ಕಲಬುರಗಿ: ಸೇಡಂ (Sedam) ಕ್ಷೇತ್ರದ ಮಾಜಿ ಶಾಸಕ ಡಾ ನಾಗರೆಡ್ಡಿ ಪಾಟೀಲ್ (79) ಇಹಲೋಕ ತ್ಯಜಿಸಿದ್ದಾರೆ.
ಇಂದು ಮದ್ಯರಾತ್ರಿ ಅವರು ಸೇಡಂ ಪಟ್ಟಣದಲ್ಲಿ ತಮ್ಮ ನಿವಾಸದಲ್ಲಿ ನಾಗರೆಡ್ಡಿ ಪಾಟೀಲ್ (Dr Nagareddy Patil) ವಿಧಿವಶರಾಗಿದ್ದಾರೆ.
ನಾಗರೆಡ್ಡಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್ ಅವರ ತಂದೆಯಾಗಿದ್ದಾರೆ. ಮುಖಂಡರ ಅಂತ್ಯಕ್ರಿಯೆಯು ಮಧ್ಯಾಹ್ನ 3:30ಕ್ಕೆ ಸೇಡಂ ಪಟ್ಟಣದಲ್ಲಿರುವ ಸ್ವತಃ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 1983 ರಿಂದ 85 ರ ಅವಧಿಯಲ್ಲಿ ಎರಡೂವರೆ ವರ್ಷ ನಾಗರೆಡ್ಡಿ ಪಾಟೀಲ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು.