• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಗ್ಲಿ ಕಂಠದಲ್ಲಿ ಮೂಡಿಬಂದ ಸಖತ್ ಸಾಂಗ್ ! ಸೂಪರ್ ಹಾಡಿಗೆ ಸ್ಟೆಪ್ಸ್ ಹಾಕಿದ ಶ್ರೀನಗರ ಕಿಟ್ಟಿ-ರಚ್ಚು-ರಾಗಿಣಿ ದ್ವಿವೇದಿ ! 

ಪ್ರತಿಧ್ವನಿ by ಪ್ರತಿಧ್ವನಿ
May 20, 2024
in Top Story, ಇದೀಗ, ಸಿನಿಮಾ
0
ಮಂಗ್ಲಿ ಕಂಠದಲ್ಲಿ ಮೂಡಿಬಂದ ಸಖತ್ ಸಾಂಗ್ ! ಸೂಪರ್ ಹಾಡಿಗೆ ಸ್ಟೆಪ್ಸ್ ಹಾಕಿದ ಶ್ರೀನಗರ ಕಿಟ್ಟಿ-ರಚ್ಚು-ರಾಗಿಣಿ ದ್ವಿವೇದಿ ! 
Share on WhatsAppShare on FacebookShare on Telegram

ಕಾಡುವಂಥ  ಪ್ರೇಮಕಥೆಗಳನ್ನು  ತೆರೆಮೇಲೆ ಮೂಡಿಸಿದ ನಿರ್ದೇಶಕ ನಾಗಶೇಖರ್ (Nagashekar) ಇದೀಗ ಕನ್ನಡ ಸಿನಿರಸಿಕರಿಗಾಗಿ  ಮತ್ತೊಂದು ಅದ್ಭುತ ಲವ್ ಸ್ಟೋರಿಯನ್ನು ಹೇಳಹೊರಟಿದ್ದಾರೆ. ದಶಕದ ಹಿಂದೆ ತಮ್ಮದೇ ನಿರ್ದೇಶನದಲ್ಲಿ ತೆರೆಕಂಡು, ಜನಮನ ಸೂರೆಗೊಂಡು ಯಶಸ್ವಿಯಾಗಿದ್ದ ಸಂಜು ವೆಡ್ಸ್  ಗೀತಾ‌ (Sanju weds geetha) ಚಿತ್ರದ  ಟೈಟಲ್ ಇಟ್ಟುಕೊಂಡು ನವನವೀನ ಪ್ರೇಮಕಥೆ  ಹೆಣೆದು ಸಂಜು ವೆಡ್ಸ್ ಗೀತಾ-2 ಚಿತ್ರವನ್ನು  ತೆರೆಗೆ ತರುತ್ತಿದ್ದಾರೆ.  

ADVERTISEMENT

ಶ್ರೀನಗರ ಕಿಟ್ಟಿ (Srinagar kitti) ಹಾಗೂ ಗುಳಿಕೆನ್ನೆ ಬೆಡಗಿ  ರಚಿತಾರಾಮ್ (Rachitha ram) ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಅದಾಗಿದ್ದು, ವಿಶೇಷವಾಗಿ ಈ ಹಾಡಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini dwivedi) ಇವರಿಬ್ಬರ ಜೊತೆ ಸ್ಟೆಪ್ಸ್ ಹಾಕಿದ್ದಾರೆ. 

ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲಿನ ಗ್ಲಾಸ್ ಹೌಸ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. 200 ರಿಂದ 250 ಜನ ಡಾನ್ಸರ್ಸ್ ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ (Mangli) ಈ ಹಾಡಿಗೆ ದನಿಯಾಗಿದ್ದು, ಭಜರಂಗಿ ಮೋಹನ್ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವರ್ಷದ ಸೂಪರ್ ಹಿಟ್ ಸಾಂಗ್ ಇದಾಗಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್, ಒಂದು ಹಾಡಿನ ಪ್ಯಾಚ್ ವರ್ಕ್  ಮಾತ್ರವೇ ಬಾಕಿಯಿದೆ. 

ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಥೆ ಈ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಎಡಿಟಿಂಗ್ ಮುಗಿದು, ಡಬ್ಬಿಂಗ್ ಕೂಡ  ಕೊನೇ ಹಂತದಲ್ಲಿದೆ. ಚಿತ್ರಕ್ಕೆ  ಸ್ವಿಟ್ಜರ್ ಲ್ಯಾಂಡ್ (Switzerland) ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಮೂರನೇ ಹಂತದ ಚಿತ್ರೀಕರಣ ನಡೆಸಲಾಗಿದೆ.  ಅಲ್ಲದೆ 50 ಲಕ್ಷ ರೂ.ಗಳ  ವೆಚ್ಚದಲ್ಲಿ ಕುಣಿಗಲ್ ನ (Kunigal)ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳವರೆಗೆ  ಅದ್ದೂರಿಯಾಗಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ. 

