ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕುತೂಹಲ ಕೆರಳಿಸಿದ ಸಿಎಂ ಶಿಕಾರಿಪುರ ಭೇಟಿ!

ರಾಜ್ಯ ಬಿಜೆಪಿಯ ನಾಯಕತ್ವ ಗೊಂದಲಗಳು ಬಿಚ್ಚಿದಷ್ಟೂ ಗೋಜಲಾಗುವ ಗಾಳಿಪಟದ ನೂಲಿನ ಉಂಡೆಯಂತಾಗಿದೆ. ಆಡಳಿತದ ಪಟ ಕರೋನಾ ಎಂಬ ಬಿರುಗಾಳಿಗೆ ಸಿಕ್ಕಿ ತರಗೆಲೆಯಾಗಿರುವಾಗ, ಅದರ ಸೂತ್ರದಾರವೇ ಸಿಕ್ಕುಸಿಕ್ಕಾಗಿ, ಯಾವ ಕ್ಷಣದಲ್ಲಿ ಸೂತ್ರ ಹರಿಯುವುದೋ, ಪಟ ದಿಕ್ಕಾಪಾಲಾಗುವುದೋ ಎಂಬಂತಾಗಿದೆ. ಭಿನ್ನಮತೀಯ ನಾಯಕರ ದೆಹಲಿ ಭೇಟಿ, ಅದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ದೆಹಲಿ ಭೇಟಿ, ಬಳಿಕ ಸ್ವತಃ ಸಿಎಂ ಸಂಚಲನಕಾರಿ ಹೇಳಿಕೆ, ..ಹೀಗೆ ಕಳೆದ ಎರಡು ವಾರದ ಬಿರುಸಿನ ಬೆಳವಣಿಗೆಗಳು ನಾಯಕತ್ವ ಬದಲಾವಣೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದವು. ಬಳಿಕ, ವರಿಷ್ಠರು … Continue reading ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕುತೂಹಲ ಕೆರಳಿಸಿದ ಸಿಎಂ ಶಿಕಾರಿಪುರ ಭೇಟಿ!