• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಹುಣಸೂರಲ್ಲಿ ಭಾರಿ ಮಳೆ(Heavy Rain).. ಅನ್ನದಾತರ ಬೆಳೆಗಳು ಸರ್ವನಾಶ

ಪ್ರತಿಧ್ವನಿ by ಪ್ರತಿಧ್ವನಿ
May 21, 2024
in ಇತರೆ / Others, ಇದೀಗ
0
ಹುಣಸೂರಲ್ಲಿ ಭಾರಿ ಮಳೆ(Heavy Rain).. ಅನ್ನದಾತರ ಬೆಳೆಗಳು ಸರ್ವನಾಶ
Share on WhatsAppShare on FacebookShare on Telegram

ADVERTISEMENT

ಬಿರುಗಾಳಿ ಮಳೆಗೆ(Stormy Rain) ಹಾರಿಹೋದ ಮನೆಯ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ, ಅತ್ತಿಕುಪ್ಪೆಯಲ್ಲಿ(Attigupe) ಕೆರೆಕೋಡಿ ಒಡೆದು ಬೆಳೆನಾಶ, ಕೊಚ್ಚಿಹೋದ ತೆಂಗಿನ ಸಸಿಗಳು(Coconut seeds).
ಹುಣಸೂರು ತಾಲ್ಲೂಕಿನಾದ್ಯಂತ ಸೋಮವಾರವೂ ವ್ಯಾಪಕ ಮಳೆಯಾಗಿದ್ದು, ತಂಬಾಕು ಹದ ಮಾಡುವ ಎರಡು ಬ್ಯಾರನ್ ಹಾಗೂ ಮನೆಯೊಂದು ಕುಸಿದು ಬಿದ್ದಿದೆ. ಕೆರೆಯೊಂದರ ಕೋಡಿ ಒಡೆದಿದೆ. ತಂಬಾಕು ಹಾಗೂ ಶುಂಠಿ(Ginger) ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಬೆಳೆಗಳು(Crop) ಕೊಳೆಯುವ ಭೀತಿ ಎದುರಾಗಿದೆ.
ಹನಗೋಡು ಹೋಬಳಿಯ(Hobli) ಕಚುವಿನಹಳ್ಳಿ ಗ್ರಾಮದ ಲೇಟ್ ಜವರೇಗೌಡರ ಪತ್ನಿ ಜಯಮ್ಮ ಮತ್ತು ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡದ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಅರಸುಕಲ್ಲಹಳ್ಳಿಯ ಕುಮಾರ್‌ ಎಂಬುವರಿಗೆ ಸೇರಿದ ಮನೆ ಬಿದ್ದು ಹೋಗಿದೆ.
ಹಾರಿ ಹೋದ ಮೇಲ್ಛಾವಣಿ
ಚಿಲ್ಕುಂದದಲ್ಲಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ರಾಮಶೆಟ್ಟರ ಮನೆ ಮೇಲ್ಚಾವಣಿ ಹಾಗೂ ಚಂದ್ರುರವರ ಕೊಟ್ಟಿಗೆಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿ ಹೋಗಿದ್ದು ಮನೆಯೊಳಗಿದ್ದ ದವಸ, ಧಾನ್ಯ, ಬಟ್ಟೆ, ಮತ್ತಿತರ ಪದಾರ್ಥಗಳು ನೀರಿನಲ್ಲಿ ತೋಯ್ದು ಹಾಳಾಗಿದೆ.
ಜೋಳದ ಬಿತ್ತನೆ ನಾಶ
ಗುರುಪುರ ಗ್ರಾಮ ಪಂಚಾಯತಿ(Panchayat) ವ್ಯಾಪ್ತಿಯ ಕಾಳೇನಹಳ್ಳಿಯ ತಗ್ಗುಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದ ಮಳೆ ನೀರು(Rain Water) ನಿಂತಿದ್ದು, ಇತ್ತೀಚೆಗೆ ಬಿತ್ತನೆ ಮಾಡಿದ್ದ ನಟೇಶ್, ಶ್ರೀನಿವಾಸ್, ಆನಂದ, ಕಲೀಂ ಮತ್ತಿತರ ರೈತರಿಗೆ ಸೇರಿದ ಮುಸುಕಿನ ಜೋಳ(Jowar) ಹಾಗೂ ರಸಗೊಬ್ಬರ ಸಹಿತ ನೀರುಪಾಲಾಗಿದೆ.
ಕೋಡಿ ಒಡೆದ ಅತ್ತಿಕುಪ್ಪೆ ಕೆರೆ
ಅತ್ತಿಕುಪ್ಪೆಯ 7 ಎಕರೆ ವಿಸ್ತೀರ್ಣದ ಕೆರೆಯ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಜಮೀನಿನ ಮೇಲೆ ಹರಿದಿದ್ದು, ಕೆರೆ ಕೆಳಭಾಗದ ಅಡಿಕೆ(Nut), ತೆಂಗಿನ ತೋಟ(Coconut Plantation), ಶುಂಠಿ(Ginger), ತಂಬಾಕು(Tobacco) ಜಮೀನು ಜಲಾವೃತವಾಗಿದ್ದು, ಕಣ್ಣು ಹಾಯಿಸಿದೆಲ್ಲೆಡೆಯೆಲ್ಲ ರೈತರ(Farmers) ಜಮೀನುಗಳು ಕೆರೆಗಳಂತೆ ಗೋಚರಿಸುತ್ತಿವೆ.
ಕಂದಾಯ ಅಧಿಕಾರಿಗಳು ಭೇಟಿ
ಹನಗೋಡು ನಾಡಕಚೇರಿಯ ರಾಜಸ್ವ ನಿರೀಕ್ಷಕ ಪ್ರಶಾಂತರಾಜೇಅರಸ್, ಗ್ರಾಮ ಆಡಳಿತಾಧಿಕಾರಿಗಳಾದ ಸುನಿಲ್ ಅಂತೋಣಿರಾಜ್, ಮಲ್ಲೇಶ್, ಸುಮಂತ್‌ರವರು ಅತ್ತಿಕುಪ್ಪೆಯ ಕೆರೆ ಕೋಡಿ ಒಡೆದು ಹಾನಿಗೊಳಗಾಗಿರುವ ಪ್ರದೇಶ ಹಾಗೂ ಕಲ್ಲಹಳ್ಳಿ(Kalahalli), ತಟ್ಟೆಕೆರೆ(Tatekere), ಹೊಸಕೋಟೆ(Hosakote), ಕಚುವಿನಹಳ್ಳಿ(Kachuvinahalli) ಗ್ರಾಮಗಳಿಗೆ ಭೇಟಿ ನೀಡಿ ಬೆಳೆ, ಮನೆ, ಬ್ಯಾರನ್ ಹಾನಿಗೊಳಗಾಗಿರುವುದನ್ನು ಪರಿಶೀಲಿಸಿದರು.
ಇಷ್ಟೊಂದು ಬೆಳೆ ನಷ್ಟವಾಗಿದ್ದರೂ(loss) ಯಾವುದೇ ಜನಪ್ರತಿನಿಧಿಗಳಾಗಲಿ, ಹಿರಿಯ ಅಧಿಕಾರಿಗಳಾಗಲಿ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡದಿರುವುದು ರೈತರಲ್ಲಿ(Farmers) ಆಕ್ರೋಶವನ್ನುಟು ಮಾಡಿದೆ.

