• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೋಟ್ಯಧಿಪತಿ ಮಹಿಳೆ ಕೊಂದು ಡ್ರಾಮಾ ಮಾಡಿದ್ನಾ ಡ್ರೈವರ್..?

ಪ್ರತಿಧ್ವನಿ by ಪ್ರತಿಧ್ವನಿ
April 7, 2024
in Top Story, ಇದೀಗ
0
Share on WhatsAppShare on FacebookShare on Telegram

ADVERTISEMENT

ಬೆಂಗಳೂರಿನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಕಗ್ಗಲೀಪುರ ಸಿಗುತ್ತದೆ. ಕನಕಪುರ ಮಾರ್ಗದಲ್ಲಿರುವ ಈ ಕಗ್ಗಲೀಪುರದಲ್ಲಿ ಶುಕ್ರವಾರ 54 ವರ್ಷದ ಮಹಿಳೆ ಶಾಂತಾ ಎಂಬುವರ ಭೀಕರ ಹತ್ಯೆ ನಡೆದಿದೆ. ಕಗ್ಗಲಿಪುರದ ಗಿರಿಗೌಡನದೊಡ್ಡಿ ಬಳಿಯ ಫಾರ್ಮ್ ಹೌಸ್ನಲ್ಲಿ ವಾಕಿಂಗ್ ಮಾಡುವಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿದ್ದಾರೆ. ಕಬ್ಬಿಣದ ರಾಡ್ನಿಂದ ಕೊಲೆ ಮಾಡಿದ್ದಾರೆ ಎನ್ನುವುದು ಸ್ಥಳದಲ್ಲಿ ನಡೆದಿರುವ ಕೃತ್ಯವನ್ನು ಕಂಡಾಗ ಭಾಸವಾಗ್ತಿದೆ. ಆದರೆ ಅಲ್ಲೇ ಇದ್ದ ಡ್ರೈವರ್ ಪರಾರಿಯಾಗಿದ್ದು, ಕೊಲೆ ಹಿಂದಿನ ಸಂಚಿನ ಬಗ್ಗೆ ಅನುಮಾನ ಮೂಡುತ್ತಿದೆ.

ತುಮಕೂರು ಜಿಲ್ಲೆ ಮಧುಗಿರಿ ಮೂಲದ ಶಾಂತಾ, ಮಡಕಶಿರಾ ಮೂಲದ ಉಗ್ರಪ್ಪ ಎಂಬುವರನ್ನ ಮದುವೆಯಾಗಿದ್ದರು. ಮದುವೆಯಾಗಿ 40 ವರ್ಷ ಕಳೆದಿತ್ತು. ಹರ್ಷಿತ್ ಎಂಬ ಮಗನೂ ಕೂಡ ಇದ್ದ. ಅದರೆ 2010 ರಲ್ಲಿ ಶಾಂತಾ ಅವರ ಗಂಡ ಉಗ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 2016ರಲ್ಲಿ ಮಗ ಹರ್ಷಿತ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದನು. ಜೀವನದಲ್ಲಿ ಎಲ್ಲರನ್ನೂ ಕಳೆದುಕೊಂಡ ಶಾಂತಾ ಒಬ್ಬಂಟಿಯಾಗಿದ್ದರು. ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿದ್ದ ಮನೆಯಿಂದ ಕಗ್ಗಲಿಪುರದ ಫಾರ್ಮ್ ಹೌಸ್ಗೆ ಶಿಫ್ಟ್ ಆಗಿದ್ರು. ಇದೀಗ ಕೊಲೆ ನಡೆದಿದೆ.

ಕಗ್ಗಲೀಪುರ ಬಳಿಯ ಫಾರ್ಮ್ ಹೌಸ್ನಲ್ಲಿ ಗಿಡಮರಗಳನ್ನ ಬೆಳೆಸಿಕೊಂಡು, ಏಕಾಂಗಿ ಜೀವನ ನಡೆಸುತ್ತಿದ್ದ ಶಾಂತಾ, ಮನ ಹಾಗು ತೋಟದ ಕೆಲಸಕ್ಕೆ ಜನರನ್ನು ಇರಿಸಿಕೊಂಡಿದ್ದರು. ಹಾಗೆಯೇ ಸುತ್ತಾಡುವುದಕ್ಕಾಗಿ ಕಾರು ಚಾಲಕನನ್ನು ನೇಮಿಸಿಕೊಂಡಿದ್ದರು. ಮನೆಯಲ್ಲಿ ಹಣ, ಆಭರಣ ದರೋಡೆಗೆ ಯತ್ನಿಸಿ ಶಾಂತಾ ಅವರ ಹತ್ಯೆಗೈದಿರಬಹುದು ಎನ್ನಲಾಗ್ತಿದೆ. ಇನ್ನೂ ಘಟನೆ ವೇಳೆ ಕಾರು ಚಾಲಕ ವೀರೇಶ್ ಕೂಡ ಫಾರ್ಮ್ ಹೌಸ್‌ನಲ್ಲಿ ಇದ್ದರು ಎನ್ನುವುದು ಅನುಮಾನ ಹೆಚ್ಚಾಗಲು ಕಾರಣವಾಗಿದೆ. ದುಷ್ಕರ್ಮಿಗಳು ಶಾಂತಾ ಅವರ ಹತ್ಯೆ ಬಳಿಕ ಕಾರು ಚಾಲಕ ವೀರೇಶ್ ಮೇಲೂ ಹಲ್ಲೆಗೆ ಮುಂದಾಗಿದ್ರಂತೆ. ವೀರೇಶ್ ಮೊಬೈಲ್ ಕೂಡ ಕಸಿದುಕೊಂಡ್ರಂತೆ. ಈ ಮಾಹಿತಿ ಅನುಮಾನದ ವಾಸನೆ ಬಡಿಯುವಂತೆ ಮಾಡಿದೆ.