ಹೀಗೆ ಚಿತ್ರಕಥೆಯಷ್ಟೇ ಪ್ರಾಮುಖ್ಯತೆಯನ್ನು ಚಿತ್ರದ ಹಾಡುಗಳಿಗೂ ಸಹ  ನೀಡಲಾಗಿದ್ದು, ಒಂದು ಸಿನಿಮಾಗಾಗುವಷ್ಟು ಖರ್ಚನ್ನು ನಿರ್ಮಾಪಕ ಛಲವಾದಿ ಕುಮಾರ್ ಅವರು ಹಾಡುಗಳಿಗೇ ಮಾಡುವ ಮೂಲಕ ಅದ್ದೂರಿತನಕ್ಕೆ ಎಲ್ಲೂ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ಅಲ್ಲದೆ ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ  ಅದ್ದೂರಿ ಸಮಾರಂಭದಲ್ಲಿ 

ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.    ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ (Chalavadi kumar) ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ನಾಗಶೇಖರ್ ಅವರ  ಕಥೆ, ಚಿತ್ರಕಥೆ ನಿರ್ದೇಶನ ಚಿತ್ರಕ್ಕಿದ್ದು   ಶ್ರೀಧರ ವಿ. ಸಂಭ್ರಮ್  (Sridhar V sambram) ೫ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ಸೋನು ನಿಗಂ (Sonu nigam), ಶ್ರೇಯಾ ಘೋಷಾಲ್(Shreya ghoshal), ಮಂಗ್ಲಿ (Mangli) ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ,(ಕೆಮಿಯೋ), ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.

Tags: ನಿರ್ದೇಶಕ ನಾಗಶೇಖರ್ಮಂಗ್ಲಿ ಹಾಡುರಚಿತಾ ರಾಮ್ರಾಗಿಣಿ ದ್ವಿವೇದಿಶ್ರೀನಗರ ಕಿಟ್ಟಿಸಂಜು ವೆಡ್ಸ್ ಗೀತಾಸಂಜು ವೆಡ್ಸ್ ಗೀತಾ 2
Previous Post

ರೇವ್ ಪಾರ್ಟಿಗೆ ನಾನು ಹೋಗಿಲ್ಲವೆಂದ ತೆಲುಗು ನಟಿ ಹೇಮಾ..!

Next Post

ಗ್ಯಾರಂಟಿ ಬಗ್ಗೆ ಸಿಎಂ ಸಿದ್ದು ನೀಡಿರುವ ಭರವಸೆ ಏನು?

Related Posts

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!
Top Story

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

by ಪ್ರತಿಧ್ವನಿ
May 16, 2026
0

ನವದೆಹಲಿ : ಮೆಡಿಕಲ್ ಪ್ರವೇಶಾತಿ ಪರೀಕ್ಷೆಯಾದ NEET–2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ತನಿಖೆಯ ಕೇಂದ್ರಬಿಂದುವಾಗಿರುವ ರಾಜಸ್ಥಾನದ ಒಂದೇ...

Read moreDetails
ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

May 16, 2026
“ಕೇವಲ 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ : ಭಾರತದಲ್ಲಿ ಹೊಸ ಇಂಜೆಕ್ಷನ್ ಬಿಡುಗಡೆ”

“ಕೇವಲ 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ : ಭಾರತದಲ್ಲಿ ಹೊಸ ಇಂಜೆಕ್ಷನ್ ಬಿಡುಗಡೆ”

May 16, 2026
ವಿಜಯ್ ಗೆಲುವಿನ ಪ್ರಭಾವ ಉತ್ತರ ಪ್ರದೇಶಕ್ಕೂ? ‘ಸತ್ತಾ ಪರಿವರ್ತನ್ ಯಾತ್ರೆ’ಗೆ ಸಜ್ಜಾದ ಚಂದ್ರಶೇಖರ್ ಆಜಾದ್

ವಿಜಯ್ ಗೆಲುವಿನ ಪ್ರಭಾವ ಉತ್ತರ ಪ್ರದೇಶಕ್ಕೂ? ‘ಸತ್ತಾ ಪರಿವರ್ತನ್ ಯಾತ್ರೆ’ಗೆ ಸಜ್ಜಾದ ಚಂದ್ರಶೇಖರ್ ಆಜಾದ್

May 16, 2026
“ಕಾರಿಗೆ ಬ್ರೇಕ್, ಮೆಟ್ರೋಗೆ ಗ್ರೀನ್ ಸಿಗ್ನಲ್ ಕೊಟ್ಟ ವಿಜಯೇಂದ್ರ”

“ಕಾರಿಗೆ ಬ್ರೇಕ್, ಮೆಟ್ರೋಗೆ ಗ್ರೀನ್ ಸಿಗ್ನಲ್ ಕೊಟ್ಟ ವಿಜಯೇಂದ್ರ”

May 16, 2026
Next Post
ಗ್ಯಾರಂಟಿ ಬಗ್ಗೆ ಸಿಎಂ ಸಿದ್ದು ನೀಡಿರುವ ಭರವಸೆ ಏನು?

ಗ್ಯಾರಂಟಿ ಬಗ್ಗೆ ಸಿಎಂ ಸಿದ್ದು ನೀಡಿರುವ ಭರವಸೆ ಏನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada