• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, February 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ: ವಿವಿಧ ಜಾತಿಯ 6,316 ಮರಗಳಿಗೆ ಬೀಳಲಿದೆ ಕೊಡಲಿಯೇಟು!

Any Mind by Any Mind
June 26, 2021
in ಕರ್ನಾಟಕ
0
ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ: ವಿವಿಧ ಜಾತಿಯ 6,316 ಮರಗಳಿಗೆ ಬೀಳಲಿದೆ ಕೊಡಲಿಯೇಟು!
Share on WhatsAppShare on FacebookShare on Telegram

ಬೆಂಗಳೂರಿನ ಯಲಹಂಕ ಹೋಬಳಿಯ ಸಿಂಗನಾಯಕಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆರೆ ಅಭಿವೃದ್ಧಿ ಪಡಿಸಲು ಈಗ ಸರ್ಕಾರ ಮುಂದಾಗಿದ್ದು, ಈಗಾಗಲೇ ಬತ್ತಿ ಹೋಗಿದ್ದ ಕೆರೆಯಲ್ಲಿ ಬೆಳೆದ ಮರಗಳನ್ನು ಕಟಾವು ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರವಿದೆ.

ADVERTISEMENT

ಸಣ್ಣ ನೀರಾವರಿ & ಅಂತರ್ಜಲ ಅಭಿವೃದ್ಧಿ ಇಲಾಖೆಯ ಮನವಿಯ ಮೇರೆಗೆ ಇಲ್ಲಿನ ಮರಗಣತಿಯನ್ನು ರಾಜ್ಯ ಅರಣ್ಯ ಇಲಾಖೆ ಈಗಾಗಲೇ ನಡೆಸಿದೆ. ಹೆಬ್ಬಾಳ – ನಾಗವಾರ ವ್ಯಾಲಿ ಯೋಜನೆ ಅಡಿಯಲ್ಲಿ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಪಡಿಸಲು ಮರಗಳ ಕಟಾವು ಮಾಡಿಕೊಡಿ ಎಂದು ಕೇಳಿಕೊಂಡಿದೆ.

The proposed lake rejuvenation at #Singanayakanahalli must take place without destroying the ecology or the habitat. @Jhatkaadotorg @Namma_Bengaluru https://t.co/NeP2uEe9vC #save6316trees
Lake experts believe that lake rejuvenation can happen without cutting such trees pic.twitter.com/3WF1dLL86M

— NBF (@Namma_Bengaluru) June 23, 2021

ಸಾರ್ವಜನಿಕ ಆಕ್ಷೇಪಣೆಗೆ ಜೂನ್ 14 ರಿಂದ 24ರವರೆಗೆ ಸಮಯವನ್ನು ಅರಣ್ಯ ಇಲಾಖೆ ಕೊಟ್ಟಿತ್ತು. ಈಗಾಗಲೇ ಆ ಸಮಯ ಮುಕ್ತಾಯಗೊಂಡಿದೆ. ಸದ್ಯ ಪರಿಸರವಾದಿಗಳು ಸಿಂಗನಾಯಕನಹಳ್ಳಿ ಕೆರೆಯಲ್ಲಿ ಬೆಳೆದು ನಿಂತಿರುವ ಕಿರು ಅರಣ್ಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಆದರೆ, ಸಿಂಗನಾಯಕನಹಳ್ಳಿಯ ಬಹುತೇಕ ಮಂದಿ‌ ಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

@Namma_Bengaluru, @Jhatkaadotorg & @vijayvruksha met the DCF Mr Ravishankar and submitted a memorandum requesting him to give citizens 3 months’ time to assess & give reports on the project.#SayNoToAxingOfTrees #save6316trees pic.twitter.com/pjcb4olTDx

— NBF (@Namma_Bengaluru) June 24, 2021

ಆಕ್ಷೇಪಣೆ ಸಲ್ಲಿಕೆ ಕಾಲಾವಕಾಶ ಹೆಚ್ಚಿಸುವಂತೆ ಆಗ್ರಹ


ಕೆರೆಯ ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವ ಕುರಿತು ಆಕ್ಷೇಪಣೆ ಸಲ್ಲಿಸಲು ಜೂನ್‌ 14ರಿಂದ 24ರವರೆಗೆ ಮಾತ್ರ ಅರಣ್ಯ ಇಲಾಖೆ ಕಾಲಾವಕಾಶ ನೀಡಿದೆ. ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ ಈ ಕಾಲಾವಕಾಶವನ್ನು ಹೆಚ್ಚಿಸಬೇಕು’ ಎಂದು ನಮ್ಮ ಬೆಂಗಳೂರು ಫೌಂಡೇಷನ್‌ ಪ್ರಧಾನ ಕಾರ್ಯದರ್ಶಿ ವಿನೋದ್‌ ಜೇಕಬ್‌ ಒತ್ತಾಯಿಸಿದ್ದಾರೆ.

