ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಫೈಟ್ ಸಿಕ್ಕಾಪಟ್ಟೆ ಕುತೂಹಲಕ್ಕೆ ಕಾರಣವಾಗಿದೆ. ವಿಧಾನ ಸಭೆ ಚುನಾವಣೆಯಲ್ಲಿ ವರಿಷ್ಠರ ಸೂನೆ ಮೇರೆಗೆ ಕ್ಷೇತ್ರ ಬದಲಿಸಿ ಎರಡೂ ಕ್ಷೇತ್ರದಲ್ಲಿ ಸೋತಿದ್ದ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ತುಮಕೂರು ಲೋಕಸಭೆ ಟಿಕೇಟ್ ಮೇಲೆ ಕಣ್ಣಿಟ್ಟಿರುವ ಕಾರಣ ಕ್ಷೇತಚರದಲ್ಲಿ ಮಿಂಚಿನ ಸಂಆರ ನಡೆಸ್ತಿದ್ದಾರೆ. ಸತತವಾಗಿ ಬಿಜೆಪಿ ನಾಯಕರ ಭೇಟಿ ಮಾಡ್ತಿದ್ದಾರೆ. ಇದ್ರಲ್ಲಿ ಹೊಸದೇನಿಲ್ಲ. ಆದ್ರೆ ಇದೀಗ ಮಾಜಿ ಸಚಿವ ವಿ.ಸೋಮಣ್ಣ ಜೆಡಿಎಸ್ ನಾಯಕರನ್ನೂ ಭೇಟಿಯಾಗುವ ಮೂಲಕ ಮೈತ್ರಿ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ಆ ಮೂಲಕ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತನಗೇ ಸೀಮಿತ ಎಂಬ ಸಂದೇಶ ರವಾನಿಸಿದ್ದಾರೆ. ಪ್ರತಿದಿನ ಒಂದೊದು ಭಾಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಮೈತ್ರಿ ನಾಯಕರನ್ನ ಭೇಟಿಯಾಗಿ ತಮಗೆ ಬೆಂಬಲಿಸುವಂತೆ ಕೋರುತ್ತಿರುವ ಸೋಮಣ್ಣ, ನಿರಂತರವಾಗಿ ತುಮಕೂರಿನಲ್ಲಿ ಆಕ್ಟೀವ್ ಆಗಿದ್ದಾರೆ.

ಇತ್ತೀಚಿಗೆ ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ತುಮಕೂರಿನ ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ತುಮಕೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ವಿಜಿ ಗೌಡ ಸೇರಿದಂತೆ ಹಲವು ನಾಯಕರನ್ನ, ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಮಾಕಿ ಸಚಿವ ವಿ.ಸೊಮಣ್ಣ ಭೇಟಿಯಾಗಿದ್ದಾರೆ. ದಿನ ಬೆಳಗಾದ್ರೆ ತುಮಕೂರಿಗೆ ಭೇಟಿ ಕೊಡ್ತಿರೋ ಸೋಮಣ್ಣ ಈ ಮೂಲಕ ಲೋಕ ಚುನಾವಣೆಗೆ ಅಖಾಡ ಸಿದ್ದಗೊಳಿಸಿಕೊಳ್ಳುತ್ತಿದ್ದಾರೆ.

ಮತ್ತೊಂದ್ಕಡೆ ಜೆ.ಸಿ ಮಾಧುಸ್ವಾಮಿ ಕೂಡ ತಮಗೇ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಇಬ್ಬರು ಘಟಾನುಘಟಿ ನಾಐಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು , ಬಿಜೆಪಿ ನಾಯಕರ ನಡುವಿನ ಜಿದ್ದಾ-ಜಿದ್ದಿಯಿಂದಲೇ ತುಮಕೂರು ಕ್ಷೇತ್ರ ಈ ಬಾರಿ ಸದ್ದು ಮಾಡ್ತಿದೆ.