ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಮಾರಿಗುಡಿ ಸಮೀಪ ಅವರ ಕಾರನ್ನು ಅಡ್ಡಗಟ್ಟಿದಂತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಸಂಬಂಧ ಅವರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಗೋಡು ತಿಮ್ಮಪ್ಪ ಫೌಂಡೇಶನ್ ವತಿಯಿಂದ ಸಾಗರ ತಾಲೂಕಿನ ವಿವಿಧೆಡೆ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ. ಮೇ 2ರಂದು ತ್ಯಾಗರ್ತಿಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಡಾ.ರಾಜನಂದಿನಿ ಕಾಗೋಡು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ವೇಳೆ ಸಾಗರಕ್ಕೆ ಹಿಂತಿರುಗುತ್ತಿದ್ದಾಗ ಯುವಕನೊಬ್ಬ ಡಾ. ರಾಜನಂದಿ ಅವರ ಕಾರು ಅಡ್ಡಗಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧಿ ಅವರ ಕಾರು ಚಾಲಕ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಡಾ.ರಾಜನಂದಿನಿ ಅವರು ತಮ್ಮ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡಾ.ರಾಜನಂದಿನಿ ಅವರ ಕಾರಿನಲ್ಲಿ ಫೌಂಡೇಶನ್‌ನ ಇತರೆ ಪ್ರಮುಖರು ಸಾಗರಕ್ಕೆ ತೆರಳುತ್ತಿದ್ದರು. ತ್ಯಾಗರ್ತಿಯ ಮಾರಿಗುಡಿ ಸಮೀಪ ಮಂಜು ಎಂಬಾತ ಡಾ. ರಾಜನಂದಿನಿ ಅವರ ಕಾಡು ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದಾನೆ.
ಈ ಬಾರಿ ಕಾಂಗ್ರೆಸ್ ನಿಂದ ಸಾಗರ ವಿಧಾನಸಭಾ ಕ್ಷೇತ್ರಕ್ಕೆ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿಗೆ ಸಿಗಲಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಕ್ಷೇತ್ರದಲ್ಲಿ ಜನರ ಸಂಪರ್ಕವನ್ನು ಬೆಳೆಸೋ ನಿಟ್ಟಿನಲ್ಲಿ, ನಿರಂತರವಾಗಿ ಕ್ಷೇತ್ರ ಪ್ರವಾಸ, ವಿವಿಧ ಕಾರ್ಯಕ್ರಮದಲ್ಲಿ ಡಾ.ರಾಜನಂದಿನಿ ಅವರು ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಬೆದರಿಗೆ ಬಂದಿರಬಹುದು ಎಂಬ ಸಂಸಯ ಎಲ್ಕರಲ್ಲೂ ಮೂಡಿದೆ.