• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ಸರ್ಕಾರ ಜನರಿಗೆ ವಚನ ವಂಚನೆ ಮಾಡಿದೆ: ಡಿ.ಕೆ.ಶಿವಕುಮಾರ್ ಆರೋಪ

ಪ್ರತಿಧ್ವನಿ by ಪ್ರತಿಧ್ವನಿ
February 16, 2023
in Top Story, ರಾಜಕೀಯ
0
ಬಿಜೆಪಿ ಸರ್ಕಾರ ಜನರಿಗೆ ವಚನ ವಂಚನೆ ಮಾಡಿದೆ: ಡಿ.ಕೆ.ಶಿವಕುಮಾರ್ ಆರೋಪ
Share on WhatsAppShare on FacebookShare on Telegram

ಮೈಸೂರು: ಬಿಜೆಪಿ ಸರ್ಕಾರ ಜನರಿಗೆ ಶೇ.90ರ ರಷ್ಟು ವಚನ ವಂಚನೆ ಮಾಡಿದೆ. ಜನರಿಗೆ ಕೊಟ್ಟ ಯಾವ ಕಾರ್ಯಕ್ರಮಗಳೂ ಜಾರಿಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು.

ADVERTISEMENT

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ಬಜೆಟ್ ಘೋಷಣೆ ಮಾಡ್ತಾ ಇದ್ದಾರೆ. ಇದು ಬಿಜೆಪಿ ಕೊನೆಯ ಬಜೆಟ್. ಹಿಂದಿನ ಬಜೆಟ್ ಕೂಡ ಬರಿ ಘೋಷಣೆ, ಭರವಸೆಯ ಬಜೆಟ್ ಆಗಿತ್ತು. ನಾಳೆ ಮಂಡನೆ ಮಾಡುವ ಬಜೆಟ್ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಲಿದೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ನುಡಿದಂತೆ ನಡೆದಿದ್ದೇನೆ ಎನ್ನುತ್ತಾರೆ. ಹಾಗಾದರೇ ಹಿಂದಿನ ಬಜೆಟ್ ರಿಪೋರ್ಟ್ ಕೊಡಬೇಕು. ಬಸವಣ್ಣ ನವರ ಹೆಸರಿಟ್ಟುಕೊಂಡಿದ್ದೀರಿ. ಮೊದಲು ಹಿಂದಿನ ರಿಪೋರ್ಟ್ ಕೊಡಬೇಕು ಎಂದು ಆಗ್ರಹಿಸಿದರು.

ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಶೇ 90 ರಷ್ಟನ್ನು ಬಿಜೆಪಿ ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಯಡಿಯೂರಪ್ಪನವರು ರೈತರ ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದರು. ಬರಿ ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿದರು. ರೈತ ನಿಧಿ ಎಲ್ಲಿಟ್ಟಿದ್ದೀರಿ, ರೈತರಿಗೆ 10 ಗಂಟೆ ವಿದ್ಯುತ್ ಎಲ್ಲಿ ಕೊಟ್ರಿ ಎಂದು ಪ್ರಶ್ನಿಸಿದರು.

ನಾವು ಸುಮಾರು170 ಪ್ರಶ್ನೆ ಕೇಳಿದ್ದೇವೆ. ಆದರೆ ಸಿಎಂ ಬೊಮ್ಮಾಯಿ ಸರ್ಕಾರ ಒಂದಕ್ಕೂ ಉತ್ತರ ನೀಡಿಲ್ಲ. ಸುಳ್ಳು ಹೇಳಲು ಒಂದು ಮಿತಿ ಇರಬೇಕು. ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ರಿ.ಜನರಿಗೆ ವಂಚನೆ ಮಾಡಿಕೊಂಡು ಬಂದಿರಿ. ನೀವು ಅಧಿಕಾರದಲ್ಲಿರಲು ಲಾಯಕ್ಕಿಲ್ಲ ಎಂದು ಬಿಜೆಪಿ ಕಿಡಿಕಾರಿದರು.

