ಕೆಜಿಎಫ್ ಚಾಪ್ಟರ್ 2’ ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಲೇ ಇದೆ. ಈ ಚಿತ್ರದ ‘ತೂಫಾನ್’ ಮತ್ತು ‘ಗಗನ ನೀ ..’ ಗೀತೆಗಳು ವೈರಲ್ ಆಗಿದ್ದು ಯೂಟ್ಯೂಪ್ನಲ್ಲಿ ದಾಖಲೆ ಬರೆದಿದೆ. . ರವಿ ಬಸ್ರೂರು ಸಂಗೀತ ನೀಡಿರುವ ಈ ಸಿನಿಮಾದ ಮೂರನೇ ಹಾಡು ‘ಸುಲ್ತಾನ’ ಈಗ ಬಿಡುಗಡೆ ಆಗಿದ್ದು ದೇಶಾದ್ಯಂತ ರಾಕಿ ಭಾಯ್ ಆರ್ಭಟ ಇನ್ನಷ್ಟು ಜೋರಾಗಿದೆ.
‘ಕೆಜಿಎಫ್ ಚಾಪ್ಟರ್ 1’ ಸಿನಿಮಾದಲ್ಲಿ ಎಲ್ಲ ಹಾಡುಗಳು ಹಿಟ್ ಆಗಿದ್ದವು. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು . ಹಾಗಾಗಿ ‘ಕೆಜಿಎಫ್:ಚಾಪ್ಟರ್ 2’ ಸಿನಿಮಾದ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಿತ್ತು ಆ ನಿರೀಕ್ಷೆಗೆ ತಕ್ಕಂತೆಯೇ ರವಿ ಬಸ್ರೂರು ಕೆಲಸ ಮಾಡಿದ್ದಾರೆ.

‘ಕೆಜಿಎಫ್ ಚಾಪ್ಟರ್ 2’ ಬಿಡು ಗಡೆಗೆ ಕ್ಷಣಗಣನೆ ಶುರುವಾಗಿದೆ. ಗುರು ವಾರ (ಏ.14) ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ಈಗಾಗಲೇ ಎಲ್ಲ ಚಿತ್ರಮಂದಿರಗಳ ಎದುರಿನಲ್ಲಿ ಯಶ್ ಕಟೌಟ್ಗಳು ರಾರಾಜಿಸುತ್ತಿವೆ. ಮೊದಲ ದಿನ ಟಿಕೆಟ್ಗಳು ಸೋ ಲ್ಡ್ ಔಟ್ ಆಗಿವೆ. ಮಧ್ಯರಾತ್ರಿಯೇ ಫ್ಯಾನ್ಸ್ಶೋ ಆಯೋಜನೆಗೊಂಡಿದೆ.







