• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ರಷ್ಯಾ ಸರ್ಕಾರ ಮತ್ತು ಸೇನೆಯ ವಿರುದ್ಧ ಹಿಂಸಾತ್ಮಕ ಪೋಸ್ಟ್ : ‌ ಇನ್ಸ್ಟಾಗ್ರಾಮ್‌ ನಿಷೇಧಿಸಿದ ರಷ್ಯಾ!

ಪ್ರತಿಧ್ವನಿ by ಪ್ರತಿಧ್ವನಿ
March 13, 2022
in ವಿದೇಶ
0
ರಷ್ಯಾ ಸರ್ಕಾರ ಮತ್ತು ಸೇನೆಯ ವಿರುದ್ಧ ಹಿಂಸಾತ್ಮಕ ಪೋಸ್ಟ್ : ‌ ಇನ್ಸ್ಟಾಗ್ರಾಮ್‌ ನಿಷೇಧಿಸಿದ ರಷ್ಯಾ!
Share on WhatsAppShare on FacebookShare on Telegram

ADVERTISEMENT

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಡುವೆಯೇ ರಷ್ಯಾ ಸರ್ಕಾರವು ತನ್ನ ದೇಶದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಾದ Instagram ಅನ್ನು ನಿರ್ಬಂಧಿಸಿದೆ. ಏಕೆಂದರೆ ಅದು ರಷ್ಯಾದ ಸೈನಿಕರ ವಿರುದ್ಧ ‘ಹಿಂಸಾಚಾರದ ಕರೆಗಳಿಗೆ’ (cal for violence) ತಾತ್ಕಾಲಿಕವಾಗಿ ಅನುಮತಿ ನೀಡಿದೆ ಎಂದು ಮಾರ್ಚ್ 14 ರಿಂದ ರಷ್ಯಾದಲ್ಲಿ Instagram ಅನ್ನು ನಿರ್ಬಂಧಿಸುವುದಾಗಿ ರಷ್ಯಾ ಸರ್ಕಾರ ಘೋಷಿಸಿದೆ ಎಂದು BBC ವರದಿ ಮಾಡಿದೆ.

“ಜನರಲ್ ಪ್ರಾಸಿಕ್ಯೂಟರ್ ಕಚೇರಿಯ ಬೇಡಿಕೆಯ ಆಧಾರದ ಮೇಲೆ, ರಷ್ಯಾದ ಒಕ್ಕೂಟ ಪ್ರದೇಶದಲ್ಲಿ Instagram ನಿಷೇಧ ಹೇರಲಾಗುವುದು” ಎಂದು ರಷ್ಯಾದ ಮಾಧ್ಯಮ ನಿಯಂತ್ರಕ ರೋಸ್ಕೊಮ್ನಾಡ್ಜೋರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್‌ನನ್ನು ಆಕ್ರಮಿಸುತ್ತಿರುವ ರಷ್ಯಾದ ಸೈನಿಕರ ವಿರುದ್ಧ ‘ಹಿಂಸಾಚಾರಕ್ಕೆ ಕರೆ ನೀಡುವ’ ಪೋಸ್ಟ್ ‌ಗಳನ್ನು ಪ್ರಕಟಿಸಲು ಕೆಲವು ದೇಶಗಳಲ್ಲಿ ತನ್ನ ಬಳಕೆದಾರರಿಗೆ ಅವಕಾಶ ನೀಡುವುದಾಗಿ Instagram ಮಾಲೀಕ ಮೆಟಾ ಹೇಳಿದ ನಂತರ ಈ ನಿಷೇಧ ಹೇರಲು‌‌ ನಿರ್ಧರಿಸಲಾಯಿತು.

ಈ ಬಗ್ಗೆ ಮಾತನಾಡಿರುವ Instagram ನ ಉನ್ನತ ಕಾರ್ಯನಿರ್ವಾಹಕ, ಆಡಮ್ ಮೊಸ್ಸೆರಿ, ದೇಶದಲ್ಲಿರುವ 80 ಮಿಲಿಯನ್ ಬಳಕೆದಾರರನ್ನು ಬಳಸದಂತೆ ತಡೆಯುವುದು ‘ತಪ್ಪು’ ಎಂದು ಕರೆದಿದ್ದಾರೆ.

“ಈ ನಿರ್ಧಾರವು ರಷ್ಯಾದಲ್ಲಿರುವ 80 ಮಿಲಿಯನ್ ಜನರ ನಡುವೆ ಪರಸ್ಪರ ಸಂಬಂಧವನ್ನು ಕಡಿತಗೊಳಿಸುತ್ತದೆ ಮತ್ತು ಪ್ರಪಂಚದ ಉಳಿದ ಭಾಗದಲ್ಲಿರುವ ರಷ್ಯನ್ನರಲ್ಲಿ ಶೇಕಡಾ 80 ರಷ್ಟು ಜನರು ಇನ್ಸ್ಟಾಗ್ರಾಮ್ ಬಳಸುತ್ತಿದ್ದು ಅವರೊಂದಿಗೂ ರಷ್ಯಾದಲ್ಲಿರುವವರ ಸಂಪರ್ಕ‌ ಕಡಿತಗೊಳ್ಳುತ್ತದೆ. ಇದು ತಪ್ಪು” ಎಂದು ಮೊಸ್ಸೆರಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ರೋಸ್ಕೊಮ್ನಾಡ್ಜೋರ್ ಫೇಸ್‌ಬುಕ್‌ನ್ನೂ ರಷ್ಯಾದಲ್ಲಿ ನಿಷೇಧಿಸಿ ಆದೇಶ ಹೊರಡಿಸಿದ್ದು ಅಕ್ಟೋಬರ್ 2020 ರಿಂದೀಚೆ ‘ರಷ್ಯಾದ ಮಾಧ್ಯಮ ಮತ್ತು ಮಾಹಿತಿ ಸಂಪನ್ಮೂಲಗಳ’ ವಿರುದ್ಧ ಫೇಸ್‌ಬುಕ್‌ 26 ಪ್ರಕರಣಗಳಲ್ಲಿ ತಾರತಮ್ಯ ಎಸಗಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿದ್ದಾರೆ. ಇದಕ್ಕೂ ಮೊದಲು, ರಷ್ಯಾದ ಶಾಸಕಾಂಗವು ದೇಶದ ಸಶಸ್ತ್ರ ಪಡೆಗಳ ಬಗ್ಗೆ ‘ನಕಲಿ ಸುದ್ದಿ’ ಹರಡುವುದರ ವಿರುದ್ಧ ಹೊಸ ಕಾನೂನನ್ನು ಮುಂದಿಟ್ಟಿದ್ದು‌ ಅದರ ಪ್ರಕಾರ ಅಪರಾಧಿಗಳಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ನೀತಿ ಬದಲಿಸಿದ Instagram


ಯುದ್ಧ ಪೀಡಿತ ಪ್ರದೇಶದ ಜನರಿಗೆ ಸಶಸ್ತ್ರ ಪಡೆಗಳನ್ನು ಎದುರಿಸಲು ಮತ್ತು ಹಿಂಸಾತ್ಮಕ ಭಾವನೆಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ವ್ಯಕ್ತಪಡಿಸಲು ತಾತ್ಕಾಲಿಕ ವಿನಾಯಿತಿಯನ್ನು ನೀಡಲಾಗಿದೆ ಎಂದು ಮೆಟಾ ವಕ್ತಾರರು ಬಿಬಿಸಿಗೆ ತಿಳಿಸಿದ್ದಾರೆ. ಮೆಟಾ ಫೇಸ್‌ಬುಕ್, ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್‌ಗಳ ಮಾತೃ ಸಂಸ್ಥೆಯಾಗಿದೆ.

ಸಾಮಾನ್ಯವಾಗಿ ಹಿಂಸಾತ್ಮಕ ಪೋಸ್ಟ್‌ಗಳನ್ನು ಇನ್ಸ್ಟಾಗ್ರಾಮ‌ನಲ್ಲಿ ಅಪ್ಲೋಡ್ ಮಾಡಲು‌ ಅವಕಾಶವಿಲ್ಲ. ಆದರೆ ರಷ್ಯನ್ ಆಕ್ರಮಣಕಾರರನ್ನು ಎದುರಿಸುವ ಪೋಸ್ಟ್‌ಗಳಿಗೆ ಈ ನಿಯಮಗಳನ್ನು ತಾತ್ಕಾಲಿಕವಾಗಿ ಸಡಿಲಿಸಲಾಗಿದ್ದು ಅಂತಹ ಪೋಸ್ಟ್‌ಗಳಿಗೂ ಅನುಮತಿ ನೀಡಲಾಗುತ್ತಿದೆ. ಆದರೆ ಈಗಲೂ ನಾಗರಿಕರ ವಿರುದ್ಧ ಇಂತಹ ಪೋಸ್ಟ್‌ಗಳನ್ನು ಅಪ್ಲೋಡ್ ಮಾಡಲು ಅನುಮತಿಸಲಾಗುವುದಿಲ್ಲ.

ರಷ್ಯಾದ ಪ್ರತಿಕ್ರಿಯೆ


ನೀತಿ ಬದಲಾವಣೆಗೆ ಪ್ರತಿಕ್ರಿಯೆಯಾಗಿ ರಷ್ಯಾವು ಮೆಟಾದ ‘ಉಗ್ರ ಚಟುವಟಿಕೆಗಳನ್ನು’ ಕೊನೆಗೊಳಿಸುವಂತೆ ಯುಎಸ್‌ಗೆ ಕರೆ ನೀಡಿದೆ. ಅಲ್ಲದೆ ಮಾರ್ಚ್ 11ರ ಶುಕ್ರವಾರದಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಕಚೇರಿಯು ಮೆಟಾ ವಿರುದ್ಧ ಕ್ರಿಮಿನಲ್ ತನಿಖೆಗೂ ಕರೆ ನೀಡಿದೆ.

