ಲಿವ್-ಇನ್-ರಿಲೇಷನ್‌ಶಿಪ್‌ನಲ್ಲಿದ್ದ ಪ್ರೇಯಸಿ ಶ್ರದ್ದಾ ವಾಲ್ಕರ್(26) ಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ ಉತ್ತರಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಒಂದು ಬೆಳಕಿಗೆ ಬಂದಿದ್ದು ಜನರು ಈಗೂ ಊಂಟೆ ಎಂದು ಆಶ್ಚರ್ಯಪಡುತ್ತಿದ್ದಾರೆ.
ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಸಾಹಗೋ ಪಶ್ಚಿಮ್ ಜಿಲ್ಲೆಯ್ಲಲಿ ಸತಿ-ಪತಿ ನಡುವೆ ಕಲಹವಾಗಿದ್ದು ಸಿಟ್ಟಿಗೆದ್ದ ಪತ್ನಿ ಪತಿಯ ಕೊಲೆ ಮಾಡಿ ನಂತರ ಆತನ ಶವದ ಪಕ್ಕದಲ್ಲೇ ಮಲಗಿರುವ ಘಟನೆ ನಡೆದಿದೆ.
ಅತುಲ್ ಸಾಹಗೋ ಮೃತ ದುರ್ದೈವಿ, ಅನು ಪತಿಯನ್ನು ಕೊಲೆ ಮಾಡಿದ ಪತ್ನಿ ಎಂದು ತಿಳಿದು ಬಂದಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಪ್ರತಿನಿತ್ಯ ಕುಡಿದು ಮನೆಗೆ ಬಂದಿ ಹೆಂಡತಿ ಮೇಲೆ ಗಲಾಟೆ ಮಾಡುತ್ತಿದ್ದ ಎಂದು ವರದಿಯಾಗಿದೆ.

ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಆತನ ಪತ್ನಿ ಅನು ನಡುವೆ ಗಲಾಟೆ ಏರ್ಪಟ್ಟಿದೆ ಈ ವೇಳೆ ಪತ್ನಿ ಪತಿಯ ತಲೆಗೆ ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಿ ನಂತರ ತನ್ನ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಾಳೆ. ಕೆಲಸ ಮುಗಿಸಿ ವಾಪಸ್ ಮನೆಗೆ ಬಂದ ನಂತರ ಮಕ್ಕಳಿಗೆ ಅಡುಗೆ ಮಾಡಿ ಊಟ ಬಡಿಸಿ ಅಪ್ಪ ಬಂದರೆ ತನ್ನನ್ನು ಎಬ್ಬಿಸದಂತೆ ಮಕ್ಕಳಿಗೆ ಹೇಳಿ ಮಲಗಿದ್ದಾಳೆ.
ಕೊಲೆಯಾದ ಮಾರನೇ ದಿನ ಬೆಳ್ಳಗ್ಗೆ ತನ್ನ ಪತಿಯ ಶವವನ್ನ ಮನೆಯ ಗೇಟ್ ಬಳಿ ಎಳೆದು ಹಾಕಿ ತನ್ನಗೆ ಏನು ನಡೆದಿಲ್ಲ ಎಂಬುವವಳಂತೆ ತನ್ನ ಪತಿ ರಾತ್ರಿ ಕುಡಿದು ಬಂದು ಬಿದ್ದು ಸತ್ತಿದ್ದಾನೆಂದು ನೆರೆ ಹೊರೆಯವರನು ನಂಬಿಸಿದ್ದಾಳೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ದೇಹವನ್ನ ಪೋಸ್ಟ್‌ಮಾರ್ಟಮ್ಗೆ ಕಳುಹಿಸಿದ್ದಾರೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದಿದ್ದರಿಂದ ಸಾವಾಗಿದೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ಆರೋಪಿ ಪತ್ನಿಯನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.