• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, November 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗುಂಡ್ಲುಪೇಟೆ: ಹುಲಿಯ ಸಾವಿನ ಹಿಂದೆ ಸಾಕಷ್ಟು ಅನುಮಾನ- ತನಿಖೆಗೆ ವಿಶೇಷ ತಂಡ ರಚನೆ

ಪ್ರತಿಧ್ವನಿ by ಪ್ರತಿಧ್ವನಿ
February 8, 2023
in Top Story, ಇದೀಗ
0
ಗುಂಡ್ಲುಪೇಟೆ: ಹುಲಿಯ ಸಾವಿನ ಹಿಂದೆ ಸಾಕಷ್ಟು ಅನುಮಾನ- ತನಿಖೆಗೆ ವಿಶೇಷ ತಂಡ ರಚನೆ
Share on WhatsAppShare on FacebookShare on Telegram

ಗುಂಡ್ಲುಪೇಟೆ: ಬಂಡೀಪುರದ ಕುಂದುಕೆರೆ ವಲಯದ ಕೆಬ್ಬೇಪುರ ಗ್ರಾಮದ ಮಲ್ಲಯ್ಯಕಟ್ಟೆಯ ಕೆರೆಯಲ್ಲಿ ಮಂಗಳವಾರ ಹುಲಿಯ ಮೃತದೇಹ ಪತ್ತೆಯಾಗಿದ್ದು, ಹುಲಿಯ ಕಾಲುಗಳು ಹಾಗೂ ಕುತ್ತಿಗೆಗೆ ತಂತಿಯಿಂದ ಕಟ್ಟಿ, ಅದಕ್ಕೆ ಭಾರವಾದ ಕಲ್ಲು ಕಟ್ಟಿ ಕೆರೆಗೆ ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ADVERTISEMENT

ಹುಲಿಯು ಗಂಡಾಗಿದ್ದು, ನಾಲ್ಕರಿಂದ ಐದು ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಲಾಗಿದೆ. ಬೇರೆ ಕಡೆ ಸತ್ತಿರುವ ಹುಲಿಯನ್ನು ದುಷ್ಕರ್ಮಿಗಳು ಇಲ್ಲಿಗೆ ತಂದು ಹಾಕಿರುವ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬಂಡೀಪುರದ ಪಶುವೈದ್ಯ ಡಾ. ವಾಸೀಂ ಮಿರ್ಜಾ ಅವರ ತಂಡ ಬುಧವಾರ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದೆ. ಹುಲಿಯ ದೇಹ ನೀರಿನಲ್ಲಿ ಕೊಳೆತಿರುವುದರಿಂದ ಸಾವಿನ ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ. ಅಂಗಗಳ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಲಿಯಾಗಿರುವುದರಿಂದ ವಯಸ್ಸಿನ ಕಾರಣಕ್ಕೆ ಅದು ಮೃತಪಟ್ಟಿರುವ ಸಾಧ್ಯತೆ ಇಲ್ಲ. ಹುಲಿಯ ಕಾಲು, ಕುತ್ತಿಗೆಗೆ ತಂತಿ ಕಟ್ಟಿರುವುದರಿಂದ ಹುಲಿಯನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ಎಂಬ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

ಘಟನೆ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು. ಆರೋಪಿಗಳನ್ನು ಪತ್ತೆಗೆ ವಿಶೇಷ ತಂಡ ರಚಿಸಲಾಗುವುದು ಎಂದು ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಹೇಳಿದ್ದಾರೆ.

ಎಸಿಎಫ್‌’ಗಳಾದ ನವೀನ್‌, ರವೀಂದ್ರ, ಎನ್‌ಟಿಸಿವೆ ಪ್ರತಿನಿಧಿ ಕೃತಿಕಾ ಆಲನಹಳ್ಳಿ, ಎನ್‌’ಜಿಒ ಪ್ರತಿನಿಧಿ ರಘುರಾಂ, ಕುಂದುಕೆರೆ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್‌ ಸೇರಿದಂತೆ ಸಿಬ್ಬಂದಿ ಇದ್ದರು.

Tags: Bandipur National ParkGundlupettiger death
Previous Post

ಬೀದರ್; ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ | Suicide | Pratidhvani |

Next Post

ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ – 2

Related Posts

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ: ದಶಕಗಳಷ್ಟು ಹಳೆಯ ಆರ್‌ಎಸಿ ಟಿಕೆಟ್ ವ್ಯವಸ್ಥೆ ರದ್ದಾಗುತ್ತಾ? 
Top Story

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ: ದಶಕಗಳಷ್ಟು ಹಳೆಯ ಆರ್‌ಎಸಿ ಟಿಕೆಟ್ ವ್ಯವಸ್ಥೆ ರದ್ದಾಗುತ್ತಾ? 

by Shivakumar
November 15, 2026
0

ದೇಶದ ಕೋಟ್ಯಂತರ ರೈಲು ಪ್ರಯಾಣಿಕರಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಮಹತ್ವದ ಬದಲಾವಣೆಯೊಂದಕ್ಕೆ ಚಿಂತನೆ ನಡೆಸಿದೆ. ಹಲವು ವರ್ಷಗಳಿಂದ ಜಾರಿಯಲ್ಲಿರುವ ಆರ್‌ಎಸಿ (Reservation Against Cancellation) ಟಿಕೆಟ್ ವ್ಯವಸ್ಥೆಯನ್ನು...

Read moreDetails
Loan amounts cannot be recovered from a pension account: High Court's significant ruling

ಪಿಂಚಣಿ ಖಾತೆಯಿಂದ ಸಾಲದ ಹಣ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

November 15, 2026
Possibility of another change to the 60-day advance railway ticket booking rule? Here are the full details.

60 ದಿನಗಳ ಮುಂಗಡ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮತ್ತೆ ಬದಲಾವಣೆ ಸಾಧ್ಯತೆ? ಇಲ್ಲಿದೆ ಸಂಪೂರ್ಣ ಮಾಹಿತಿ

November 15, 2026
RashiPhala

ಇಂದಿನ ರಾಶಿಭವಿಷ್ಯ: ನವೆಂಬರ್ 15ರಂದು ಈ ರಾಶಿಯವರಿಗೆ ಹೊಸ ಅವಕಾಶಗಳ ಸುರಿಮಳೆ! ಪ್ರೀತಿ, ಉದ್ಯೋಗದಲ್ಲಿ ಮಹತ್ವದ ಬದಲಾವಣೆ

November 15, 2026
Competition in politics, cooperation in development: CM DK Shivakumar's statement regarding his discussion with PM Modi

ರಾಜಕಾರಣದಲ್ಲಿ ಪೈಪೋಟಿ, ಅಭಿವೃದ್ಧಿಯಲ್ಲಿ ಸಹಕಾರ: ಪ್ರಧಾನಿ ಮೋದಿ ಜೊತೆಗಿನ ಮಾತುಕತೆ ಬಗ್ಗೆ ಸಿಎಂ ಡಿಕೆಶಿ ಹೇಳಿಕೆ

November 14, 2026
Next Post
ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ – 2

ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ - 2

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada