ಬೆಂಗಳೂರು: ಲಿಫ್ಟ್‌ನಲ್ಲಿ ನಾಯಿ ಮರಿಯನ್ನು ನೆಲಕ್ಕೆ ಬಡಿದು ಭೀಕರವಾಗಿ ಕೊಲೆ ಮಾಡಿದ ಮನೆ ಕೆಲಸದ ಮಹಿಳೆಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಪುಷ್ಪಲತಾ ಬಂಧಿತ ಆರೋಪಿ.

ಕೆ.ಆರ್ ರಾಶಿ ಎನ್ನುವವರಿಗೆ ಸೇರಿದ ಗೂಫಿ ಎನ್ನುವ ಹೆಸರಿನ ನಾಯಿ ಮರಿಯನ್ನು ಹಾಗೂ ಅದರ ಜೊತೆ ಇನ್ನೊಂದು ನಾಯಿ ಮರಿಯನ್ನು ಆರೋಪಿ ವಾಕಿಂಗ್ ಕರೆದುಕೊಂಡು ಹೋಗಿದ್ದಾಳೆ.

ಬಳಿಕ ವಾಪಸ್ ಬರುವಾಗ ಲಿಫ್ಟಿನಲ್ಲಿ ಇದ್ದಕ್ಕಿದ್ದಂತೆ ಪುಷ್ಪಲತಾ ನಾಯಿ ಮರಿಯನ್ನು ಏಕಾಏಕಿ ನೆಲಕ್ಕೆ ಬಡಿದು ಭೀಕರವಾಗಿ ಕೊಂದು ಬಳಿಕ ಎಳೆದುಕೊಂಡೇ ಮನೆಗೆ ಹೋಗಿದ್ದಾಳೆ. ಅಕ್ಟೋಬರ್ 31ರಂದು ಕೃತ್ಯ ನಡೆದಿತ್ತು.

ಗೂಫಿ ಸಾವಿನ ಬಗ್ಗೆ ಅನುಮಾನಗೊಂಡ ರಾಶಿ ಅಪಾರ್ಟ್‌ಮೆಂಟ್ ಲಿಫ್ಟಿನ ಸಿಸಿಟಿವಿ ಪರಿಶೀಲಿಸಿದ್ದು, ಈ ವೇಳೆ ಮನೆಕೆಲಸದಾಕೆ ಪುಷ್ಪಲತಾ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ರಾಶಿ ದೂರು ದಾಖಲಿಸಿದ್ದು, ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.












