ಚಿಕ್ಕಬಳ್ಳಾಪುರ : ಹಿಂದೂ ಯುವಕ ಮುಸ್ಲಿಂ ಯುವತಿಯ ಜೊತೆ ಇದ್ದ ಕಾರಣಕ್ಕೆ ಮುಸ್ಲಿಂ ಯುವಕರು ನೈತಿಕ ಪೊಲೀಸ್ಗಿರಿ ತೋರಿದ ಘಟನೆಯು ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ. ಚೇಳೂರು ಮೂಲದ ಮುಸ್ಲಿಂ ಯುವತಿ ಹಾಗೂ ಚಿಂತಾಮಣಿಯ ಹಿಂದೂ ಯುವಕನ ಈ ಹಲ್ಲೆ ನಡೆದಿದೆ.

ನಾವಿಬ್ಬರು ಸ್ನೇಹಿತರು ಎಂದು ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಎಷ್ಟೇ ಗೋಗೆರದರೂ ಸಹ ಕೇಳದೇ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ. ನಿನ್ನೆ ಈ ಘಟನೆ ಸಂಭವಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆಯೇ ಪ್ರಕರಣ ಬೆಳಕಿಗೆ ಬಂದಿದೆ.
ಚಿಂತಾಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.