ಆಕ್ಷೇಪಣೆ ಸಲ್ಲಿಕೆ ಕಾಲಾವಕಾಶ ಮುಗಿಯುತ್ತಿದ್ದಂತೆ ಪ್ರದೇಶವನ್ನು ಪರಿಶೀಲಿಸಲು ಪರಿಸರವಾದಿಗಳ ತಂಡ ಹೋಗಿದ್ದು, ಕಟಾವಿಗೆ ಗುರುತು ಮಾಡಿರುವ ಮರಗಳು 20 ರಿಂದ 25 ವರ್ಷದೊಳಗಿನವುಗಳಲ್ಲ, 40 ವರ್ಷಕ್ಕೂ ಹೆಚ್ಚಿನ ಮರಗಳಿವೆಯೆಂದು ತಿಳಿಸಿದೆ.

ಸಿಂಗನಾಯಕನಹಳ್ಳಿಯ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದೆಂದು ಒತ್ತಾಯಿಸಿ ಆನ್‌ಲೈನ್‌ನಲ್ಲೂ ಅಭಿಯಾನ ಶುರುವಾಗಿದ್ದು, #SayNoToAxingOfTrees #save6316trees ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಮರ ಕಡಿಯದಂತೆ ಒತ್ತಾಯಿಸಲಾಗುತ್ತಿದೆ. 

https://twitter.com/VINODSONY/status/1407703725305581570

ಸಿಂಗನಾಯಕನಹಳ್ಳಿ ‌ಕೆರೆಯ ಅಭಿವೃದ್ದಿಗೆಂದು ಈಗಾಗಲೇ ಕಟಾವಿಗೆ ಮರಗಳನ್ನು ಗುರುತಿಸಿದ್ದು, ಅವುಗಳ ವಿವರ ಇಂತಿದೆ.

ಅಕೇಶಿಯ : 940

ಹೊಂಗೆ ಮರ: 560

ಸಿಸು: 550

ಜಮೂನ್: 168

ಜಾಲಿ ಮರ : 4024

ಇತರೆ ಮರಗಳು : 72

ಒಟ್ಟು : 6,316

Tags: BBMPforestHebbal-Nagawara valley projectLakeLake RejuvenationNamma BengaluruSinganayakanahalli
Previous Post

ರಾಜ್ಯದ ಸ್ಥಾನಮಾನ ನೀಡಿದ ಬಳಿಕವಷ್ಟೇ, ಚುನಾವಣೆ ನಡೆಸಿ–ಗುಲಾಂ ನಬಿ ಆಝಾದ್

Next Post

ಕರ್ನಾಟಕದ ಜನರ ಪಾಲಿಗೆ ಇದಕ್ಕಿಂತ ದೌರ್ಭಾಗ್ಯದ ಸಂಗತಿ ಮತ್ತೊಂದಿದೆಯೇ?

Related Posts

ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್..ಅವರೇ ಸುಪ್ರೀಂ: ಗಣಿಗ ರವಿಕುಮಾರ್ ವ್ಯಂಗ್ಯ
Top Story

ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್..ಅವರೇ ಸುಪ್ರೀಂ: ಗಣಿಗ ರವಿಕುಮಾರ್ ವ್ಯಂಗ್ಯ

by ಪ್ರತಿಧ್ವನಿ
February 15, 2026
0

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಅವರೇ ನಮ್ಮ ಹೈಕಮಾಂಡ್ ಎನ್ನುವ ಮೂಲಕ ಶಾಸಕ ಗಣಿಗ ರವಿಕುಮಾರ್(MLA Ganiga Ravi Kumar) ವ್ಯಂಗ್ಯವಾಡಿದ್ದಾರೆ....

Read moreDetails
Tumakuru: ಪ್ರಿಯಕರನ ಜೊತೆ ಎಸ್ಕೇಪ್‌: ಪ್ರಿಯಾಂಕಾ ಪಕ್ಕಾ ಪ್ಲಾನ್‌ ಹೇಗಿತ್ತು..?

Tumakuru: ಪ್ರಿಯಕರನ ಜೊತೆ ಎಸ್ಕೇಪ್‌: ಪ್ರಿಯಾಂಕಾ ಪಕ್ಕಾ ಪ್ಲಾನ್‌ ಹೇಗಿತ್ತು..?

February 15, 2026
Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

February 15, 2026
ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

February 15, 2026
Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ  ಮಗು ಸಾ***

Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ ಮಗು ಸಾ***

February 15, 2026
Next Post
ಕರ್ನಾಟಕದ ಜನರ ಪಾಲಿಗೆ ಇದಕ್ಕಿಂತ ದೌರ್ಭಾಗ್ಯದ ಸಂಗತಿ ಮತ್ತೊಂದಿದೆಯೇ?

ಕರ್ನಾಟಕದ ಜನರ ಪಾಲಿಗೆ ಇದಕ್ಕಿಂತ ದೌರ್ಭಾಗ್ಯದ ಸಂಗತಿ ಮತ್ತೊಂದಿದೆಯೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada