ಭೂಮಿಯ ಕಡೆಗೆ ಧಾವಿಸುತ್ತಿರುವ ಅಂದಾಜು 15 ಸಾವಿರಕ್ಕೂ ಅಧಿಕ ಕ್ಷುದ್ರಗ್ರಹಗಳನ್ನು ತಡೆಯಲು ನಮ್ಮ ಬಳಿ ಯಾವುದೇ ಮಾರ್ಗವಿಲ್ಲ ಎಂದು ನಾಸಾ ವಿಜ್ಞಾನಿ ಎಚ್ಚರಿಸಿದ್ದಾರೆ.ಇದು ವೈಜ್ಞಾನಿಕ ಸಮುದಾಯದಲ್ಲಿ ಮತ್ತು ಪ್ರಪಂಚದಾದ್ಯಂತ ಆಂತಕ ಹೆಚ್ಚಿಸಿದೆ.

ಭೂಮಿಯನ್ನು ಸಮೀಪಿಸುತ್ತಿರುವ 15,000 ಪತ್ತೆಹಚ್ಚಲಾಗದ ಕ್ಷುದ್ರಗ್ರಹಗಳಿಂದ ರಕ್ಷಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ, ಪ್ರತಿಯೊಂದೂ ಇಡೀ ನಗರವನ್ನು ನಾಶಮಾಡಬಹುದು ಎಂದು ನಾಸಾದ ಗ್ರಹ ರಕ್ಷಣಾ ಮುಖ್ಯಸ್ಥ ಕೆಲ್ಲಿ ಫಾಸ್ಟ್ ಎಚ್ಚರಿಸಿದ್ದಾರೆ.2032 ರಲ್ಲಿ ಕ್ಷುದ್ರಗ್ರಹ YR4 ಭೂಮಿಗೆ ಅಪ್ಪಳಿಸುವ 4% ಅವಕಾಶವನ್ನು ಹೊಂದಿರುವುದರಿಂದ ವೈಜ್ಞಾನಿಕ ಜಗತ್ತು ಕೆಲ್ಲಿ ಫಾಸ್ಟ್ ಅವರ ಎಚ್ಚರಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ.

ಸುಮಾರು 140 ಮೀಟರ್ ಅಥವಾ ಅದಕ್ಕಿಂತ ದೊಡ್ಡ ಗಾತ್ರದ ಸುಮಾರು 25,000 ಕ್ಷುದ್ರಗ್ರಹಗಳನ್ನು ಗುರುತಿಸಲಾಗಿದೆ, ಅವು ಭೂಮಿಗೆ ಡಿಕ್ಕಿ ಹೊಡೆದರೆ ಒಂದಿಡೀ ನಗರವೇ ನಾಶವಾಗಬಹುದು. ನಾಸಾ ಅವುಗಳನ್ನು ‘ಸಿಟಿ ಕಿಲ್ಲರ್ಸ್’ ಎಂದು ವರ್ಗೀಕರಿಸಿದೆ. ಅವು ಯಾವುದೇ ಎಚ್ಚರಿಕೆ ಇಲ್ಲದೆ ಭೂಮಿಗೆ ಡಿಕ್ಕಿ ಹೊಡೆದರೆ, ಪರಿಣಾಮವು ತುಂಬಾ ದೊಡ್ಡದಾಗಿರುತ್ತದೆ.

ಕ್ಷುದ್ರಗ್ರಹಗಳು ನಮ್ಮ ಮೇಲೆ ಬೀಳುವ ಮೊದಲು ನಾವು ಅವುಗಳನ್ನು ನಾಶಪಡಿಸಬೇಕಾಗಿದೆ. ಅದು ವೈಜ್ಞಾನಿಕ ಪ್ರಪಂಚದ ಜವಾಬ್ದಾರಿ ಎಂದು ಕೆಲ್ಲಿಹೇಳಿದ್ದಾರೆ.