Previous Post

ರಾಜ್ಯದಲ್ಲಿ ಭಾರೀ ಮಳೆ(Heavy Rain), ಹಲವು ಕಡೆ ಸಂಕಷ್ಟದ ಸರಮಾಲೆ..

Next Post

ಯೋಗಿ ಆದಿತ್ಯನಾಥ್ ಅಖಾಡದಲ್ಲಿ 8 ಬಾರಿ ಮತದಾನ ಮಾಡಿದ ಬೂಪ..!

Related Posts

ಜೈಲು ಅಕ್ರಮ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್
ಇದೀಗ

ಜೈಲು ಅಕ್ರಮ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್

by ಪ್ರತಿಧ್ವನಿ
February 5, 2026
0

ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಲು ಡಿಜಿಪಿ ಅಲೋಕ್ ಕುಮಾರ್ ಹೊಸ ಯೋಜನೆ ರೂಪಿಸಿದ್ದಾರೆ. ರಾಜ್ಯದ ವಿವಿಧ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ...

Read moreDetails
ಬಿಜೆಪಿ ಬೆಂಬಲವಿಲ್ಲದೆ ಜೆಡಿಎಸ್‌ ಗೆಲ್ಲೋಕೆ ಸಾಧ್ಯವಾಗುವುದಿಲ್ಲ : ಪ್ರೀತಂಗೌಡ ಶಾಕಿಂಗ್‌ ಹೇಳಿಕೆ..

ಬಿಜೆಪಿ ಬೆಂಬಲವಿಲ್ಲದೆ ಜೆಡಿಎಸ್‌ ಗೆಲ್ಲೋಕೆ ಸಾಧ್ಯವಾಗುವುದಿಲ್ಲ : ಪ್ರೀತಂಗೌಡ ಶಾಕಿಂಗ್‌ ಹೇಳಿಕೆ..

February 4, 2026
ಬಿಜೆಪಿ ಸರ್ಕಾರದ ಅಕ್ರಮದಲ್ಲಿ ಯಾರಾದ್ರು ರಾಜೀನಾಮೆ ಕೊಟ್ಟಿದ್ರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

ಬಿಜೆಪಿ ಸರ್ಕಾರದ ಅಕ್ರಮದಲ್ಲಿ ಯಾರಾದ್ರು ರಾಜೀನಾಮೆ ಕೊಟ್ಟಿದ್ರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

February 4, 2026
ನಿಮ್ಮ ಮೈತ್ರಿಕೂಟ ಬದಲಾವಣೆ ಪ್ರಶ್ನೆಯೇ ಇಲ್ಲ :  ಮೋದಿಗೆ ಗೌಡರ ಅಭಯ..!

ನಿಮ್ಮ ಮೈತ್ರಿಕೂಟ ಬದಲಾವಣೆ ಪ್ರಶ್ನೆಯೇ ಇಲ್ಲ : ಮೋದಿಗೆ ಗೌಡರ ಅಭಯ..!

February 4, 2026
ಕಮಲಾಕರ ಭಟ್‌ ಜೊತೆಗೆ ಬಿಜೆಪಿ ಶಾಸಕ : BK ಹರಿಪ್ರಸಾದ್ ಸ್ಫೋಟಕ ಆರೋಪಗಳೇನು..?

ಕಮಲಾಕರ ಭಟ್‌ ಜೊತೆಗೆ ಬಿಜೆಪಿ ಶಾಸಕ : BK ಹರಿಪ್ರಸಾದ್ ಸ್ಫೋಟಕ ಆರೋಪಗಳೇನು..?

February 4, 2026
Next Post

ಯೋಗಿ ಆದಿತ್ಯನಾಥ್ ಅಖಾಡದಲ್ಲಿ 8 ಬಾರಿ ಮತದಾನ ಮಾಡಿದ ಬೂಪ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada