
ಬೆಂಗಳೂರು :ಶಿವರಾತ್ರಿ ಹಬ್ಬದ ದಿನವೇ ರೌಡಿಶೀಟರ್ ಓರ್ವನನ್ನ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಡರಾತ್ರಿ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಆಂಜನಪ್ಪ ಗಾರ್ಡನ್ನಲ್ಲಿ ನಡೆದಿದೆ.

ಶಿವ ಕೊಲೆಯಾದ ರೌಡಿಶೀಟರ್. ಕಾಟನ್ ಪೇಟೆ ಠಾಣೆಯ ರೌಡಿ ಆಸಾಮಿಯಾಗಿರು ಶಿವ ಇತ್ತೀಚಿಗೆ ಸ್ಥಳಿಯ ವ್ಯಾಪಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದ ಎನ್ನಲಾಗಿದೆ. ತಡರಾತ್ರಿ ಏಕಾಏಕಿ ಶಿವನ ಮೇಲೆ ಮುಗಿಬಿದ್ದ ಹಂತಕರ ತಂಡ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು Bangalore

ಪರಾರಿಯಾಗಿದೆ. ಈ ಹಿಂದೆ ಶಿವ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಬೇರೆ ಏರಿಯಾದವರು ಮಧ್ಯೆ ದ್ವೇಷಕ್ಕೆ ಕಾರಣವಾಗಿದ್ನಂತೆ.

ಇದ್ರಿಂದ ರೊಚ್ಚಿಗೆದ್ದ ಎದುರಾಳಿಗಳು ಶಿವನ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಠಾಣೆಯ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದು ಘಟನೆ ಸಂಬಂದ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.





