ಲಸಿಕೆ ಉತ್ಪಾದನೆ: ಪಿಎಸ್ ಯು ಅವಕಾಶ ಅಭಾವ ನೀಗುವ ಪ್ರಾಮಾಣಿಕ ಯತ್ನವೇ..?

ಕೇಂದ್ರ ಸರ್ಕಾರ ಮೂರು ಸರ್ಕಾರಿ ಸ್ವಾಮ್ಯದ ಸಂಸ್ಥೆ(ಪಿಎಸ್ ಯು)ಗಳಿಗೆ ಲಸಿಕೆ ಉತ್ಪಾದನೆಯ ಲೈಸನ್ಸ್‌ ಪಡೆಯುವ ಸ್ಪರ್ಧೆಯಲ್ಲಿ(ಬಿಡ್ಡಿಂಗ್) ಭಾಗವಹಿಸಲು ಅನುಮತಿ ನೀಡಿದೆ..! ಅಂದರೆ, ಈ ಸಂಸ್ಥೆಗಳಿಗೆ ಲಸಿಕೆ ಉತ್ಪಾದಿಸುವ ಮೂಲಭೂತ ತಾಂತ್ರಿಕತೆ ಮೂಲ ಸೌಲಭ್ಯ ಮತ್ತು ಮಾನವ ಸಂಪನ್ಮೂಲ ಇದೆಯೆಂದರ್ಥ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಸ್ವಾಮ್ಯದ ಮುಂಬೈ ಮೂಲದ ಹಫ್ ಕೈನ್ ಬಯೋ ಫಾರ್ಮಸ್ಯುಟಿಕಲ್ಸ್ ಕಾರ್ಪೊರೇಷನ್, ನ್ಯಾಷನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡ್ ಗೆ ಸೇರಿದ ಹೈದರಾಬಾದಿನ ಇಂಡಿಯನ್ ಇಮ್ಯೂನಾಲಾಜಿಕಲ್ಸ್ ಲಿಮಿಟೆಡ್(ಐಐಎಲ್) ಮತ್ತು ಬುಲಂದಷಹರದ ಭಾರತ್ ಇಮ್ಯೂನಾಲಾಜಿಕಲ್ಸ್ ಅಂಡ್ ಬಯೊಲಾಜಿಕಲ್ಸ್ ಲಿಮಿಟೆಡ್ ಕಂಪನಿಗಳನ್ನು ಸರ್ಕಾರ, ಸದ್ಯ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೋವಾಕ್ಸಿನ್ ಲಸಿಕೆಯ ಹೆಚ್ಚುವರಿ ಉತ್ಪಾದನೆಗೆ ಬಳಸಿಕೊಳ್ಳಲು ಸರ್ಕಾರ ಯೋಚಿಸಿದೆ. ಈ ಸಂಸ್ಥೆಗಳು ಆರು ತಿಂಗಳೊಳಗೆ ಉತ್ಪಾದನೆ ಆರಂಭಿಸಬೇಕು ಎಂಬ ಶರತ್ತನ್ನು ಸರ್ಕಾರ ಹಾಕಿದೆ. ಆದರೆ ಈ ಸಂಸ್ಥೆಗಳು ಉತ್ಪಾದನೆ ಆರಂಭಿಸಲು ತಮಗೆ ಒಂದು ವರ್ಷ ಬೇಕು ಎಂದಿವೆ. ಮೂಲತಃ ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ದಕ್ಷವಾಗಿ ಕಾರ್ಯ ನಿರ್ವಹಿಸದೇ ಇರುವಂತೆ ಅವುಗಳ ಬಂಡವಾಳ, ವ್ಯವಹಾರ ಎಲ್ಲವನ್ನೂ ಮೋದಿ ಸರ್ಕಾರ ಸತತವಾಗಿ ಅದುಮುತ್ತಾ ಅವುಗಳು ಅಸಹಾಯಕವಾಗುವಂತೆ ಮಾಡಿ, ಆ ಅಸಹಾಯಕತೆಯನ್ನೇ ಹೈ ಲೈಟ್‌ ಮಾಡಿ ಖಾಸಗಿಯವರಿಗೆ ಮಣೆ ಹಾಕುವ ಕುತಂತ್ರವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ. ರಾಫೆಲ್‌ ನಂಥಾ ಡೀಲಿನಲ್ಲಿ ಅತ್ಯುತ್ತಮ ಟ್ರಾಕ್‌ ರೆಕಾರ್ಡ್‌ ಹೊಂದಿದ್ದ ಹೆಚ್.ಎ.ಎಲ್. ಸಂಸ್ಥೆಯನ್ನು ಕೈ ಬಿಟ್ಟು ಈ ಕ್ಷೇತ್ರದ ಓನಾಮವೂ ಇಲ್ಲದ ದಿವಾಳಿಯಂಚಿಗೆ ಬಂದು ನಿಂತಿರುವ ಅನಿಲ್‌ ಅಂಬಾನಿಯ ಸಂಸ್ಥೆಗೆ … Continue reading ಲಸಿಕೆ ಉತ್ಪಾದನೆ: ಪಿಎಸ್ ಯು ಅವಕಾಶ ಅಭಾವ ನೀಗುವ ಪ್ರಾಮಾಣಿಕ ಯತ್ನವೇ..?