಬಾರದು, ಇದಕ್ಕೆ ನೀವು ಜೇನುತುಪ್ಪವನ್ನು ಬೆರೆಸಿ ಕೂಡ ಸೇವಿಸಬಹುದು. ಇದನ್ನು ತಿನ್ನೋದ್ರಿಂದ ಮುಖ್ಯವಾಗಿ ಜಾಂಡಿಸ್ ಬರುವುದಿಲ್ಲ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳು ಒಬ್ಬಸ ಕೂಡ ನಿವಾರಣೆ ಆಗುತ್ತದೆ.
![](https://pratidhvani.com/wp-content/uploads/2024/05/IMG_7578.jpeg)
ವೈಟ್ ಲಾಸ್
ತೂಕ ಕಡಿಮೆ ಆಗ್ಬೇಕು ಎಂದು ಬಯಸುವವರು ಸೀಬೆ ಹಣ್ಣನ್ನ ಸೇವಿಸೋದು ಉತ್ತಮ.ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಹೆಚ್ಚಿರಿವುದರಿಂದ ಡೈಜೇಶನ್ ಗೆ ಒಳ್ಳೆಯದು ಹಾಗು ಬೊಜ್ಜನ್ನು ನಿಯಂತ್ರಿಸುತ್ತದೆ.ಹಾಗೂ ಇದನ್ನ ತಿನ್ನುವುದರಿಂದ ಹೆಚ್ಚು ಪೋಷಕಾಂಶ ದೊರೆಯುತ್ತದೆ ಹಾಗು ಹೊಟ್ಟೆ ತುಂಬಿದಂತಿರುತ್ತದೆ.
![](https://pratidhvani.com/wp-content/uploads/2024/05/IMG_7581-1.jpeg)
ತ್ವಜೆಗೆ ಉತ್ತಮ
ಸೀಬೆ ಹಣ್ಣಿನಲ್ಲಿ ವಿಟಮಿನ್ ಎ ,ಬಿ ಮತ್ತು ಸಿ ಎಲ್ಲವೂ ಇರುವುದರಿಂದ ತ್ವಜೆಯ ರಕ್ಷಣೆಯನ್ನು ಮಾಡುತ್ತದೆ. ದಿನಕೊಂದು ಸೀಬೆ ಹಣ್ಣನ್ನ ತಿನ್ನುವುದರಿಂದ ಮುಖ ದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳು ನಿವಾರಣೆಯಾಗುತ್ತದೆ.ಇದಿಷ್ಟೇ ಅಲ್ಲದೇ ಹೃದಯ ಸಂಬಂಧಿ ಕಾಲಿಯಗಳು ದೂರವಾಗುತ್ತದೆ ಹಾಗೂ ಡೈಯಬೀಟಿಸ್ ಇದ್ದವರಿಗೆ ಬ್ಲಡ್ ಶುಗರ್ ಲೆವೆಲ್ ಅನ್ನ ನಾರ್ಮಲ್ ಆಗಿಡುತ್ತದೆ.