26 ಆಶ್ವಾಸನೆಗಳನ್ನು  ಹೆಣ್ಣು ಮಕ್ಕಳಿಗೆ ಕೊಟ್ಟಿದ್ದರು. ಅದರಲ್ಲಿ24 ಅನ್ನು ಅನುಷ್ಟಾನ ಮಾಡಿಲ್ಲ. ಯುವಕರಿಗೆ 18 ಕಾರ್ಯಕ್ರಮಗಳ ಭರವಸೆ ಕೊಟ್ಟಿದ್ದರು ಅದರಲ್ಲಿ 17 ಭರವಸೆಗಳನ್ನು ಈಡೇರಿಸಿಲ್ಲ. ಎಸ್ಸಿ, ಎಸ್ಟಿ ಜನರಿಗೆ ಭಾರಿ ಅನ್ಯಾಯ ಮಾಡಿದ್ದಾರೆ. ಬಜೆಟ್ ಪುಸ್ತಕವನ್ನು ತೆಗೆದೇ ನೋಡಿಲ್ಲ ಇವರು. ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಎಲ್ಲಿ ಕೊಟ್ಟಿದ್ದೀರಿ ತೋರಿಸಿ. ನಾವು ಕೊಟ್ಟ ಭರವಸೆಗಳಲ್ಲಿ ಶೇ 90 ರಷ್ಟನ್ನು ಈಡೇರಿಸಿದ್ದೇವೆ. ನಿಮ್ಮ ಕಾಲಾವಧಿಯಲ್ಲಿ ಕರ್ನಾಟಕವನ್ನು ಕರಪ್ಶನ್ ಕ್ಯಾಪ್ಟನ್ ಮಾಡಿಬಿಟ್ಟಿರಿ ಎಂದು ಹರಿಹಾಯ್ದರು.

ಮೈಸೂರು-ಬೆಂಗಳೂರು ಹೈವೆಯಲ್ಲಿ ಸರ್ವಿಸ್ ರೋಡೇ ಇಲ್ಲ. ಟೋಲ್ ಯಾಕೆ

ಮೈಸೂರು ಬೆಂಗಳೂರು ಹೈವೆಯಲ್ಲಿ ಸರ್ವಿಸ್ ರೋಡೇ ಇಲ್ಲ. ಟೋಲ್ ಯಾಕೆ ಕೊಡಬೇಕು.? ಸರ್ವಿಸ್ ರೋಡ್ ಕೊಡದೆ ನೀವು ಟೋಲ್ ಸಂಗ್ರಹ ಮಾಡೋ ಆಗಿಲ್ಲ. ಆಲ್ಟರ್ ನೇಟಿವ್ ಸರ್ವಿಸ್ ಕೊಟ್ಟು ನಂತರ ನೀವು ಟೋಲ್ ಕಲೆಕ್ಟ್ ಮಾಡಿ. ಇಲ್ಲ ಅಂದರೆ ನಿಮ್ಮ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹಗೆ ಎಚ್ಚರಿಕೆ ನೀಡಿದರು.

ಬಚ್ಚಲು ಬಾಯಿಗೆ ಉತ್ತರ ಕೊಡುವಷ್ಟು ಕೆಳಮಟ್ಟಕ್ಕೆ ಇಳಿಯಲ್ಲ

ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಮತ್ತು ಪ್ರಚೋದನಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ, ಅಶ್ವಥ್ ನಾರಾಯಣ್ ಮಾತಿಗೆ ನಾನು ಉತ್ತರ ಕೊಡಲ್ಲ. ಆ ಬಚ್ಚಲು ಬಾಯಿಗೆ  ನಾನು ಉತ್ತರ ಕೊಡುವಷ್ಟು ಮಟ್ಟಿಗೆ ನಾನು ಕೆಳ ಮಟ್ಟಕ್ಕೆ ಇಳಿಯಲ್ಲ. ಇದಕ್ಕೆ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರೆ ಉತ್ತರ ಕೊಡಬೇಕು ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಎಂಎಲ್ ಸಿ ಧರ್ಮಸೇನ, ಮಾಜಿ ಶಾಸಕ ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Tags: BJPD K ShivakumarMysore
Previous Post

Siddaramaiah: ಅಶ್ವಥ ನಾರಾಯಣ ನೀನೆ ಬಂದು ನನ್ನ ಕೊಲೆ ಮಾಡಪ್ಪ | #pratidhvaninews

Next Post

ಅಶ್ವತ್ಥ ನಾರಾಯಣ ಗೋಡ್ಸೆ ವಂಶಸ್ಥರು: ಯು. ಟಿ ಖಾದರ್ ವಾಗ್ದಾಳಿ

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
Next Post
ಅಶ್ವತ್ಥ ನಾರಾಯಣ ಗೋಡ್ಸೆ ವಂಶಸ್ಥರು: ಯು. ಟಿ ಖಾದರ್ ವಾಗ್ದಾಳಿ

ಅಶ್ವತ್ಥ ನಾರಾಯಣ ಗೋಡ್ಸೆ ವಂಶಸ್ಥರು: ಯು. ಟಿ ಖಾದರ್ ವಾಗ್ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada