ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಕನಿಷ್ಠ 8 ಮಂದಿ ಸಾವನಪ್ಪಿದ್ದು , 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಇಂದು ಬೆಳಗ್ಗೆ (ಗುರುವಾರ) ಆರು ಗಂಟೆಗೆ ಉಕ್ರೇನ್ ವಿರುದ್ಧ ಮಿಲಿಟರಿ ಆಪರೇಷನ್ ಘೋಷಣೆ ಮಾಡಿತ್ತು. ಅದರಂತೆ ರಷ್ಯಾ ಸೇನೆಯ ಭೂ ಮತ್ತು ವಾಯುಪಡೆಗಳು, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿವೆ. ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಉಕ್ರೇನ್ ಗಡಿ ದಾಟಿ, ಚೆರ್ನಿಹಿವ್, ಖರ್ಕೈವ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಕ್ಕೆ ಪ್ರವೇಶಿಸಿವೆ ಎಂದು ಗಡಿ ಭದ್ರತಾ ಪಡೆ ಸಿಬ್ಬಂದಿ ತಿಳಿಸಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿ ಫೆಬ್ರವರಿ 24ರಂದು ರಣಕಹಳೆ ಊದಿದ್ದಾರೆ. ಇದಾದ ಬಳಿಕ ಮಾತನಾಡಿದ ಪುಟಿನ್, ”ನಿಯೋನಾಜಿವಾದಿಗಳನ್ನು ಹೊರಕ್ಕೆ ಹಾಕಿ, ಪ್ರತ್ಯೇಕತಾವಾದಿಗಳಿಗೆ ಸ್ವಾತಂತ್ರ್ಯ ಕೊಡಿಸಲು ಈ ದಾಳಿ ನಡೆಸಲಾಗಿದೆ,” ಎಂದಿದ್ದಾರೆ. “ನಿಮ್ಮ ಪೂರ್ವಜರು ನಾಜಿಗಳೊಂದಿಗೆ ಹೋರಾಡಿದರು. ಕೀವ್ನಲ್ಲಿರುವ ನಾಜಿ ಜುಂಟಾದ ಆದೇಶಗಳನ್ನು ಪಾಲಿಸಬೇಡಿ. ನಿನ್ನ ಶಸ್ತ್ರಾಸ್ತ್ರಗಳನ್ನು ಕೆಳಗೆ ಇರಿಸಿ ಮನೆಗೆ ಹೋಗಿ” ಎಂದು ಉಕ್ರೇನ್ನಿನ್ನರಿಗೆ ಪುಟಿನ್ ಕರೆ ನೀಡಿದ್ದಾರೆ.