ಇತ್ತೀಚಿನ ರಾಜಕಾರಣದಲ್ಲಿ ದೊಡ್ಡ ಸುದ್ದಿಯೊಂದು ಕೇಂದ್ರ ರಾಜಕೀಯ(Political) ವಲಯದಲ್ಲಿ ಸದ್ದು ಮಾಡಲಾರಂಭಿಸಿದೆ. ಅದೇನು ಅಂದರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಕೇಂದ್ರ ಸಚಿವರಾಗುತ್ತಾರೆ ಎಂಬುದು. ಅಷ್ಟಕ್ಕೂ ಇದು ಹುಟ್ಟಿದ್ದು ಎಲ್ಲಿ? ಹೇಗೆ? ಯಾರಿಂದ? ಯಾವ ಕಾರಣಕ್ಕೆ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಈ ಸುದ್ದಿ ಹುಟ್ಟಿಸಿದವರ ಬಳಿಯೇ ಉತ್ತರ ಇಲ್ಲ ಎನ್ನುವುದೇ ವಿಪರ್ಯಾಸ.
ಇನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಕೇಂದ್ರದಲ್ಲಿ ಲೋಕಸಭಾ(Loka Saba) ಚುನಾವಣೆಯ(Election) ಹೊಸ್ತಿಲಿನಲ್ಲಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ಸೇರುತ್ತಾರೆ ಎನ್ನುವ ಸುದ್ದಿ ಹುಟ್ಟಿರುವುದೇ Very Interesting ವಿಚಾರ. ಇಂದು ಪ್ರತಿಧ್ವನಿ ಈ ಸುದ್ದಿಯ ಕಂಪ್ಲೀಟ್ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

ಕುಮಾರಸ್ವಾಮಿ ಇದೇ ಅವಧಿಯಲ್ಲಿ ಕೇಂದ್ರ ಸಚಿವರಾಗುವುದು ಅನುಮಾನ, ಇದೆಲ್ಲಾ ಸತ್ಯಕ್ಕೆ ದೂರವಾದ ವಿಚಾರ!
ಇನ್ನು ಕೇವಲ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳ ಒಟ್ಟು ನಾಲ್ವರು ಮಾಜಿ ಮುಖ್ಯಮಂತ್ರಿಗಳು, ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಇದಕ್ಕೆ ಯಾವುದೇ ರೆಕ್ಕೆ ಪುಕ್ಕಗಳು ಇಲ್ಲವೇ ಇಲ್ಲ.
ಬಿಜೆಪಿಯ ಕೇಂದ್ರದ ನಾಯಕರು ಯಾವುದೇ ವಿಷಯಗಳನ್ನು ಬಲವಾದ ಕಾರಣವಿಲ್ಲದೇ ಮಾಡುವುದಿಲ್ಲ. ಸದ್ಯ ಲೋಕಸಭಾ ಚುನಾವಣೆಗೆ ಇನ್ನೇನು ಮೂರ್ನಾಲ್ಕು ತಿಂಗಳು ಮಾತ್ರ ಬಾಕಿಯಿದೆ. ಸದ್ಯ ಇಡೀ ದೇಶಕ್ಕೆ ದೇಶವೇ ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಗೆ ತುದಿಗಾಲಿನಲ್ಲಿ ನಿಂತಿದೆ. ಇಂತಹ ಒಳ್ಳೆಯ ವಿಚಾರವನ್ನು ಕೇಂದ್ರದ ಬಿಜೆಪಿ ನಾಯಕರುಗಳು Plus ಮಾಡಿಕೊಳ್ಳುವುದನ್ನು ಬಿಟ್ಟು, ಹೆಚ್ ಡಿ.ಕುಮಾರಸ್ವಾಮಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ನಾಲ್ವರು ಮಾಜಿ ಮುಖ್ಯಮಂತ್ರಿಗಳನ್ನು ಕ್ಯಾಬಿನೆಟ್ ಸೇರ್ಪಡೆ ಮಾಡಿಕೊಳ್ಳುತ್ತಾ? ಎಂಬ Simple Knowledge ಕೂಡ ಇಲ್ಲದೇ, ಚರ್ಚೆ ಮಾಡಲಾಗುತ್ತಿದೆ.
ಇನ್ನೊಂದೆಡೆ, ಈಗ ಕುಮಾರಸ್ವಾಮಿ ಸೇರಿದಂತೆ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಕ್ಯಾಬಿನೆಟ್ ಸೇರ್ಪಡೆ ಆಗಿ ಮಾಡುವುದಾದ್ರೂ ಏನು? ದೆಹಲಿಯಲ್ಲಿ ಕಚೇರಿ, ಅವರ ಇಲಾಖೆಯ ಮೊದಲ ಸಭೆ, ಅವರು ಸಂಚಾರ ಕಾರು, ಅವರಿಗೆ ಮೀಸಲಾಗಬೇಕಾದ ಸರ್ಕಾರಿ ನಿವಾಸ, ಇದೆಲ್ಲವನ್ನೂ ಮಾಡಿಕೊಳ್ಳುವಷ್ಟರಲ್ಲಿ 2024 ರ ಲೋಕಸಭಾ ಚುನಾವಣೆಗೆ ನೀತಿ ಸಂಹಿತೆಯೇ ಜಾರಿಯಾಗಿ ಬಿಡುತ್ತದೆ. ಹೀಗಾಗಿ, ಇಂತಹ ನಿರ್ಧಾರ ಬಿಜೆಪಿಯ ಹೈಕಮಾಂಡ್ ನಾಯಕರ ಮುಂದೆ ಪ್ರಸ್ತಾಪವೇ ಆಗಿಲ್ಲ ಎನ್ನಲಾಗಿದ್ದು, ಇದೆಲ್ಲಾ ಕೇವಲ ಊಹಾಪೋಹ ಎನ್ನಲಾಗಿದೆ. ಇನ್ನು ಇಂತಹ ಸುದ್ದಿ ಹರಡಿದ್ದು ಮಧ್ಯಪ್ರದೇಶ ರಾಜ್ಯದಿಂದ ಎನ್ನಲಾಗಿದ್ದು, ಪ್ರತಿಧ್ವನಿಗೆ ಬಿಜೆಪಿಯ ಉನ್ನತ ಮೂಲಗಳಿಂದಲೇ ಇದೊಂದು Fake News ಎಂಬ ಸ್ಪಷ್ಟನೆ ಸಿಕ್ಕಿದೆ.

ರಾಷ್ಟ್ರ ಬೇಡ, ನನ್ನ ಆಟ ಏನಿದ್ರೂ ರಾಜ್ಯದಲ್ಲಿಯೇ!
ಇನ್ನು ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಇಂತಹ ಪ್ರಸ್ತಾವನೆ ಇಲ್ಲ. ನನ್ನ ಆಟ ಏನಿದ್ರೂ ರಾಜ್ಯದಲ್ಲಿಯೇ ಹೊರತು, ಸದ್ಯಕ್ಕೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡುವ ಇರಾದೆ ಇಲ್ಲ ಎಂದಿದ್ದಾರೆ. ಅದೇ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಇದೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು. PM Narendra Modi ಯಾವಾಗ, ಎಂತಹ ದಾಳ ಉರುಳಿಸುತ್ತಾರೋ ಗೊತ್ತಾಗುವುದಿಲ್ಲ ಎನ್ನುವ ಮೂಲಕ ಸುದ್ದಿಯನ್ನು ಚರ್ಚೆಯಾಗಲಿ ಎಂದು ಜೀವಂತವಾಗಿ ಇಟ್ಟಿದ್ದಾರೆ.
ಒಟ್ಟಾರೆ, ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಸುಖಾಸುಮ್ಮನೆ, ಲಾಭವಿಲ್ಲದೇ ಬಿಜೆಪಿ ನಾಯಕರುಗಳು ಏನನ್ನೂ ಮಾಡುವುದಿಲ್ಲ ಎಂಬುದು ಮಾತ್ರ ಇಲ್ಲಿ ಸ್ಪಷ್ಟ.