ಮೆಟಾದ ಉಗ್ರಗಾಮಿ ಚಟುವಟಿಕೆಗಳನ್ನು ಅಧಿಕಾರಿಗಳು ನಿಲ್ಲಿಸಬೇಕು ಹಾಗೂ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರು ಸತ್ಯದ ಮಾನದಂಡಗಳನ್ನು ನಿರ್ಧರಿಸುವ ಮತ್ತು ರಾಷ್ಟ್ರಗಳನ್ನು ಪರಸ್ಪರ ವಿರುದ್ಧವಾಗಿ ನಿಲ್ಲಿಸುವ ಅಧಿಕಾರವನ್ನು ಮೇಟಾಗೆ ನೀಡಿಲ್ಲ ಎಂದು ಯುಎಸ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಈ ಮಧ್ಯೆ ಯೂಟ್ಯೂಬ್ ರಷ್ಯಾದ ಸರ್ಕಾರಿ ಪ್ರಾಯೋಜಿತ ಮಾಧ್ಯಮಗಳಿಗೆ ಪ್ರಪಂಚದಾದ್ಯಂತ ಅನುಮತಿ ನಿರ್ಬಂಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಈ ಹಿಂದೆ, ಯೂಟ್ಯೂಬ್ ಈ ಚಾನಲ್‌ಗಳನ್ನು ಯುರೋಪಿನಾದ್ಯಂತ ನಿರ್ಬಂಧಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ಸರ್ಕಾರೀ ಮಾಧ್ಯಮವಾದ ಸ್ಪುಟ್ನಿಕ್ ತನ್ನ ಹೇಳಿಕೆಯೊಂದರಲ್ಲಿ, ಅನುಮತಿ ನಿರಾಕರಿಸುವುದು ‘ಪ್ರಜಾಸತ್ತಾತ್ಮಕ ಸಮಾಜದ ಮೂಲಭೂತ ತತ್ವಗಳಲ್ಲಿ ಒಂದಾದ ಪತ್ರಿಕಾ ಸ್ವಾತಂತ್ರ್ಯ’ದ ಮೇಲಿನ ದೌರ್ಜನ್ಯದ ಹೊಸ ಮಾರ್ಗವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದೆ.

Tags: ಅಮೆರಿಕಾ-ರಷ್ಯಾಇನ್ಸ್ಸ್ಟಾಗ್ರಾಂಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀಉಕ್ರೇನ್ ಬಿಕ್ಕಟ್ಟುಉಕ್ರೇನ್ ಮೇಲೆ ರಷ್ಯಾ ದಾಳಿಉಕ್ರೇನ್-ರಷ್ಯಾರಷ್ಯಾರಷ್ಯಾ ಅಧ್ಯಕ್ಷ ಪುಟಿನ್ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Previous Post

ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಕಳ್ಳತನ, ನಟಿ ರೂಪಾ ದತ್ತಾ ಬಂಧನ

Next Post

ಕರೋನಾ ಸಮಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದ ಆಯುಷ್‌ ವೈದ್ಯರ ಬದುಕು ಅತಂತ್ರ !

Related Posts

Gangster Goldy Brar added to FBIs Most Wanted list
Top Story

ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ `FBI’ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆ: ₹8.3 ಕೋಟಿ ಬಹುಮಾನ ಘೋಷಣೆ | FBI

by ಪ್ರತಿಧ್ವನಿ
September 29, 2026
0

ವಾಷಿಂಗ್ಟನ್: ಭಾರತದ ಕುಖ್ಯಾತ ಗ್ಯಾಂಗ್‌ಸ್ಟರ್ ಸತೀಂದರ್ ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ (Goldy Brar)ನನ್ನು ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI)...

Read moreDetails
Heavy rains lash Nepal 21 dead in floods and landslides

BREAKING : ನೇಪಾಳದಲ್ಲಿ ಭಾರಿ ಮಳೆ ಅಬ್ಬರ: ಪ್ರವಾಹ, ಭೂಕುಸಿತಕ್ಕೆ 21 ಮಂದಿ ಬಲಿ | NEPAL

September 28, 2026
Today is World Tourism Day know the importance historical background

ಇಂದು `ವಿಶ್ವ ಪ್ರವಾಸೋದ್ಯಮ ದಿನ’ 2026: ಈ ದಿನದ ಮಹತ್ವ, ಐತಿಹಾಸಿಕ ಹಿನ್ನೆಲೆ ತಿಳಿಯಿರಿ | WORLD TOURISM DAY

September 27, 2026
ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

September 17, 2026
ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

September 13, 2026
Next Post
ಕರೋನಾ ಸಮಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದ ಆಯುಷ್‌ ವೈದ್ಯರ ಬದುಕು ಅತಂತ್ರ !

ಕರೋನಾ ಸಮಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದ ಆಯುಷ್‌ ವೈದ್ಯರ ಬದುಕು ಅತಂತ್ರ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada