ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ: ವಿವಿಧ ಜಾತಿಯ 6,316 ಮರಗಳಿಗೆ ಬೀಳಲಿದೆ ಕೊಡಲಿಯೇಟು!

ಬೆಂಗಳೂರಿನ ಯಲಹಂಕ ಹೋಬಳಿಯ ಸಿಂಗನಾಯಕಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆರೆ ಅಭಿವೃದ್ಧಿ ಪಡಿಸಲು ಈಗ ಸರ್ಕಾರ ಮುಂದಾಗಿದ್ದು, ಈಗಾಗಲೇ ಬತ್ತಿ ಹೋಗಿದ್ದ ಕೆರೆಯಲ್ಲಿ ಬೆಳೆದ ಮರಗಳನ್ನು ಕಟಾವು ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರವಿದೆ. ADVERTISEMENT ಸಣ್ಣ ನೀರಾವರಿ & ಅಂತರ್ಜಲ ಅಭಿವೃದ್ಧಿ ಇಲಾಖೆಯ ಮನವಿಯ ಮೇರೆಗೆ ಇಲ್ಲಿನ ಮರಗಣತಿಯನ್ನು ರಾಜ್ಯ ಅರಣ್ಯ ಇಲಾಖೆ ಈಗಾಗಲೇ ನಡೆಸಿದೆ. ಹೆಬ್ಬಾಳ – ನಾಗವಾರ ವ್ಯಾಲಿ ಯೋಜನೆ ಅಡಿಯಲ್ಲಿ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಪಡಿಸಲು ಮರಗಳ ಕಟಾವು ಮಾಡಿಕೊಡಿ ಎಂದು ಕೇಳಿಕೊಂಡಿದೆ. ಸಾರ್ವಜನಿಕ ಆಕ್ಷೇಪಣೆಗೆ ಜೂನ್ 14 ರಿಂದ 24ರವರೆಗೆ ಸಮಯವನ್ನು ಅರಣ್ಯ ಇಲಾಖೆ ಕೊಟ್ಟಿತ್ತು. ಈಗಾಗಲೇ ಆ ಸಮಯ ಮುಕ್ತಾಯಗೊಂಡಿದೆ. ಸದ್ಯ ಪರಿಸರವಾದಿಗಳು ಸಿಂಗನಾಯಕನಹಳ್ಳಿ ಕೆರೆಯಲ್ಲಿ ಬೆಳೆದು ನಿಂತಿರುವ ಕಿರು ಅರಣ್ಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಆದರೆ, ಸಿಂಗನಾಯಕನಹಳ್ಳಿಯ ಬಹುತೇಕ ಮಂದಿ‌ ಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆಕ್ಷೇಪಣೆ ಸಲ್ಲಿಕೆ ಕಾಲಾವಕಾಶ ಹೆಚ್ಚಿಸುವಂತೆ ಆಗ್ರಹ ಕೆರೆಯ ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವ ಕುರಿತು ಆಕ್ಷೇಪಣೆ ಸಲ್ಲಿಸಲು ಜೂನ್‌ … Continue reading ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ: ವಿವಿಧ ಜಾತಿಯ 6,316 ಮರಗಳಿಗೆ ಬೀಳಲಿದೆ ಕೊಡಲಿಯೇಟು!