ಮೂವರು ದರೋಡೆಕೋರರು ಶಾಂತಾ ಅವರನ್ನು ಮಾತ್ರ ಕೊಲೆ ಮಾಡಿ ದರೋಡೆ ಮಾಡುವ ಉದ್ದೇಶ ಏನಿತ್ತು..? ಚಾಲಕ ವೀರೇಶ್ ಅವರನ್ನು ಯಾಕೆ ಕೊಲ್ಲಲಿಲ್ಲ..? ಇನ್ನು ಮೂವರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಚಾಲಕ ವೀರೇಶ್, ಕಾರು ಸಮೇತ ಬೆಂಗಳೂರಿಗೆ ಬಂದು, ಅಲ್ಲಿಂದ ಮಂಗಳೂರಿಗೆ ತೆರಳಿ, ತನ್ನ ಸಂಬಂಧಿಕರ ಬಳಿ ವಿಚಾರ ತಿಳಿಸಿದ್ದಾನೆ. ಯಾವುದೇ ಕೊಲೆ ಆದಾಗ ಬೆಂಗಳೂರಿಗೆ ಬಂದು ಮಂಗಳೂರಿಗೆ ಹೋಗಿ ಹೇಳುವುದು ಏನಿತ್ತು..? ಸುತ್ತಮುತ್ತಲ ಜನರಿಗೆ ಮೊದಲು ವಿಚಾರ ತಿಳಿಸಬೇಕಿತ್ತು. ಆ ಬಳಿಕ ಪೊಲೀಸರಿಗೆ ಮಾಹಿತಿ ಕೊಡಬೇಕಿತ್ತು. ಅದನ್ನು ಬಿಟ್ಟು ಮಂಗಳೂರಿಗೆ ಹೋಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಕೊಲೆ ಹಿಂದೆ ಕೆಲಸ ಮಾಡುವ ಕಾರ್ಮಿಕರ ನಂಟು ಇರುವ ಬಗ್ಗೆ ಪೊಲೀಸ್ರು ತನಿಖೆ ಮಾಡಬೇಕಿದೆ. ಆದರೂ ಕೋಟಿ ಕೋಟಿ ಹಣವಿದ್ದರು ಭದ್ರತೆ ಮಾಡಿಕೊಳ್ಳದೆ ಕೊಲೆಯಾಗಿದ್ದು ಮಾತ್ರ ವಿಪರ್ಯಾಸ.

ಕೃಷ್ಣಮಣಿ

Tags: ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ಮೇಕೆದಾಟು ವಿಚಾರದಲ್ಲಿ ಸಿಡಿದೆದ್ದ ಹೆಚ್.ಡಿ.ಕೆ ! ಡಿಕೆಗೆ ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟ ಕುಮಾರಸ್ವಾಮಿ !

Next Post

ಅಪ್ಪು ಪತ್ನಿ ಬಗ್ಗೆ ಅವಹೇಳನ.. ಕಾನೂನು ಪ್ರಕಾರ ತಪ್ಪಾ..?

Related Posts

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?
Top Story

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

by ಪ್ರತಿಧ್ವನಿ
August 29, 2026
0

ಕನ್ನಡ ಕಿರುತೆರೆಯಲ್ಲಿ ‘ಬಿಗ್ ಬಾಸ್’ ಎಂದರೆ ಕೇವಲ ರಿಯಾಲಿಟಿ ಶೋ ಅಲ್ಲ, ವೀಕ್ಷಕರಿಗೆ ಅದೊಂದು ಭಾವನಾತ್ಮಕ ಸಂಪರ್ಕ. ಪ್ರತಿವರ್ಷ ಬಿಗ್ ಬಾಸ್ ಮನೆಗೆ ಯಾರು ಪ್ರವೇಶಿಸುತ್ತಾರೆ, ಮನೆಯಲ್ಲಿ...

Read moreDetails
ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

August 29, 2026
*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

August 29, 2026
ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

August 29, 2026
ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

August 29, 2026
Next Post
ಅಪ್ಪು ಪತ್ನಿ ಬಗ್ಗೆ ಅವಹೇಳನ.. ಕಾನೂನು ಪ್ರಕಾರ ತಪ್ಪಾ..?

ಅಪ್ಪು ಪತ್ನಿ ಬಗ್ಗೆ ಅವಹೇಳನ.. ಕಾನೂನು ಪ್ರಕಾರ ತಪ್ಪಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada